Numerology Horoscope 5th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 5ರ ದಿನಭವಿಷ್ಯ

Numerology Horoscope 5th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 5ರ ದಿನಭವಿಷ್ಯ


Numerology Horoscope 5th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 5ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಕಾರ್ಯ ನಿರ್ವಹಿಸುವವರು, ಸಾರ್ವಜನಿಕ ಸಂಪರ್ಕ ಮಾಧ್ಯಮ ಅಧಿಕಾರಿಗಳು ಆಗಿರುವವರು ಈ ದಿನ ಬಿಡುವಿಲ್ಲದಷ್ಟು ಕೆಲಸಗಳನ್ನು ಮೈ ಮೇಲೆ ಹಾಕಿ ಕೊಳ್ಳುತ್ತಾರೆ. ಒಬ್ಬ ವ್ಯಕ್ತಿ ಅಥವಾ ಒಂದೇ ಯೋಜನೆ ನೆಚ್ಚಿಕೊಂಡು ಯಾವುದಕ್ಕೂ ಮುನ್ನುಗ್ಗಬಾರದು ಎಂದು ತೀರ್ಮಾನ ಕೈಗೊಳ್ಳುವಂಥ ಬೆಳವಣಿಗೆಗಳು ಆಗಲಿವೆ. ನಿಮ್ಮ ಪರಿಚಿತ ವರ್ತನೆಯಿಂದ ಏಕ ಕಾಲಕ್ಕೆ ಅಚ್ಚರಿ ಹಾಗೂ ಗಾಬರಿ ಉಂಟಾಗಲಿದೆ. ನಾನು ಹಾಗೆ ಹೇಳಿದ್ದೆ ಅಲ್ಲ, ನೀವು ಕೇಳಿಸಿಕೊಂಡಿದ್ದೇ ತಪ್ಪಾಗಿದೆ ಇತ್ಯಾದಿಯಾಗಿ ವಾದ ಹೂಡಿ, ನಿಮ್ಮ ಬಾಯಿ ಮುಚ್ಚಿಸುವುದಕ್ಕೆ ಮುಂದಾಗುತ್ತಾರೆ. ನೀವು ಮಾಡಿದ ಸಾಲವನ್ನು ತೀರಿಸಲೇ ಬೇಕು ಎಂಬ ಒತ್ತಡಕ್ಕೆ ನಿಮ್ಮಲ್ಲಿ ಕೆಲವರು ಸಿಲುಕಿ ಕೊಳ್ಳಲಿದ್ದೀರಿ. ಮಕ್ಕಳ ಸಲುವಾಗಿ ಬಟ್ಟೆ, ಶೂ, ವಾಚ್ ಇಂಥವುಗಳನ್ನು ಖರೀದಿಸುವ ಸನ್ನಿವೇಶ ಎದುರಾಗಲಿದೆ. ಇದು ನಿಮ್ಮ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವನ್ನು ಸಹ ತರಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸ್ವತಂತ್ರವಾಗಿ ಆಲೋಚಿಸಿ, ಯೋಜನೆ ರೂಪಿಸಿ ಹಣಕಾಸಿಗೆ ಪ್ರಯತ್ನಿಸುತ್ತಿರುವ ಪ್ರಾಜೆಕ್ಟ್ ಒಂದನ್ನು ಯಾರದೋ ಮಾತು ಕೇಳಿ ನಿಲ್ಲಿಸಬೇಕಾದ ಪರಿಸ್ಥಿತಿ ಒದಗಲಿದೆ. ನಿಮ್ಮ ಬಳಿ ಇರುವ ಇನ್ವೆಸ್ಟರ್ಸ್ ಸಹ ಇದಕ್ಕೆ ಸಹಾಯ ಮಾಡಲಾರರು ಎಂದು ಬಲವಾಗಿ ಅನಿಸಿ, ಮನಸ್ಸಿಗೆ ಬೇಸರ ಕಾಡಲಿದೆ. ನಿಮ್ಮಲ್ಲಿ ಕೆಲವರಿಗೆ ಕಾಲಿನ ಮೀನಖಂಡದ ವಿಪರೀತ ನೋವು ಆತಂಕಕ್ಕೆ ಕಾರಣ ಆಗಲಿದೆ. ವೇರಿಕೋಸ್ ಥರದ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ದಿನ ಕೆಲವು ಸಮಯವಾದರೂ ಏಕಾಂಗಿಯಾಗಿ ಸಮಯ ಕಳೆಯಬೇಕು ಎಂದು ತುಂಬ ಬಲವಾಗಿ ಅನಿಸಲಿದೆ. ನಿಮ್ಮಲ್ಲಿ ಕೆಲವು ಒಡವೆಗಳನ್ನು ಮಾರಾಟ ಮಾಡಿ, ಅದನ್ನು ಬೇರೆ ಕಡೆ ಹೂಡಿಕೆ ಮಾಡಬೇಕು ಎಂದುಕೊಳ್ಳುವ ಸಾಧ್ಯತೆಗಳಿವೆ. ಅದರಲ್ಲೂ ಇಂಟ್ರಾ ಡೇ ಷೇರು ವ್ಯವಹಾರಗಳನ್ನು ಮಾಡಬೇಕು.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹೊಸ ವ್ಯಾಪಾರ- ವ್ಯವಹಾರ ಆರಂಭಿಸಬೇಕು ಎಂದಿರುವವರಿಗೆ ಸರಿಯಾದ ಮಾರ್ಗದರ್ಶನ, ನೆರವು ದೊರೆಯಲಿದೆ. ಇಲ್ಲಿಯ ತನಕ ಕಾಡುತ್ತಿದ್ದ ದ್ವಂದ್ವ- ಗೊಂದಲಗಳು ನಿವಾರಣೆ ಆಗಲಿದೆ. ದೂರವಾಣಿ ಅಥವಾ ಸಂಬಂಧಿಗಳಿಗೆ ಹಣಕಾಸಿನ ನೆರವಿನ ತುರ್ತಾಗಿ ಇರಲಿದೆ, ಅವರಿಗೆ ಸಹಾಯ ಮಾಡಬೇಕಾಗಿದೆ. ಒಂದು ವೇಳೆ ನಿಮ್ಮಿಂದ ಆಗದಿದ್ದರೂ ಪರಿಚಯಸ್ಥರ ಮೂಲಕ ಪ್ರಯತ್ನ ಮಾಡಿದ್ದೇನೆ. ಉದ್ಯೋಗಸ್ಥರಿಗೆ ಕೆಲಸದಲ್ಲಿ ಸ್ವಲ್ಪ ಮಟ್ಟಿಗಾದರೂ ನಿರಾಸಕ್ತಿ ಕಾಡಲಿದೆ. ಆಮೇಲೆ ಮಾಡಿದರಾಯಿತು, ನೋಡಿದರಾಯಿತು ಎಂಬ ಭಾವನೆ ಮೂಡಲಿದೆ. ನಿಮ್ಮಲ್ಲಿ ಕೆಲವರು ದೂರದವರಿಗೆ ಪ್ರಯಾಣ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಯಾವ ವ್ಯಕ್ತಿಗಳನ್ನು ಇನ್ನು ಮೇಲೆ ಇವರಿಂದ ಉಪಯೋಗ ಆಗಲಿಕ್ಕಿಲ್ಲ ಎಂದು ಅಂದುಕೊಂಡು, ಅಂತರ ಕಾಯ್ದುಕೊಳ್ಳಲು ಆರಂಭಿಸಿರುತ್ತೀರೋ ಅವರು ನಿಮಗೆ ಸಹಾಯ ಮಾಡಲಿದ್ದಾರೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ದೇಹಾರೋಗ್ಯ ಯಾಕೋ ಸರಿಯಿಲ್ಲ ಎಂದೆನಿಸುವುದಕ್ಕೆ ಶುರುವಾಗಲಿದೆ. ಮುಖ್ಯವಾಗಿ ಆಸಕ್ತಿ ಇಲ್ಲದಿರುವುದು, ಸುಸ್ತು, ಬೇಸರ, ಏಕಾಗ್ರತೆ ಸಾಧ್ಯವಾಗದಿರುವುದು ಇವೆಲ್ಲ ಸೇರಿ ಉತ್ಸಾಹ ಕಡಿಮೆ ಆಗಲಿದೆ. ಬಾಯಿ ರುಚಿಗೆ ಬಿದ್ದು, ಕರಿದ ಪದಾರ್ಥಗಳು- ಮಸಾಲೆ ಪದಾರ್ಥಗಳನ್ನು ಜಾಸ್ತಿ ಸೇವನೆ ಮಾಡುವುದಕ್ಕೆ ಹೋಗಬೇಡಿ. ನೀವು ಅನಾರೋಗ್ಯ ಸಮಸ್ಯೆ ಈ ಹಿಂದೆ ಅನುಭವಿಸಿ, ಅದರ ಫಾಲೋ ಪರೀಕ್ಷೆಗಳು ಅಥವಾ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುತ್ತಾ ಇದ್ದೀರಿ ಅಂತಾದರಂತೂ ಯಾವುದಕ್ಕೂ ಕಾರಣವಾಗಬಾರದು. ಆತ್ಮೀಯರು ಎಂಬ ಕಾರಣಕ್ಕೆ ನೀವು ಹೇಳಿರುವ ರಹಸ್ಯವೊಂದು ನೀವೇ ಅದನ್ನು ಹೇಳಿದ್ದು ಎಂಬ ಪ್ರಚಾರವಾಗಿ, ಆ ನಂತರ ನಿಮ್ಮ ಬಗ್ಗೆ ಒಂದು ನಕಾರಾತ್ಮಕ ಅಭಿಪ್ರಾಯ ಮೂಡಲು ಕಾರಣ ಆಗಬಹುದು. ಆದರೆ ಇದರಿಂದ ತೀರಾ ವಿಚಲಿತರಾಗುವ ಅಗತ್ಯ ಇಲ್ಲ. ಏಕೆಂದರೆ ಸಮಸ್ಯೆ ಬಗೆಹರಿಯುವ ಮಾರ್ಗವೂ ಸಿಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವು ಹೇಳಿದ್ದು ಯಾವುದೋ ಒಂದು ಕೆಲಸ ಆಗಿಲ್ಲ ಎಂಬುದು ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಳ್ಳುವಂತೆ ಆಗಲಿದೆ. ಅದರಲ್ಲೂ ಉದ್ಯೋಗ ಸ್ಥಳದಲ್ಲಿ ಸಾಮಾನ್ಯವಾಗಿ ಅಷ್ಟು ಕೋಪ ಮಾಡಿಕೊಳ್ಳುವವರು ಈ ದಿನ ನೀವೇವೇನೋ ಎಂದು ಕೂಗಾಟ- ಕಿರುಚಾಟ ಮಾಡುವ ಸಾಧ್ಯತೆ ಇದೆ. ಯಾವುದಕ್ಕೂ ಉದ್ವೇಗದಿಂದ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರ ಮನೆಯಲ್ಲಿ ನೀರಿಗೆ ಸಂಬಂಧಿಸಿದ ತೊಂದರೆ- ತಾಪತ್ರಯಗಳು ಕಾಣಿಸಿಕೊಳ್ಳಬಹುದು. ಅಂದುಕೊಂಡ ಮೊತ್ತದೊಳಗೆ ಅದರ ರಿಪೇರಿ ಮುಗಿಯಲ್ಲ ಎಂಬುದು ಸಹ ಒಂದು ಬಗೆಯ ಆತಂಕವನ್ನು ಬಿತ್ತಲಿದೆ. ಮಧ್ಯಾಹ್ನದ ನಂತರ ಆಪ್ತರು- ನಿಮಗೆ ಭೇಟಿ ಆಗುವ ಬಗ್ಗೆ ನಿಮಗೆ ಒಂದು ಬಗೆಯ ಸಮಾಧಾನ ಮನಸ್ಸಿಗೆ ಮೂಡಲಿದೆ. ಒಂದು ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಲು ಪ್ರಯತ್ನಿಸಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮ್ಮ ಆಸಕ್ತಿಗೆ ಪೂರಕವಾಗುವಂತೆ ಕೆಲವು ಸ್ನೇಹಿತರು ದೊರೆಯಲಿದ್ದಾರೆ. ಗುಡ್ಡ, ಕಾಡು ಪ್ರದೇಶಗಳಿಗೆ ಪ್ರವಾಸ ಹೋಗುವ ಸಾಧ್ಯತೆಗಳಿವೆ. ನಿಮಗೆ ಸರ್ಕಾರದಿಂದ ಬರಬೇಕಾದ ಹಣ ಇದ್ದಲ್ಲಿ ಅದು ಕೈ ಸೇರುವ ಅವಕಾಶಗಳು ಇವೆ. ಆದಾಯ ತೆರಿಗೆ, ಜಿಎಸ್ ಟಿ ಅಥವಾ ಬೇರೆ ಯಾವುದಾದರೂ ರೀ ಫಂಡ್ ಬರಬೇಕಿದ್ದರೆ ಅದು ಬರಲಿದೆ. ಷೇರು- ಮ್ಯೂಚುವಲ್ ಫಂಡ್ ಗಳ ಹೂಡಿಕೆಗೆ ಉಪಯುಕ್ತ ಎನಿಸುವ ಸಲಹೆಗಳನ್ನು ನೀಡುವ ವ್ಯಕ್ತಿಯೊಬ್ಬರ ಪರಿಚಯ ಆಗುವ ಸಾಧ್ಯತೆಯಿದೆ, ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ಬಾಡಿಗೆ ಮನೆಯಲ್ಲಿ ವಾಸ ಇದ್ದು, ಅದನ್ನು ಬದಲಾಯಿಸಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಮನಸ್ಸಿಗೆ ಒಪ್ಪುವಂಥ ಸ್ಥಳದಲ್ಲಿ ಮನೆ ಸಿಗುವಂಥ ಯೋಗವಿದೆ. ಆರೋಗ್ಯಕರ ಅಭ್ಯಾಸಗಳನ್ನು ಪ್ರಾರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಎಲ್ಲವನ್ನೂ ಸಾವಧಾನದಿಂದ ಗುರುತಿಸುತ್ತೀರಿ, ಆ ನಂತರವಷ್ಟೇ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನೀವು ಇರುತ್ತೀರಿ. ನಿಮ್ಮಲ್ಲಿ ಕೆಲವು ಉನ್ನತ ವಿದ್ಯಾಭ್ಯಾಸಕ್ಕೆ ತೆರಳುವ ಅಥವಾ ಒಂದು ವೇಳೆ ಅರ್ಧಕ್ಕೆ ನಿಲ್ಲಿಸಿದ್ದಲ್ಲಿ ಅದನ್ನು ಮುಂದುವರಿಸುವ ಸಾಧ್ಯತೆಗಳಿವೆ. ಆಹಾರ ಪಥ್ಯದ ವಿಚಾರವಾಗಿ ಸಂಬಂಧಪಟ್ಟ ವ್ಯಕ್ತಿಗಳು, ವೃತ್ತಿಪರರಿಂದ ಸಲಹೆ- ಸೂಚನೆಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಯಾರಿಗೆ ನೀವು ನೀಡಿದಿರಿ, ಅವರು ಅದನ್ನು ಹಿಂತಿರುಗಿಸುವುದಿಲ್ಲ ಎಂದು ಹೇಳಿರುವ ಸಮಯ ಸಹ ಮೀರಿರುತ್ತಾದೋ ಅಂಥವರ ಬಳಿ ಮುಲಾಜಿಲ್ಲದೆ ವಸೂಲಿ ಮಾಡಲಾಗುವುದು ಎಂದು ನೀವು ಇರುತ್ತೀರಿ. ಇನ್ನು ಮುಂದೆ ಮುಂದುವರಿಯಲಾರದು ಎಂದುಕೊಂಡಿದ್ದ ಕೆಲವು ಕೆಲಸಗಳು- ಕಾರ್ಯಗಳು ಧೀರನೇ ವೇಗದಲ್ಲಿ ಇರುತ್ತವೆ, ಅಚ್ಚರಿ ಆಗುವ ನಿರೀಕ್ಷೆ ಮೂಡುತ್ತದೆ. ಅಲ್ಲಿ ಮನೆ ಕಟ್ಟುವ ತೀರ್ಮಾನ ಮಾಡಲಿದ್ದೇವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಶುಭ ಸುದ್ದಿ ಕೇಳುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ದೂರದವರಿಗೆ ಪ್ರಯಾಣ ಮಾಡಿ, ಈಗಷ್ಟೇ ಬಂದಿದ್ದೀನಿ ಎನ್ನುವವರು ಮತ್ತೆ ಪ್ರಯಾಣ ಮಾಡಬೇಕಾದ ಅನಿವಾರ್ಯ ಉದ್ಭವ ಆಗಲಿದೆ. ವಿದೇಶಗಳಲ್ಲಿ ಉದ್ಯೋಗ ಪ್ರಯತ್ನ ಮಾಡುತ್ತಿರುವವರಿಗೆ ಹಾಗೂ ಇಂಟರ್ ವ್ಯೂ ಕೊಟ್ಟಿರುವವರಿಗೆ ಪಾಸಿಟಿವ್ ಆದಂಥ ಪ್ರತಿಕ್ರಿಯೆ ದೊರೆಯಲಿದೆ, ಆಶಾದಾಯಕ ಭರವಸೆ ಜಾಸ್ತಿ ಆಗಲಿದೆ. ಬ್ಯಾಂಕ್ ನಲ್ಲಿ ಎಫ್ ಡಿ ಮಾಡಿದೆ ಅಥವಾ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದಲ್ಲಿ ಹಣವನ್ನು ಹಿಂತೆಗೆದುಕೊಳ್ಳುತ್ತದೆ, ಈಗ ನಿಮಗಿರುವ ಸಾಲವನ್ನು ಚುಕ್ತಾ ಮಾಡುವ ಕುರಿತು ನಿರ್ಧಾರ ಮಾಡಲಾಗುತ್ತಿದೆ. ನಿಮ್ಮಲ್ಲಿ ಯಾರು ಫ್ರೀ ಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ, ಅಂಥವರಿಗೆ ದೊಡ್ಡ ಮಟ್ಟದ ಹಾಗೂ ದೀರ್ಘಾವಧಿಯ ಆರ್ಡರ್ ದೊರೆಯುವ ಸುಳಿವು ಸಿಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಹಳೇ ನೆನಪುಗಳು ವಿಪರೀತವಾಗಿ ಕಾಡಲಿವೆ. ನಿಮ್ಮ ಜೊತೆಗೆ ಈ ವ್ಯಕ್ತಿ ಹೀಗೆ ನಡೆದುಕೊಳ್ಳಲಾರರು ಅಂದುಕೊಂಡಿದ್ದವರು ಸಹ ನಿಮಗೆ ಮುಜುಗರ ಆಗುವಂಥ ಮಾತನಾಡುವುದೋ ಅಥವಾ ವರ್ತನೆ ತೋರುವುದೋ ಮಾಡುವುದರಿಂದ ಮನಸ್ಸು ಸ್ವಲ್ಪ ಮಟ್ಟಿಗೆ ಕಹಿ ಆಗಲಿದೆ. ನಿಮ್ಮನ್ನು ಕಂಡರೆ ಆಗುವುದಿಲ್ಲ ಎಂಬಂತೆ ಇರುವ ವ್ಯಕ್ತಿಯೊಬ್ಬರ ಚಿತಾವಣೆಯಿಂದ ಹೀಗೆ ಆಗುತ್ತಿದೆ ಎಂಬುದು ಗೊತ್ತಾದ ಮೇಲೆ, ನೀವು ಸಹ ಗೊಂದಲ ಪರಿಹಾರ ಮಾಡುವುದರೊಂದಿಗೆ ಎಲ್ಲವೂ ತಿಳಿಯಾಗಿ, ಮನಸ್ಸು ಹಗುರವಾಗುತ್ತದೆ. ನಿಮ್ಮ ವಿವಾಹದಲ್ಲಿ ವಯಸ್ಕರಿದ್ದು, ಸೂಕ್ತ ಸಂಬಂಧಕ್ಕಾಗಿ ಹುಡುಕಾಟ ನಡೆಸಿದ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯಲಿದೆ. ಕೆಲವು ದಿನಗಳ ಮಟ್ಟಿಗೆ ಬೇರೆ ಸ್ಥಳಕ್ಕೆ ಹೋಗಿ, ಕೆಲಸ ಮಾಡಬೇಕಾಗಲಿದೆ ಎಂಬ ಸೂಚನೆಯನ್ನು ನಿಮ್ಮಲ್ಲಿ ಕೆಲವರಿಗೆ ಮೇಲಧಿಕಾರಿಗಳು ನೀಡುವ ಸಾಧ್ಯತೆ ಇದೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *