IPL 2026: ಇಂಡಿಯನ್ ಪ್ರೀಮಿಯರ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರ ರಿಲೀಸ್ ಮಾಡಲಿದೆಯಾ? ಈ ಪ್ರಶ್ನೆಗೆ ಈಗ ಕೇಳಿ ಬರುತ್ತಿರುವ ಉತ್ತರ ಹೌದು. ಆದರೆ ಈ ರಿಲೀಸ್ ಹಿಂದೆ ಎಸ್ಆರ್ಹೆಚ್ ಮತ್ತೊಂದು ಲೆಕ್ಕಾಚಾರವನ್ನು ಸಹ ಇಟ್ಟುಕೊಂಡಿದೆ.
ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಹೆನ್ರಿಕ್ ಕ್ಲಾಸೆನ್ ಅವರಿಗೆ ನೀಡುತ್ತಿರುವ ಸಂಭಾವನೆ ಬರೋಬ್ಬರಿ 23 ಕೋಟಿ ರೂ. ಮುಂದಿನ ಹರಾಜಿಗೂ ಮುನ್ನ ಅವರ ರಿಲೀಸ್ ಮಾಡಿದರೆ ಎಸ್ ಆರ್ ಹೆಚ್ ತಂಡದ ಪರ್ಸ್ ಮೊತ್ತಕ್ಕೆ 23 ಕೋಟಿ ರೂ. ಸೇರ್ಪಡೆಯಾಗಲಿದೆ.
ಹೆನ್ರಿಕ್ ಕ್ಲಾಸೆನ್ ಜೊತೆ 10 ಕೋಟಿ ರೂ. ಬೆಲೆಯ ಮೊಹಮ್ಮದ್ ಶಮಿ ಸೇರಿದಂತೆ ಇನ್ನೊಂದಷ್ಟು ಆಟಗಾರರನ್ನು ರಿಲೀಸ್ ಮಾಡಿದರೂ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 40 ಕೋಟಿ ಅಧಿಕ ಹರಾಜು ಮೊತ್ತವನ್ನು ಹೊಂದಬಹುದು. ಇದರಿಂದ ಮಿನಿ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಭರ್ಜರಿ ಪೈಪೋಟಿ ನಡೆಸಲು ಸಾಧ್ಯ.
ಈ ಪೈಪೋಟಿ ನಡುವೆ ಹೆನ್ರಿಕ್ ಕ್ಲಾಸೆನ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯೇ ಮತ್ತೆ ಖರೀದಿಸಲು ಸಹ ಪ್ಲ್ಯಾನ್ ರೂಪಿಸಿದೆ. ಅಂದರೆ 23 ಕೋಟಿ ರೂ. ಹೊಂದಿರುವ ಕ್ಲಾಸೆನ್ ಅವರನ್ನು ಬಿಡುಗಡೆ ಮಾಡಿದರೂ, ಮಿನಿ ಹರಾಜಿನಲ್ಲಿ ಅವರನ್ನು ಖರೀದಿಸಲು ಬೃಹತ್ ಮೊತ್ತವನ್ನು ಹಾಕಲು ಇತರ ಫ್ರಾಂಚೈಸಿಗಳು ಹಿಂದೇಟು ಹಾಕಬಹುದು.
ಇತ್ತ ಸನ್ ರೈಸರ್ಸ್ ಹೈದರಾಬಾದ್ ಬಳಿ ದೊಡ್ಡ ಮೊತ್ತದ ಪರ್ಸ್ ಗಾಗಿ ಆತನಿಗೆ 15 ಅಥವಾ 20 ಕೋಟಿ ರೂ. ಒಳಗೆ ಮತ್ತೆ ಖರೀದಿಸಬಹುದು. ಜೊತೆಗೆ ಇನ್ನುಳಿದ ಮೊತ್ತದಲ್ಲಿ ಇತರೆ ಸ್ಟಾರ್ ಆಟಗಾರರನ್ನು ಖರೀದಿಸಲು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಹೆನ್ರಿಕ್ ಕ್ಲಾಸೆನ್ ಅವರ ಹೆಸರು ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಅಂದರೆ ಹೆನ್ರಿಕ್ ಕ್ಲಾಸೆನ್ ಅವರನ್ನು ಬಿಡುಗಡೆ ಮಾಡಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯೇ ಕಡಿಮೆ ಮೊತ್ತಕ್ಕೆ ಖರೀದಿಸಲು ಯೋಜನೆ ರೂಪಿಸಿದೆ. ಈ ಮೂಲಕ ಪರ್ಸ್ ಮೊತ್ತ ಹೆಚ್ಚಿಸಿ ಪ್ರಮುಖ ಆಟಗಾರರಿಗೆ ಬಿಡ್ ಮಾಡಲು ಎಸ್ ಆರ್ ಹೆಚ್ ಫ್ರಾಂಚೈಸಿ ಯೋಜನೆ ರೂಪಿಸಿದೆ. ಅದರಂತೆ ಸದ್ಯ ಕ್ಲಾಸೆನ್ ಅವರನ್ನು ಬಿಡುಗಡೆ ಮಾಡಲು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಿರ್ಧರಿಸಿದೆ. ಒಂದು ವೇಳೆ ಇತರ ಫ್ರಾಂಚೈಸಿಗಳು ಬೃಹತ್ ಮೊತ್ತದ ಪರ್ಸ್ ಹೊಂದಿರುವುದು ಖಚಿತವಾದರೆ ಎಸ್ ಆರ್ಹೆಚ್ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.





