Headlines

ಮೂರು ಡೀಲ್​​ಗಳು ರಿಜೆಕ್ಟ್​: ತಲೆ ಕೆಳಗಾದ ಕೆಕೆಆರ್-ಕೆಎಲ್ ರಾಹುಲ್ ಲೆಕ್ಕಾಚಾರ

ಮೂರು ಡೀಲ್​​ಗಳು ರಿಜೆಕ್ಟ್​: ತಲೆ ಕೆಳಗಾದ ಕೆಕೆಆರ್-ಕೆಎಲ್ ರಾಹುಲ್ ಲೆಕ್ಕಾಚಾರ


IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಕೆಎಲ್ ರಾಹುಲ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇದಕ್ಕೆ ಮುಖ್ಯ ಕಾರಣ ಮೂರು ಡೀಲ್‌ಗಳು ತಿರಸ್ಕೃತವಾಗಿರುವುದು. ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕೆಎಲ್ ರಾಹುಲ್ ಅವರನ್ನು ಮಾರಾಟ ಮಾಡಲು ಮೂರು ಸ್ವಾಪ್ ಡೀಲ್‌ಗಳನ್ನು ಮುಂದಿಟ್ಟಿದ್ದರು. ಆದರೆ ಈ ಡೀಲ್‌ಗಳನ್ನು ಕೆಕೆಆರ್ ಫ್ರಾಂಚೈಸಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಕೆಎಲ್ ರಾಹುಲ್ ಖರೀದಿಗಾಗಿ ಕ್ಯಾಶ್ ಡೀಲ್‌ಗೆ ಮುಂದಾಗಿದ್ದರು. ಆದರೆ ಈ ಡೀಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಒಪ್ಪಿರಲಿಲ್ಲ. ಬದಲಾಗಿ ಸ್ಟಾರ್ ಆಟಗಾರರ ಸ್ವಾಪ್ ಡೀಲ್‌ಗೆ ಬೇಡಿಕೆಯಿಟ್ಟಿದ್ದರು. ಬೇಡಿಕೆಗಳೆಂದರೆ…

  1. ಸುನಿಲ್ ನರೈನ್ ಅವರನ್ನು ಕೆಎಲ್ ರಾಹುಲ್ ಅವರಿಗೆ ನೀಡುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತಿಳಿಸಿತ್ತು. ಆದರೆ ಈ ಡೀಲ್ ಅನ್ನು ಕೆಕೆಆರ್ ಫ್ರಾಂಚೈಸಿ ಒಪ್ಪಲಿಲ್ಲ.
  2. ಕೆಎಲ್ ರಾಹುಲ್ ಬದಲಿಗೆ ರಿಂಕು ಸಿಂಗ್ ಹಾಗೂ ಆಂಗ್ಲಕ್ರಿಶ್ ರಘವಂಶವನ್ನು ನೀಡಬೇಕೆಂಬ ಬೇಡಿಕೆ ಡೆಲ್ಲಿ ಕ್ಯಾಪಿಟಲ್ಸ್ ಮುಂದಿಟ್ಟಿದೆ. ಆದರೆ ಇಬ್ಬರು ಯುವ ಆಟಗಾರರನ್ನು ಬಿಟ್ಟು ಕೊಡಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಒಪ್ಪಿಲ್ಲ.
  3. ಹರ್ಷಿತ್ ರಾಣಾ ಹಾಗೂ ಆಂಗ್ಲ ಕ್ರಿಶ್ ರಘುವಂಶಿಯ ಬದಲಿಗೆ ಕೆಎಲ್ ರಾಹುಲ್ ಅವರನ್ನು ಸ್ವಾಪ್ ಡೀಲ್ ಮಾಡಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿದೆ. ಆದರೆ ಈ ಡೀಲ್ ಕೂಡ ಕುದುರಿಕೊಂಡಿಲ್ಲ.

ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ತನ್ನ ಖಾಯಂ ಸದಸ್ಯರನ್ನು ಬಿಟ್ಟು ಕೊಡಲು ಮುಂದಾಗುತ್ತಿಲ್ಲ. ಇದಾಗ್ಯೂ ಕೆಎಲ್ ರಾಹುಲ್ ಅವರನ್ನು ಕ್ಯಾಶ್ ಡೀಲ್‌ನೊಂದಿಗೆ ಖರೀದಿಸಲು ಆಸಕ್ತಿ ತೋರಿಸುತ್ತಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ನಗದು ಟ್ರೇಡ್‌ಗೆ ಒಪ್ಪುತ್ತಿಲ್ಲ.

ಸ್ಟಾರ್ ಆಟಗಾರನಿಗೆ ಬದಲಾಗಿ ಸ್ಟಾರ್ ಆಟಗಾರರನ್ನು ನೀಡಿದರೆ ಮಾತ್ರ ಸ್ವಾಪ್ ಡೀಲ್ ಮಾಡಿಕೊಳ್ಳಬಹುದು ಎಂಬ ಡಿಮ್ಯಾಂಡ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ಮುಂದಿಡಬಹುದು. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ತನ್ನ ಪ್ರಮುಖ ಆಟಗಾರರನ್ನು ಸ್ವಾಪ್ ಮಾಡಿಕೊಳ್ಳಲು ಹಿಂದೇಟು ಹಾಕಿದೆ.

ಇದನ್ನೂ ಓದಿ: ಮಿಲಿಂದ್ ಆರ್ಭಟಕ್ಕೆ ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಉಡೀಸ್

ಪ್ರಸ್ತುತ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಕೆಎಲ್ ರಾಹುಲ್ ಟ್ರೇಡಿಂಗ್ ಡೀಲ್ಗೆ ಸದ್ಯ ಬ್ರೇಕ್ ಬಿದ್ದಿದೆ. ಇದಾಗ್ಯೂ ಡಿಸಿ ಫ್ರಾಂಚೈಸಿ ಜೊತೆ ಅಂತಿಮ ಸುತ್ತಿನ ಮಾತುಕತೆಗೆ ಕೆಕೆಆರ್ ಫ್ರಾಂಚೈಸಿ ಪ್ಲ್ಯಾನ್ ಹಾಕುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಮಾತ್ರ ಕೆಎಲ್ ರಾಹುಲ್ ಕೆಕೆಆರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲದಿದ್ದರೆ ಮುಂಬರುವ ಐಪಿಎಲ್ ಸೀಸನ್ ನಲ್ಲೂ ಕೆಎಲ್ ಆರ್ ಡೆಲ್ಲಿ ಕ್ಯಾಪಿಟಲ್ಸ್ ಪರವೇ ಕಣಕ್ಕಿಳಿಯಲಿದ್ದಾರೆ.

ಐಪಿಎಲ್ ಟ್ರೇಡ್ ವಿಂಡೋ ಎಂದರೇನು?

ಟ್ರೇಡ್ ವಿಂಡೋ ಎಂದರೆ ತಮ್ಮ ತಂಡದಲ್ಲಿರುವ ಆಟಗಾರರನ್ನು ಮಾರಾಟ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಫ್ರಾಂಚೈಸಿಗಳಿಗೆ ಇರುವ ಆಯ್ಕೆ. ಈ ಆಯ್ಕೆಯ ಮೂಲಕ ಫ್ರಾಂಚೈಸಿಗಳು ಹರಾಜಿಗೂ ಮುನ್ನ ಆಟಗಾರರನ್ನು ಪರಸ್ಪರ ಬದಲಾಯಿಸಿಕೊಳ್ಳಲು ಅಥವಾ ಮಾರಾಟ ಮಾಡಬಹುದು. ಆದರೆ ಹೀಗೆ ಆಟಗಾರರನ್ನು ಮಾರಾಟ ಮಾಡಲು ಅಥವಾ ಪಡೆಯಲು ಕೆಲವು ನಿಯಮಗಳಿವೆ. ಆ ನಿಯಮಗಳೆಂದರೆ…

  • ಆಟಗಾರನ ಒಪ್ಪಿಗೆ: ಯಾವುದೇ ಫ್ರಾಂಚೈಸಿ ತನ್ನ ತಂಡದಲ್ಲಿರುವ ಆಟಗಾರನನ್ನು ಬೇರೊಂದು ತಂಡಕ್ಕೆ ವರ್ಗಾಯಿಸಲು ಅಥವಾ ಮಾರಾಟ ಮಾಡಲು ಬಯಸುವುದಿಲ್ಲ, ಆ ಆಟಗಾರನ ಸಮ್ಮತಿಯನ್ನು ಪಡೆದುಕೊಳ್ಳಬೇಕು. ಹೀಗೆ ಆಟಗಾರ ಒಪ್ಪಿಗೆ ಸೂಚಿಸಿದರೆ ಮಾತ್ರ ಬೇರೊಂದು ಫ್ರಾಂಚೈಸಿಗೆ ಮಾರಾಟ ಅಥವಾ ವಿನಿಮಯ ಮಾಡಿಕೊಳ್ಳಬಹುದು. ಆದರೆ ಇಲ್ಲಿ ಆಟಗಾರನು ನಿರಾಕರಿಸುವ ಸಾಧ್ಯತೆ ತುಂಬಾ ಕಡಿಮೆ. ಏಕೆಂದರೆ ಆಟಗಾರನು ಅಸಮ್ಮತಿ ಸೂಚಿಸಿದರೆ, ಆತನನ್ನು ಹರಾಜಿಗೂ ಮುನ್ನ ತಂಡದಿಂದ ಕೈ ಬಿಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೆಚ್ಚಿನ ಆಟಗಾರರು ವರ್ಗಾವಣೆ ಅಥವಾ ಮಾರಾಟಕ್ಕೆ ಸಮ್ಮತಿ ಸೂಚಿಸುತ್ತಾರೆ.
  • ಕ್ಯಾಶ್ ಡೀಲ್: ಟ್ರೇಡ್ ವಿಂಡೋ ಆಯ್ಕೆಯ ಮೂಲಕ ಆಟಗಾರರನ್ನು ಮಾರಾಟ ಮಾಡಲು ಅವಕಾಶವಿದೆ. ಉದಾಹರಣೆಗೆ 2022 ರಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದರು. 2023ರ ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯರನ್ನು 15 ಕೋಟಿ ರೂ. ನೀಡಿತ್ತು. ಇಲ್ಲಿ ಹಾರ್ದಿಕ್ ಪಾಂಡ್ಯಗೆ ನೀಡಲಾದ ಮೊತ್ತ ಬಹಿರಂಗವಾದರೂ, ಸಾಕಷ್ಟು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಗುಜರಾತ್ ಟೈಟಾನ್ಸ್ ನೀಡಿದ ಹೆಚ್ಚುವರಿ ಮೊತ್ತವನ್ನು ಬಹಿರಂಗಪಡಿಸಿಲ್ಲ. ಹೀಗೆ ಎರಡು ಫ್ರಾಂಚೈಸಿಗಳ ನಡುವೆ ನಡೆದ ಟ್ರಾನ್ಸ್ಫರ್ ಡೀಲ್ ಮೊತ್ತವನ್ನು ಬಹಿರಂಗಪಡಿಸಬೇಕಾದ ಅಗತ್ಯ ಕೂಡ ಇಲ್ಲ. ಹೀಗಾಗಿ ಕೆಲ ಫ್ರಾಂಚೈಸಿಗಳು ಹೆಚ್ಚುವರಿ ಮೊತ್ತಕ್ಕೆ ತನ್ನಲ್ಲಿರುವ ಆಟಗಾರರನ್ನು ಮಾರಾಟ ಮಾಡಬಹುದು.
  • ಸ್ವಾಪ್ ಡೀಲ್: ಟ್ರೇಡ್ ವಿಂಡೋ ಆಯ್ಕೆಯಲ್ಲಿ ಆಟಗಾರರನ್ನು ಪರಸ್ಪರ ಬದಲಿಸಲು ಕೂಡ ಅವಕಾಶವಿದೆ. ಅಂದರೆ ಹಾರ್ದಿಕ್ ಪಾಂಡ್ಯ ವಿಷಯದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಗೆ ಹೆಚ್ಚುವರಿ ಮೊತ್ತವನ್ನು ನೀಡಿದರು. ಇದರ ಹೊರತಾಗಿ ಎರಡು ಫ್ರಾಂಚೈಸಿಗಳು ಪರಸ್ಪರ ಒಪ್ಪಿಗೆಯ ಮೇಲೆ ಆಟಗಾರರನ್ನು ಬದಲಿಸಿಕೊಳ್ಳಬಹುದು. 2009 ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರಾಬಿನ್ ಉತ್ತಪ್ಪರನ್ನು ನೀಡಿ ಆರ್ಸಿಬಿ ತಂಡದಲ್ಲಿದ್ದ ಜಹೀರ್ ಖಾನ್ ಅವರನ್ನು ಖರೀದಿಸಿದ್ದರು. ಅಂದರೆ ಇಲ್ಲಿ ಆಟಗಾರರನ್ನು ಪರಸ್ಪರ ವಿನಿಯಮ ಮಾಡಿಕೊಂಡು ಡೀಲ್ ಕುದುರಿಸಲಾಯಿತು. ಇದನ್ನೇ ಸ್ವಾಪ್ ಡೀಲ್ ಆಯ್ಕೆ ಮಾಡಿಲ್ಲ.

ರಂದು ಪ್ರಕಟಿಸಲಾಗಿದೆ – 1:57 pm, ಬುಧವಾರ, 5 ನವೆಂಬರ್ 25



Source link

Leave a Reply

Your email address will not be published. Required fields are marked *