Karna Serial Today Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾ, ನಿಧಿ, ಕರ್ಣನ ಬದುಕು ತ್ರಿಶಂಕು ಸ್ವರ್ಗವಾಗಿದೆ. ಚಿಕ್ಕಮಗಳೂರಿನಲ್ಲಿ ಕರ್ಣ, ನಿತ್ಯಾ ಇಬ್ಬರೂ ಸೇರಿಕೊಂಡು ತೇಜಸ್ನನ್ನು ಹುಡುಕುತ್ತಿದ್ದಾರೆ. ಆ ವೇಳೆ ನಿತ್ಯಾಗೆ ಭೂಮಿಯೇ ಇಬ್ಭಾಗ ಆಗುವಂತಹ ನ್ಯೂಸ್ ಸಿಕ್ಕಿದೆ.

ಕರ್ಣ ಧಾರಾವಾಹಿಯಲ್ಲಿ ಚಿಕ್ಕಮಗಳೂರಿನಲ್ಲಿ ನಿತ್ಯಾ, ಕರ್ಣ ಇಬ್ಬರೂ ತೇಜಸ್ಗೋಸ್ಕರ ಬೀದಿ ಬೀದಿ ಅಲೆದಾಡುತ್ತಿದ್ದಾರೆ. ತೇಜಸ್ ಸಿಕ್ಕಿದರೆ ಸಾಕು ಅಂತ ನಿತ್ಯಾ ಹಾತೊರೆಯುತ್ತಿದ್ದಾಳೆ. ಹೀಗಿರುವಾಗ ಒಂದು ಟ್ವಿಸ್ಟ್ ಎದುರಾಗಿದೆ.

ಹೌದು, ಕರ್ಣನ ತಂದೆ ಕರೆಸಿಕೊಳ್ಳುವ ರಮೇಶ್, ಪ್ಲ್ಯಾನ್ ಮಾಡಿ ತೇಜಸ್ನನ್ನು ಕಿಡ್ನ್ಯಾಪ್ ಮಾಡಿದ್ದನು. ಇದರಿಂದಲೇ ತೇಜಸ್, ನಿತ್ಯಾ ಮದುವೆ ಮುರಿದು ಹೋಯ್ತು, ಕರ್ಣ, ನಿತ್ಯಾ ಮದುವೆ ಆಗಬೇಕು ಎನ್ನೋದಾಯ್ತು.

ಈಗ ಚಿಕ್ಕಮಗಳೂರಿನಲ್ಲಿ ನಿತ್ಯಾ, ಕರ್ಣ ಇಬ್ಬರೂ ತೇಜಸ್ ಹುಡುಕಾಟದಲ್ಲಿದ್ದಾರೆ. ಆಗ ನಿತ್ಯಾಗೆ ತೇಜಸ್ ಕಾರಿನಲ್ಲಿರೋದು ಗೊತ್ತಾಗಿದೆ. ಒಂದು ಮಹಿಳೆ ಪ್ಲ್ಯಾನ್ ಮಾಡಿ ತೇಜಸ್ನನ್ನು ಅಲ್ಲಿಂದ ಕಾರ್ನಲ್ಲಿ ಬೇರೆ ಕಡೆ ಕರೆದುಕೊಂಡು ಹೋಗಿದ್ದಾಳೆ. ಅದನ್ನು ನಿತ್ಯಾ ನೋಡಿದಳು.

ತೇಜಸ್ ಎಂದು ಅವಳು ಓಡಿದಳು. ಅದೇ ಟೈಮ್ಗೆ ಒಂದು ವಾಹನ ಕೂಡ ಅಲ್ಲಿಗೆ ಬಂತು. ಇನ್ನೇನು ಆ ವಾಹನ ನಿತ್ಯಾಗೆ ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಕರ್ಣ ಕಾಪಾಡಿದ್ದಾನೆ. ಇನ್ನೇನು ಓಡಿಹೋಗಿ ಆ ಕಾರ್ ನಿಲ್ಲಿಸಬೇಕು ಎಂದು ನಿತ್ಯಾ ಅಂದುಕೊಂಡಿದ್ದಳು. ಆದರೆ ಕರ್ಣ ಅವಳನ್ನು ತಡೆದಿದ್ದನು.

“ನನ್ನ ಬಗ್ಗೆ ಕೇರ್ ಮಾಡೋದು ಬಿಡಿ, ನನ್ನ ಬಿಟ್ಟುಬಿಡಿ” ಎಂದು ನಿತ್ಯಾ ಕೂಗಿದ್ದಾಳೆ. ಆಗ ಕರ್ಣ, “ನನಗೆ ನಿಮ್ಮ ಬಗ್ಗೆ ಕೇರ್ ಇಲ್ಲ, ನಿಮ್ಮ ಹೊಟ್ಟೆಯೊಳಗಡೆ ಇರೋ ಮಗು ಬಗ್ಗೆ ಚಿಂತೆ” ಎಂದು ಹೇಳಿದ್ದಾನೆ.

ಪ್ರಗ್ನೆಂಟ್ ಅಂತ ಗೊತ್ತಾದಮೇಲೆ ನಿತ್ಯಾ ಹೇಗೆ ರಿಯಾಕ್ಟ್ ಮಾಡ್ತಾಳೋ ಏನೋ! ಇನ್ನೊಂದು ಕಡೆ ಮದುವೆ ಮುರಿದಿರೋದು, ಪ್ರೀತಿಸಿದ ಹುಡುಗ ದೂರ ಹೋಗಿರೋದು ನಿತ್ಯಾಗೆ ಬೇಸರ ತಂದಿದೆ. ಹಾಗಾದರೆ ಮುಂದೆ ಏನಾಗುವುದು?

Source link
Karna Serial: ತೇಜಸ್ ಕಣ್ಣಿಗೆ ಬಿದ್ದಾಯ್ತು, ನಿತ್ಯಾಗೆ ಭೂಮಿ ಇಬ್ಭಾಗ ಆಗುವಂತ ಸುದ್ದಿ ಗೊತ್ತಾಯ್ತು