ಒಂದು ತಿಂಗಳಿಗೂ ಹೆಚ್ಚು ಸಮಯ ನಡೆದ 2025 ರ ಐಸಿಸಿ ಮಹಿಳೆ ಕೊನೆಗೂ ಮುಕ್ತಾಯಗೊಂಡಿತು. ನವಿ ಮುಂಬೈನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ಫೈನಲ್ ಪಂದ್ಯ ಮಹಿಳಾ ಕ್ರಿಕೆಟ್‌ಗೆ ಹೊಸ ಚಾಂಪಿಯನ್ ಸಿಕ್ಕಿದೆ. ಅತಿಥೇಯ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿದೆ. ತಂಡದ ಈ ಸಾಧನೆಗೆ ಇಡೀ ಭಾರತಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದೇ ಫೈನಲ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಸೋತ ದಕ್ಷಿಣ ಆಫ್ರಿಕಾ ತಂಡದ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಆದಾಗ್ಯೂ ದಕ್ಷಿಣ ಆಫ್ರಿಕಾ ತಂಡದ ಸೋಲಿಗೆ ದೇಶವನ್ನು ದೂಷಿಸಿರುವ ದಕ್ಷಿಣ ಆಫ್ರಿಕಾದ ನಟಿ ಮತ್ತು ಬರಹಗಾರ್ತಿ ತಂಜಾ, ಆಫ್ರಿಕಾದ ಸ್ಟಾರ್ ಕ್ರಿಕೆಟಿಗರು ಮತ್ತು ಅಧಿಕಾರಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹರಿಬಿಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ ಅವರು, ‘ಭಾರತ ನೀವು ಈ ಬಾರಿ ಗೆದ್ದಿದ್ದೀರಿ. ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಆದರೆ ಅದಕ್ಕೂ ಮೊದಲು ನಾನು ಏಕೆ ನಿಮ್ಮನ್ನು ಅಭಿನಂದಿಸಲು ಹೇಳುತ್ತೇನೆ. ಅದಕ್ಕೆ ಕಾರಣ ನೀವೇ. ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿವಿಎಸ್ ಲಕ್ಷ್ಮಣ್‌ರಂತಹ ಮಾಜಿ ಲೆಜೆಂಡರಿ ಆಟಗಾರರು ನಿಮ್ಮನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ ದಕ್ಷಿಣ ಆಫ್ರಿಕಾದಿಂದ ಯಾರು ಬಂದಿದ್ದರು? ಯಾರೂ ಇಲ್ಲ!.
ನಮ್ಮ ಮಾಜಿ ಕ್ರಿಕೆಟಿಗರು ಎಲ್ಲಿದ್ದರು, ಅವರನ್ನು ನಾವು ತುಂಬಾ ಪ್ರೀತಿಸುತ್ತೇವೆ.. ಬಹುಶಃ ಈ ಟೂರ್ನಮೆಂಟ್ ಅವರಿಗೆ ಸಾಕಷ್ಟು ಹೈಪ್ರೊಫೈಲ್ ಆಗಿರಲಿಲ್ಲ. ಇಲ್ಲ ಅವರ್ಯಾರು ಬರಲಿಲ್ಲ. ನಮ್ಮ ಕ್ರೀಡಾ ಸಚಿವರು ಕೂಡ ಶಾಲೆಗೆ ಬಂದಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ ನಮ್ಮ ಹುಡುಗಿಯರು ಕಷ್ಟಪಟ್ಟು ಕೆಲಸ ಮಾಡಿದರು, ಅವರು ತುಂಬಾ ಚೆನ್ನಾಗಿ ಆಡಿದರು. ಆದರೆ ಯಾರೂ ಅವರನ್ನು ಬೆಂಬಲಿಸದಿದ್ದರು ಅವರಿಗೆ ಹೇಗನಿಸಬೇಡ? ಮೇಲೆ
ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ