Hydrogen Bomb Loading: ರಾಹುಲ್ ಗಾಂಧಿ 'ಹೈಡ್ರೋಜನ್ ಬಾಂಬ್': ಇಂದು ಬಯಲಾಗಲಿದೆಯೇ ಮಹಾ ರಹಸ್ಯ?

Hydrogen Bomb Loading: ರಾಹುಲ್ ಗಾಂಧಿ  'ಹೈಡ್ರೋಜನ್ ಬಾಂಬ್': ಇಂದು ಬಯಲಾಗಲಿದೆಯೇ ಮಹಾ ರಹಸ್ಯ?

Hydrogen Bomb Loading: ರಾಹುಲ್ ಗಾಂಧಿ  'ಹೈಡ್ರೋಜನ್ ಬಾಂಬ್': ಇಂದು ಬಯಲಾಗಲಿದೆಯೇ ಮಹಾ ರಹಸ್ಯ?

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಹಿಂದೆ ಮತಗಳ್ಳತನದ ಬಗ್ಗೆ ಆರೋಪಿಸಿದ್ದ ಅವರು, ಇದೀಗ ‘ಹೈಡ್ರೋಜನ್ ಬಾಂಬ್’ ಸ್ಫೋಟಿಸುವುದಾಗಿ ಹೇಳಿದ್ದಾರೆ.

ಲೋಕಸಭಾ ವಿರೋಧ ಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಇಂದು ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯನ್ನು ಕಾಂಗ್ರೆಸ್ ಹೈಡ್ರೋಜನ್ ಬಾಂಬ್ ಎಂದು ವ್ಯಾಖ್ಯಾನಿಸಿದೆ.

ಈ ಹಿಂದಿನ ಎರಡು ಸುದ್ದಿಗೋಷ್ಠಿಯಲ್ಲಿ ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕಲಬುರಗಿ ಜಿಲ್ಲೆಯ ಆಳಂದ ಮತ್ತು ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

ಇದೀಗ ಈ ಆರೋಪದ ಮುಂದುವರಿದ ಭಾಗವೇ ಹೈಡ್ರೋಜನ್ ಬಾಂಬ್ ಎಂದು ಹೇಳಲಾಗುತ್ತಿದೆ. ಬಿಜೆಪಿಯೊಂದಿಗೆ ಚುನಾವಣಾ ಆಯೋಗ ಅಕ್ರಮದಲ್ಲಿ ಸಾಥ್ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮಹದೇವಪುರ ಕ್ಷೇತ್ರದ ದಾಖಲೆ ಕೇವಲ ಆಟಂ ಬಾಂಬ್ ಆಗಿದ್ದು, ಶೀಘ್ರದಲ್ಲಿಯೇ ಹೈಡ್ರೋಜನ್ ಬಾಂಬ್ ಸ್ಪೋಟಿಸೋದಾಗಿ ರಾಹುಲ್ ಗಾಂಧಿ ಹೇಳಿದ್ದರು.

ಬಿಹಾರದಲ್ಲಿ ನಾಳೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಈ ಸುದ್ದಿಗೋಷ್ಠಿ ತೀವ್ರ ಕುತೂಹಲ ಮೂಡಿಸಿದೆ. ಆಡಳಿತರೂಢ ಬಿಜೆಪಿ ಕೇಂದ್ರ ಸರ್ಕಾರ, ಗ ಭಾರತದ ಸಂವಿಧಾನವನ್ನು ನಾಶಮಾಡಲು ಪ್ರಯತ್ನಿಸುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ವಿರೋಧದ ನಡುವೆ 12 ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆಗೆ ಚಾಲನೆ

ಇಂದಿನ ಹೈಡ್ರೋಜನ್ ಬಾಂಬ್ ಸುದ್ದಿಗೋಷ್ಠಿ ತಯಾರಿಯ ಫೋಟೋಗಳನ್ನು ಕಾಂಗ್ರೆಸ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದೆ. ಫೋಟೋದಲ್ಲಿ ಹಲವು ದಾಖಲೆಗನ್ನು ವೇದಿಕೆ ಮೇಲೆ ತಂದು ಇರಿಸಲಾಗಿದೆ.

ಇದನ್ನೂ ಓದಿ: ಗೆದ್ದರೆ ಮಹಿಳೆಯರಿಗೆ ಒಂದೇ ಕಂತಲ್ಲಿ ₹ 30000 : ಆರ್‌ಜೆಡಿ

Source link

Leave a Reply

Your email address will not be published. Required fields are marked *