ಹೊಸ ಅವತಾರದಲ್ಲಿ ‘ಬಾಹುಬಲಿ’: ಈಗ ದೇವರು v/s ಮನುಷ್ಯ

ಹೊಸ ಅವತಾರದಲ್ಲಿ ‘ಬಾಹುಬಲಿ’: ಈಗ ದೇವರು v/s ಮನುಷ್ಯ


‘ಬಾಹುಬಲಿ’ (ಬಾಹುಬಲಿ) ಮತ್ತು ‘ಬಾಹುಬಲಿ 2’ ಭಾರತೀಯ ಸಿನಿಮಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಿನಿಮಾ. ರಾಜಮೌಳಿ ನಿರ್ದೇಶಿಸಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಮೇಲೆ ಬೀರಿದ ಪರಿಣಾಮ ಬಹಳ ದೊಡ್ಡದು. ಸಿನಿಮಾ ರಿಲೀಸ್ ಆಗಿ 10 ವರ್ಷಗಳಾಗಿದ್ದರೆ ಸಿನಿಮಾ ಇತ್ತೀಚೆಗಷ್ಟೇ ಮರು ಬಿಡುಗಡೆ ಆಗಿದ್ದು, ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದರ ಜೊತೆಗೆ ‘ಬಾಹುಬಲಿ’ ಸರಣಿಯನ್ನು ಮುಂದುವರೆಸಿಕೊಂಡು ಹೋಗಲು ನಿರ್ಮಾಣ ಸಂಸ್ಥೆಯಾದ ನಿಶ್ಚಯಿಸಿದ್ದು, ಇದೀಗ ‘ಬಾಹುಬಲಿ: ದಿ ಎಟರ್ನಲ್ ವಾರ್’ ಹೆಸರಿನ ಅನಿಮೇಷನ್ ಸಿನಿಮಾ ಬಿಡುಗಡೆಗೆ ಮುಂದಾಗಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

‘ಬಾಹುಬಲಿ: ದಿ ಎಟರ್ನಲ್ ವಾರ್’ ಸಿನಿಮಾ, ಕಟ್ಟಪ್ಪನಿಂದ ಕೊಲ್ಲಲ್ಪಟ್ಟ ಅಮರೇಂದ್ರ ಬಾಹುಬಲಿಯ ಮರಣಾನಂತರದ ಕಥೆಯನ್ನು ಒಳಗೊಂಡಿದೆ. ಅಮರೇಂದ್ರ ಬಾಹುಬಲಿ ಮರಣದ ಬಳಿಕ ಪಾತಾಳ ಲೋಕಕ್ಕೆ ಹೋದ ಬಳಿಕ ಅಲ್ಲಿ ನಡೆಯುವ ಘಟನೆಗಳ ಕಾಲ್ಪನಿಕ ಕಥೆ ‘ಬಾಹುಬಲಿ: ದಿ ಎಟರ್ನಲ್ ವಾರ್’ ಸಿನಿಮಾ ಒಳಗೊಂಡಿದೆ. ಸಿನಿಮಾದ ಎರಡು ನಿಮಿಷದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ‘ಬಾಹುಬಲಿ’ಯ ಅನಿಮೇಷನ್ ಅವತಾರದಲ್ಲಿ ತೋರಿಸಲಾಗಿದೆ.

ಕಟ್ಟಪ್ಪನಿಂದ ಕೊಲ್ಲಲ್ಪಟ್ಟು ಪಾತಾಳ ಲೋಕಕ್ಕೆ ಹೋಗುವ ಅಮರೇಂದ್ರ ಬಾಹುಬಲಿ ಅಲ್ಲಿ ಶಿವನ ಆರಾಧನೆಯಲ್ಲಿ ತೊಡಗಿಸಿಕೊಂಡಿರುತ್ತಾನೆ. ಪಾತಾಳ ಲೋಕದಲ್ಲಿ ವಿಷಾಸುರ ಅಮರೇಂದ್ರ ಬಾಹುಬಲಿಯ ಗೆಳೆಯ. ಆದರೆ ಇಂದ್ರನಿಗೆ ಬಾಹುಬಲಿ ವಿರುದ್ಧ ಸಿಟ್ಟು, ಬಾಹುಬಲಿಯನ್ನು ಎಳೆದೊಯ್ಯಲು ಸಾಕ್ಷಾತ್ ಇಂದ್ರನೇ ಬರುತ್ತಾನೆ ಆದರೆ ವಿಷಾಸುರ ಇಂದ್ರನನ್ನು ಅಡ್ಡಗಟ್ಟುತ್ತಾನೆ. ಇಬ್ಬರ ನಡುವೆ ಯುದ್ಧವಾಗುತ್ತದೆ, ವಿಷಾಸುರ ಸುಸ್ತಾಗಿ ಕೂರುತ್ತಾನೆ, ಅಷ್ಟರಲ್ಲಿ ಬಾಹುಬಲಿ ತನ್ನ ರಥದಲ್ಲಿ ಬಂದು ಇಂದ್ರನನ್ನು ಸಮರದಲ್ಲಿ ಎದುರುಗೊಳ್ಳುತ್ತಾನೆ. ಇಷ್ಟು ಕಥೆ ಇದೀಗ ಬಿಡುಗಡೆ ಆಗಿರುವ ಟ್ರೈಲರ್ ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ:’ಬಾಹುಬಲಿ’ ರೀ ರಿಲೀಸ್ ತಮನ್ನಾ ಅಭಿಮಾನಿಗಳಿಗೆ ಮತ್ತೆ ಬೇಸರ

‘ಬಾಹುಬಲಿ: ದಿ ಎಟರ್ನಲ್ ವಾರ್’ ಸಿನಿಮಾದ ಮೊದಲ ಭಾಗದ ಕತೆ ಇದಾಗಿದ್ದರೆ, ಸಿನಿಮಾವನ್ನು ಅರ್ಕಾ ಮೀಡಿಯಾಸ್ ಅವರೇ ನಿರ್ಮಾಣ ಮಾಡಿದ್ದಾರೆ. ಎಸ್ ಎಸ್ ರಾಜಮೌಳಿ ಅದನ್ನು ಪ್ರೆಸೆಂಟ್ ಮಾಡಿದ್ದಾರೆ. ಸಿನಿಮಾದ ಬಾಹುಬಲಿ ಪಾತ್ರಕ್ಕೆ ಪ್ರಭಾಸ್ ಅವರೇ ಧ್ವನಿ ನೀಡಿದ್ದಾರೆ. ಇಶಾನ್ ಶುಕ್ಲ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆ ಆಗುವುದು 2027ಕ್ಕೆ ಅಂತೆ.

ಇತ್ತೀಚೆಗೆ ಅನಿಮೇಷನ್ ಸಿನಿಮಾಗಳು ಸೇರಿದಂತೆ ಪೌರಾಣಿಕ ಕಥೆಗಳನ್ನು ಆಧರಿಸಿದ ಅನಿಮೇಷನ್ ಸಿನಿಮಾಗಳು ಸಾಕಷ್ಟು ಯಶಸ್ಸು ಗಳಿಸಿವೆ. ಹೊಂಬಾಳೆ ವಿತರಣೆ ಮಾಡಿದ್ದ ‘ಮಹಾವತಾರ: ನರಸಿಂಹ’ ಸಿನಿಮಾ ಭಾರಿ ಹಿಟ್ ಆಯ್ತು. ಸುಮಾರು 400 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್‌ನಲ್ಲಿ ಮಾಡಲಾಗಿತ್ತು. ಇದೀಗ ‘ಬಾಹುಬಲಿ’ಯನ್ನೂ ಅನಿಮೇಷನ್ ರೂಪದಲ್ಲಿ ಹೊರತರಲಾಗುತ್ತಿದ್ದು, ಆ ಸಿನಿಮಾ ಕೂಡ ಹಿಟ್ ಆಗುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:40 am, ಬುಧವಾರ, 5 ನವೆಂಬರ್ 25



Source link

Leave a Reply

Your email address will not be published. Required fields are marked *