Headlines

ಶಿವಮೊಗ್ಗ: ಗಣಪತಿ ವಾಸುಕಿ ವಿಗ್ರಹ ಒದ್ದು ಅವಮಾನಿಸಿದ ಅನ್ಯಕೋಮಿನ ಯುವಕರು; ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ!

ಶಿವಮೊಗ್ಗ: ಗಣಪತಿ ವಾಸುಕಿ ವಿಗ್ರಹ ಒದ್ದು ಅವಮಾನಿಸಿದ ಅನ್ಯಕೋಮಿನ ಯುವಕರು; ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ!

ಕಟ್ಟೆಯ ಮೇಲಿದ್ದ ಗಣಪತಿ ಮತ್ತು ಶೇಷನಾಗ (ವಾಸುಕಿ) ವಿಗ್ರಹಗಳನ್ನು ಅನ್ಯಕೋಮಿನ ಯುವಕರ ಗುಂಪು ಕಾಲಿನಿಂದ ಒದ್ದು ಚರಂಡಿಗೆ ಎಸೆದು ಹಿಂದೂ ದೇವರುಗಳಿಗೆ ಅವಮಾನ ಮಾಡಿದ ಘಟನೆ ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಡೆದಿದೆ.

ಇಂದು ಸಂಜೆ 6:30ರ ವೇಳೆ ನಡೆದ ಈ ಘಟನೆಯಿಂದ ಕೆರಳಿದ ಸ್ಥಳೀಯ ಮಹಿಳೆಯರು ತಕ್ಷಣ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ, ಯುವಕರು ವಿಗ್ರಹಗಳನ್ನು ಪುನಃ ಕಟ್ಟೆಯ ಮೇಲೆ ಇರಿಸಿ ತೆರಳಿದ್ದಾರೆ.

ಗಣಪತಿ ಕಟ್ಟೆ ಸ್ಥಳದ ಬಳಿ ಹೈಕೋರ್ಟ್ ವಕೀಲ ಸಿದ್ದಿಕಿ ಎಂಬವರ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಜಾಗವು ಪಾರ್ಕ್‌ಗೆ ಸಂಬಂಧಿಸಿದ್ದಾಗಿ ಇಲ್ಲಿ ಯಾಕೆ ನಿಮ್ಮ ದೇವರು ಇಟ್ಟಿದ್ದೀರಿ ಎಂದು ಸ್ಥಳೀಯ ಹಿಂದೂಗಳೊಂದಿಗೆ ವಾಗ್ವಾದ ನಡೆಸಿದ್ದ ಯುವಕರು. ಇದರಿಂದಾಗಿ ಸ್ಥಳೀಯ ಮಹಿಳೆಯರು ಮತ್ತು ಯುವಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಬಳಿಕ ಕಟ್ಟೆಯ ಮೇಲೆ ಹತ್ತಿ ಹಿಂದೂ ದೇವರು ಗಣೇಶ ಮೂರ್ತಿಯನ್ನು ಕಾಲಿನಿಂದ ಒದ್ದು ಅವಮಾನಿಸಿರುವ ಕಿಡಿಗೇಡಿಗಳು.

ಘಟನೆಯ ಮಾಹಿತಿ ತಿಳಿದ ಬಂಗಾರಪ್ಪ ಬಡಾವಣೆಯ ಇತರ ನಿವಾಸಿಗಳು ಆಕ್ರೋಶಗೊಂಡು ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ದಿಡೀರ್ ಪ್ರತಿಭಟನೆಗಿಳಿದರು. ಸ್ಥಳಕ್ಕೆ ತಕ್ಷಣ ಧಾವಿಸಿದ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ್ರತಿಭಟನಾಕಾರರು ಯುವಕರ ಬಂಧನಕ್ಕೆ ಒತ್ತಾಯಿಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಸದ್ಯ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ಶಾಂತಗೊಂಡಿದೆ.

ಈ ಘಟನೆಯಿಂದ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.

Source link

Leave a Reply

Your email address will not be published. Required fields are marked *