Headlines

‘ಬ್ರಹ್ಮಕಲಶ’ ಹಾಡಿನಲ್ಲಿ ವಾಟರ್ ಕ್ಯಾನ್ ಇದೆ ಎಂದು ಗೊತ್ತಾಗಲು ಕಾರಣ ಆಗಿದ್ದು ಆ ವ್ಯಕ್ತಿ

‘ಬ್ರಹ್ಮಕಲಶ’ ಹಾಡಿನಲ್ಲಿ ವಾಟರ್ ಕ್ಯಾನ್ ಇದೆ ಎಂದು ಗೊತ್ತಾಗಲು ಕಾರಣ ಆಗಿದ್ದು ಆ ವ್ಯಕ್ತಿ


‘ಕಾಂತಾರ: ಚಾಪ್ಟರ್ 1’ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಆ ಬಳಿಕ ಸಿನಿಮಾ ಒಟಿಟಿಗೂ ಕಾಲಿಟ್ಟು ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ಎಲ್ಲರೂ ಕೊಂಡಾಡಿದರು. ಈ ಚಿತ್ರಕ್ಕೆ ಒಂದು ಕಪ್ಪು ಚುಪ್ಪೆ ಬಿದ್ದಿತ್ತು. ಅದುವೇ ‘ಬ್ರಹ್ಮಕಲಶ’ ಹಾಡಿನಲ್ಲಿ (ಬ್ರಹ್ಮಕಲಶ ಹಾಡು) ಬರೋ ನೀರಿನ ಕ್ಯಾನ್ ದೃಶ್ಯ. ಇದನ್ನು ಅನೇಕರು ಟ್ರೋಲ್ ಮಾಡಿದರು. ಈ ವಿಚಾರ ಸಾಕಷ್ಟು ಚರ್ಚೆ ಆಯಿತು. ಈ ಬಗ್ಗೆ ತಂಡದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ರಿಷಬ್ ಶೆಟ್ಟಿ ಅವರು ತುಂಬಾನೇ ಶ್ರದ್ಧೆಯಿಂದ ಸಿನಿಮಾ ಮಾಡುತ್ತಾರೆ. ‘ಕಾಂತಾರ’ ಹಾಗೂ ‘ಕಾಂತಾರ: ಅಧ್ಯಾಯ 1’ ಸಿನಿಮಾದಲ್ಲೂ ಅವರು ಸಾಕಷ್ಟು ಶ್ರಮ ಹಾಕಿದ್ದರು. ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬರುವಂತೆ ನೋಡಿಕೊಂಡರು. ಆದರೆ, ಅಲ್ಲಾಗಿದ್ದೇ ಬೇರೆ. ನೂರಾರು ಕೋಟಿ ರೂಪಾಯಿ ಬಜೆಟ್ ಹಾಕಿ ಅದ್ದೂರಿಯಾಗಿ ಮೂಡಿ ಬಂದ ಸಿನಿಮಾದಲ್ಲಿ ನೀರಿನ ಕ್ಯಾನ್ ಕಾಣಿಸಿಕೊಂಡಿದ್ದು ತಂಡವನ್ನು ಮುಜುಗರಕ್ಕೆ ಈಡು ಮಾಡಿತ್ತು. ಈ ಬಗ್ಗೆ ಚಿತ್ರದ ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಅವರು ‘ಗೌರೀಶ್ ಹಕ್ಕಿ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಲಾಗಿದೆ.

‘ನಮ್ಮ ಗುಣಮಟ್ಟ ನಿಯಂತ್ರಕ ತಂಡ ಸ್ಟ್ರಾಂಗ್ ಆಗಿದೆ. ಪ್ರತಿ ಫ್ರೇಮ್ ಕೂಡ ನೋಡಿಯೇ ಮುಂದಿನ ಪ್ರಕ್ರಿಯೆ ಮಾಡುತ್ತಿತ್ತು. ಮೊದಲು ಓಕೆ ಆದ ಶಾಟ್ ಅಲ್ಲಿ ಹಾಕಿರಲಿಲ್ಲ. ಅದರಲ್ಲಿ ವಾಟರ್ ಕ್ಯಾನ್ ಕೂಡ ಇರಲಿಲ್ಲ. ನಂತರ ಓಕೆ ಜೊತೆಗೆ ಇರೋ ಶಾಟ್ ನಾವು ಅಲ್ಲಿ ಕೂರಿಸಿದೆವು. ಆಗ ವಾಟರ್ ಕ್ಯಾನ್ ಕಾಣಿಸಿತು. ಈಗ ವಾಟರ್ ಕ್ಯಾನ್ ಇಲ್ಲ’ ಎಂದು ಅವರು ಹೇಳಿದರು.

ವಾಟರ್ ಕ್ಯಾನ್ ವಿಚಾರಕ್ಕೆ ಸ್ಪಷ್ಟನೆ

‘ಅಲ್ಲಿ ನೋಡಲು ತುಂಬಾ ವಿಷಯಗಳಿವೆ. ಆದರೂ ಈ ವಾಟರ್ ಕ್ಯಾನ್ ಕಾಣಿಸಿದ್ದು ಹೇಗೆ ಎಂಬುದೇ ಕುತೂಹಲಕಾರಿ. ಈ ಹಾಡಿನಲ್ಲಿ ಕಾಣಿಸಿಕೊಂಡ ಜೂನಿಯರ್ ಆರ್ಟಿಸ್ಟ್ ತಾನು ಎಲ್ಲಿದ್ದೇನೆ ಎಂದು ಜೂಮ್ ಮಾಡಿ ಪರದೆಯ ಶಾಟ್ ಹಂಚಿಕೊಂಡಿದ್ದಾರೆ. ಈ ವೇಳೆ ಆತನಿಗೆ ವಾಟರ್ ಕ್ಯಾನ್ ಕಾಣಿಸಿದೆ. ಸಾಂಗ್ ರಿಲೀಸ್ ಆಗಿ 10 ದಿನ ಆದ ಬಳಿಕ ಈ ವಾಟರ್ ಕ್ಯಾನ್ ವಿಚಾರ ಗೊತ್ತಾಗಿದೆ’ ಎಂದು ಸ್ಪಷ್ಟನೆ ಕೊಟ್ಟರು ಅರವಿಂದ್ ಕಶ್ಯಪ್.

ಇದನ್ನೂ ಓದಿ: ‘ಕಾಂತಾರ’ದಲ್ಲಿ ವಾಟರ್ ಕ್ಯಾನ್: ಈ ರೀತಿ ತಪ್ಪು ಮಾಡಿದ ದೊಡ್ಡ ಸಿನಿಮಾಗಳ ಪಟ್ಟಿ ಇಲ್ಲಿದೆ

ಕಾಂತಾರ: ಅಧ್ಯಾಯ 1 ಚಿತ್ರದ ‘ಬ್ರಹ್ಮಕಲಶ’ ಹಾಡಿನಲ್ಲಿ ಕಾಣಿಸಿದ್ದ ನೀರಿನ ಕ್ಯಾನ್ ವಿವಾದದ ಕುರಿತು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಸ್ಪಷ್ಟನೆ ನೀಡಿದ್ದಾರೆ. ಗುಣಮಟ್ಟ ನಿಯಂತ್ರಣ ತಂಡದ ಲೋಪದಿಂದಾಗಿ ಕ್ಯಾನ್ ಕಾಣುವ ಟ್ಯಾಗ್ ಬಳಕೆಯಾಗಿತ್ತು. ಬಳಿಕ ಅದನ್ನು ಸರಿಪಡಿಸಲಾಗಿದೆ. ಜೂನಿಯರ್ ಕಲಾವಿದ ಕಾಣಿಸಿಕೊಂಡಿದ್ದಾರೆ ಶಾಟ್ ಈ ದೋಷ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:05 am, ಬುಧವಾರ, 5 ನವೆಂಬರ್ 25





Source link

Leave a Reply

Your email address will not be published. Required fields are marked *