ಯಶ್ (ಯಶ್) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ, ಬಹಳ ಹಿಂದೆಯೇ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ‘ಟಾಕ್ಸಿಕ್’ ಸಿನಿಮಾ ಬರುತ್ತಿರುವ ಕಾರಣ ಹಲವು ದೊಡ್ಡ ಸಿನಿಮಾಗಳೇ ಪಕ್ಕಕ್ಕೆ ಸರಿದುಕೊಂಡಿದ್ದು, ‘ಟಾಕ್ಸಿಕ್’ ಜೊತೆಗೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗದಂತೆ ಎಚ್ಚರಿಕೆ ವಹಿಸುತ್ತಿವೆ. ಆದರೆ ಇಲ್ಲೊಬ್ಬ ನಟ, ‘ಟಾಕ್ಸಿಕ್’ ಜೊತೆಗೇ ಸಿನಿಮಾ ಬಿಡುಗಡೆ ಮಾಡಿಯೇ ಸಿದ್ಧ ಎಂದು ಹಠಕ್ಕೆ ಬಿದ್ದಿದ್ದಾರೆ.
ಅಡವಿ ಶೇಷ್ ತೆಲುಗಿನ ಜನಪ್ರಿಯ ನಟ. ‘ಮೇಜರ್’, ‘ಗೂಡಚಾರಿ’ ಇನ್ನೂ ಕೆಲವಾರು ಸಿನಿಮಾಗಳಲ್ಲಿ ಅಡವಿ ಶೇಷ್ ನಟಿಸಿದ್ದಾರೆ. ಇದೀಗ ಅಡವಿ ಶೇಷ್ ‘ಡಕೈಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಮೃಣಾಲ್ ಠಾಕೂರ್ ಈ ಸಿನಿಮಾದ ನಾಯಕಿ. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿಲನ್. ಈ ಸಿನಿಮಾ ಸಹ ‘ಟಾಕ್ಸಿಕ್’ ಜೊತೆಗೆ ಮಾರ್ಚ್ 19 ರಂದು ತೆರೆಗೆ ಬರಲಿದೆಯಂತೆ. ಯುಗಾದಿ, ಗುಡಿ ಪಡ್ವಾ ಮತ್ತು ಈ ಹಬ್ಬಗಳು ಅದೇ ಸಮಯದಲ್ಲಿ ಇರುವ ಕಾರಣ ‘ಡಕೈಟ್’ ಸಿನಿಮಾ ಕೂಡ ಅದೇ ಸಮಯದಲ್ಲಿ ತೆರೆಗೆ ಬರಲು ಸಜ್ಜಾಗಿದೆ.
‘ಟಾಕ್ಸಿಕ್’ ಸಿನಿಮಾದ ಜೊತೆಗೆ ಬಿಡುಗಡೆ ಆಗುವುದರಿಂದ ಸಿನಿಮಾಕ್ಕೆ ಸಮಸ್ಯೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಅಡವಿ ಶೇಷ್, ‘ನಮಗೆ ‘ಟಾಕ್ಸಿಕ್’ ಬಗ್ಗೆ ಭಯ ಇಲ್ಲ. ನಾನು ಅಂಡರ್ಡಾಗ್ ಆಗಿಯೇ ಗೆದ್ದುಕೊಂಡು ಬಂದವನು. ಜನರಿಗೆ ಸರ್ಪ್ರೈಸ್ ನೀಡುತ್ತಲೇ ಬಂದಿದ್ದೇನೆ. ಜೊತೆಗೆ, 2018ರ ನೆನಪು ನನಗೆ ಚೆನ್ನಾಗಿದೆ, ‘ಕೆಜಿಎಫ್ ಚಾಪ್ಟರ್ 1’ ಸಿನಿಮಾ ಶಾರುಖ್ ಖಾನ್ ನಟನೆಯ ‘ಜೀರೊ’ ಸಿನಿಮಾದ ಎದುರು ಬಿಡುಗಡೆ ಆಗುತ್ತಿದೆ, ಸಿನಿಮಾ ವ್ಯಾಕರಣವನ್ನೇ ಬದಲಾಯಿಸಿತು’. ಆ ಮೂಲಕ ತಾವು ‘ಟಾಕ್ಸಿಕ್’ ಎದುರು ಬಿಡುಗಡೆ ಮಾಡಿ ಸಿನಿಮಾ ಗೆಲ್ಲಿಸುತ್ತೇವೆ.
ಇದನ್ನೂ ಓದಿ:ಹೇಗಿತ್ತು ನೋಡಿ ಯಶ್ ಮಗ ಯಥರ್ವ್ ಬರ್ತ್ತೇ ಸೆಲೆಬ್ರೇಷನ್; ಇಲ್ಲಿದೆ ವಿಡಿಯೋ
ಮಾತು ಮುಂದುವರೆಸಿ, ‘ಒಟ್ಟಿಗೆ ಸಿನಿಮಾಗಳು ಬಿಡುಗಡೆ ಆದರೆ ಸಿನಿಮಾಗಳು ಸೋಲುತ್ತವೆ ಎಂಬುದು ಸುಳ್ಳು. ‘ಲಗಾನ್’ ಹಾಗೂ ‘ಗದರ್’ ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗಿದ್ದವು. ಎರಡೂ ಸಹ ಬ್ಲಾಕ್ ಬಸ್ಟರ್ ಸಿನಿಮಾಗಳಾದವು. ಈ ಬಾಕ್ಸ್ ಆಫೀಸ್ ಕ್ಲ್ಯಾಶ್ ಗೆ ಮೀಡಿಯಾ ಸೃಷ್ಟಿ ಅಷ್ಟೆ. ಜನರಿಗೆ ಅದರ ಪರಿವೇ ಇಲ್ಲ. ಜನರಿಗೆ ಬೇಕಾಗಿರುವುದು ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವುದಷ್ಟೆ. ಸಿನಿಮಾ ಯಾವುದಾದರೇನು ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ’
‘ಡಕೈಟ್’ ಸಿನಿಮಾದಲ್ಲಿ ಅಡವಿ ಶೇಷ್, ಮೃಣಾಲ್ ಠಾಕೂರ್ ಮತ್ತು ಅನುರಾಗ್ ಕಶ್ಯಪ್ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಗಮನ ಸೆಳೆದಿದೆ. ಸಿನಿಮಾಕ್ಕೆ ಶ್ರುತಿ ಹಾಸನ್ ನಾಯಕಿಯಾಗಿ ಆಯ್ಕೆ ಆಗಿದ್ದರು, ಆದರೆ ಅವರ ಬದಲಿಗೆ ಮೃಣಾಲ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯ್ತು. ಸಿನಿಮಾದ ಚಿತ್ರೀಕರಣದ ವೇಳೆ ಅಡವಿ ಶೇಷ್ ಗೆ ಗಾಯವಾದ ಕಾರಣ ಸಿನಿಮಾದ ಚಿತ್ರೀಕರಣ ತಡವಾಗಿತ್ತು. ಇಲ್ಲ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 3:21 pm, ಬುಧವಾರ, 5 ನವೆಂಬರ್ 25