ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತು ಆಮಿಷ: ನೂರಾರು ಮಂದಿಗೆ ಮಕ್ಮಲ್​ ಟೋಪಿ; ಕೋಟಿ ರೂ. ವಂಚನೆ

ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತು ಆಮಿಷ: ನೂರಾರು ಮಂದಿಗೆ ಮಕ್ಮಲ್​ ಟೋಪಿ; ಕೋಟಿ ರೂ. ವಂಚನೆ


ಕಾರವಾರ, ನವೆಂಬರ್ 05: ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ ಹತ್ತಾರು ಅಂಗಡಿಗಳನ್ನು ವಿಚಾರಿಸುತ್ತೇವೆ. ಆನ್‌ಲೈನ್ ದರ ಜಾಸ್ತಿಯೋ? ಅಂಗಡಿಯಲ್ಲಿ ಕಡಿಮೆ ಬೆಲೆಗೆ ನೀಡಲಾಗ್ತಿದೆಯೋ ಎಂಬುದನ್ನೂ ನೋಡುತ್ತೇವೆ. ಹೀಗಿರುವಾಗ ಸೌಂದರ್ಯವೇ ಅತ್ಯಂತ ಕಡಿಮೆ ಬೆಲೆಗೆ ಇವನ್ನು ನಿಮಗೆ ನೀಡುತ್ತೇವೆ ಅಂದರೆ ಬೇಡ ಎನ್ನುವವರು ಯಾರು? ಇಂತಹುದ್ದೇ ಆಮಿಷವೊಂದಕ್ಕೆ ಒಳಗಾದ ನೂರಾರು ಮಂದಿಗೆ ವಂಚಕರು ಮಕ್ಮಲ್ ಟೋಪಿ ಹಾಕಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳ ನಡೆದಿದೆ.

ತಿಂಗಳ ಹಿಂದೆ ಭಟ್ಕಳದ ಕಟ್ಟಡ ಬಾಡಿಗೆ ಪಡೆದು ತಮಿಳುನಾಡು ಮೂಲದ ಉದಯಕುಮಾರ ಹಾಗೂ ರೆಂಗರಾಜು ಎಂಬವರು ಗ್ಲೋಬಲ ಎಂಟರ್ ಪ್ರೈಸೆಸ್ ಎಂಬ ಶಾಪ್ ಒಂದನ್ನು ಆರಂಭಿಸಿದ್ದರು. ಮಾರುಕಟ್ಟೆಯ ಬೆಲೆಯ ಅರ್ಧ ಬೆಲೆಯಲ್ಲಿ ಮಂಚ, ಫ್ರಿಡ್ಜ್, ವಾಷಿಂಗ್ ಮೆಷಿನ್, ಟೇಬಲ್, ಕುರ್ಚಿ, ಕುಕ್ಕರ್, ಮಿಕ್ಸಿ ಸೇರಿದಂತೆ ಇತರ ಗೃಹೋಪಯೋಗಿ ವಸ್ತುಗಳ ನೀಡೋದಾಗಿ ಪ್ರಚಾರ ಮಾಡಲಾಯಿತು. ಹಣ ಪಾವತಿಸಿ 10 ದಿನಗಳ ನಂತರ ಸರಕು ಶಿಫ್ಟಿಂಗ್ ಮಾಡುವ ಭರವಸೆ ನೀಡಿದ್ದ ವಂಚಕರು, ಮೊದಲ 3 ವಾರ ತಾವು ಹೇಳಿದಂತೆಯೇ ಗ್ರಾಹಕರಿಗೆ ಸೇವೆಯನ್ನು ನೀಡಲಾಗುತ್ತದೆ. ಆಮಿಷಕ್ಕೆ ಒಳಗಾದ ನೂರಾರು ಜನರು EMI ರೀತಿ ಹಣ ಕೊಟ್ಟು, ಗೃಹೋಪಯೋಗಿ ವಸ್ತುಗಳನ್ನು ಪಡೆಯಲು ಮುಗಿಬಿದ್ದಿದ್ದಾರೆ. ಗ್ಲೋಬಲ್ ಎಂಟರ್ ಪ್ರೈಸೆಸ್ಗೆ ಮುಂಗಡವಾಗಿ ಹಣವನ್ನೂ ವಾಪವತಿಸಿದ್ದಾರೆ. ಆದರೆ, ಕಳೆದ ಕೆಲ ವಾರಗಳಿಂದ ಕೇವಲ ಹಣ ಪಡೆಯುತ್ತಿದ್ದ ದುರುಳರು, ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗುತ್ತಿದ್ದಂತೆ ರಾತ್ರಿ ರಾತ್ರಿ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: EPFO ​​ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ವಂಚನೆ: ಆರೋಪಿಗಳ ಐಷಾರಾಮಿ ಜೀವನ ಕಂಡು ಪೊಲೀಸರಿಗೇ ಶಾಕ್!

ಕೈಗೆ ಸಿಕ್ಕಿದ್ದನ್ನು ದೋಚಿದ ಸಾರ್ವಜನಿಕರು

ವಂಚನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವ್ಯಾಪಾರಿಯೊಬ್ಬರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅಕ್ಟೋಬರ್ 14ರಂದು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ತಾವು ಮೋಸ ಹೋದ ವಿಷಯ ಗೊತ್ತಾಗಿದ್ದೇ ತಡ ನೂರಾರು ಜನರ ಅಂಗಡಿಗೆ ನುಗ್ಗಿದ್ದಾರೆ. ಅಂಗಡಿ ಬಾಗಿಲು ಮುರಿದು, ಕೈಗೆ ಸಿಕ್ಕಿದ್ದನ್ನು ದೋಚಿದ್ದಾರೆ. ಈ ವೇಳೆ ಆಕ್ರೋಶಿತರನ್ನು ನಿಯಂತ್ರಿಸಲು ಹರಸಾಹಸಪಟ್ಟ ಪ್ರಸಂಗವೂ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *