38 ರ ಮಹಿಳೆಯ ಕಾಮದಾಹಕ್ಕೆ 19 ವರ್ಷದ ಯುವಕ ಬಲಿ: ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣು

38 ರ ಮಹಿಳೆಯ ಕಾಮದಾಹಕ್ಕೆ 19 ವರ್ಷದ ಯುವಕ ಬಲಿ: ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣು


ನಿಖಿಲ್ ಕುಮಾರ್ ಮತ್ತು ಮಹಿಳೆ ಜತೆ ನಿಖಿಲ್ ಇದ್ದ ಮೊಬೈಲ್ ಚಿತ್ರ

ಚಿಕ್ಕಬಳ್ಳಾಪುರ, ನವೆಂಬರ್ 5: 38 ವರ್ಷ ವಯಸ್ಸಿನ ಮಹಿಳೆ ಅಕ್ರಮ ಸಂಬಂಧಕ್ಕಾಗಿ ಪದೇ ಪದೇ ಕಾಡಲು ಕಾರಣ 19 ವರ್ಷ ವಯಸ್ಸಿನ ಯುವಕನೊಬ್ಬ ಆತ್ಮಹತ್ಯೆ ಶರಣಾದ ಘಟನೆ ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರ) ಚಿಂತಾಮಣಿ (ಚಿಂತಾಮಣಿ) ತಾಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ನಿಖಿಲ್ ಕುಮಾರ್ (19) ಎಂದು ಗುರುತಿಸಲಾಗಿದೆ. ಮಹಿಳೆಯ ಕಾಟ ತಾಳಲಾರದೆ ಆತ ಸಾವಿಗೆ ಶರಣಾಗಿದ್ದಾನೆ ಎಂದು ಆತನ ಮನೆಯವರು ಆರೋಪಿಸಿದ್ದಾರೆ.

38 ವರ್ಷ ವಯಸ್ಸಿನ ಶಾರದಾ ಎಂಬಾಕೆ ನಿಖಿಲ್ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಆರೋಪವಿದೆ. ಪೋಷಕರ ವಿರೋಧದ ನಡುವೆಯೂ ಶಾರದಾ ಯುವಕನನ್ನು ಬಿಟ್ಟಿರಲಿಲ್ಲ. ಪೋಷಕರ ಕಣ್ತಪ್ಪಿಸಿ ಯುವಕನನ್ನು ಹೊರಗೆ ಕರೆದುಕೊಂಡು ಹೋಗಿದ್ದಳು ಎಂಬ ಆರೋಪವಿದೆ.

ಹಲವು ವರ್ಷಗಳ ಹಿಂದೆ ಗಂಡನಿಗೆ ವಿಚ್ಛೇದನ ನೀಡಿದ್ದ ಶಾರದ, ಇಬ್ಬರು ಮಕ್ಕಳೊಂದಿಗೆ ಮೂಡಚಿಂತಹಳ್ಳಿ ಗ್ರಾಮದಲ್ಲಿ ವಾಸವಿದ್ದಳು. ಯುವಕ ನಿಖಿಲ್‌ಗೆ ಅಕ್ರಮ ಸಂಬಂಧಕ್ಕಾಗಿ ಕಾಟ ಕೊಡುತ್ತಿದ್ದಳು ಎಂಬ ಆರೋಪವಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಅಮಾನವೀಯ ಕೃತ್ಯ: ಮಾತು ಬಾರದ ವಿದ್ಯಾರ್ಥಿಗೆ ಶಿಕ್ಷಕರಿಂದ ಕಿರುಕುಳ

ಸದ್ಯ, ಚಿಂತಾಮಣಿಯ ಕಾಚಹಳ್ಳಿ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವವಿದೆ. ಮೃತ ಯುವಕ ನಿಖಿಲ್ ಪರವಾಗಿ ಈಗ ಶಾರದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *