ಶಿವಮೊಗ್ಗ, (ನವೆಂಬರ್ 05): ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ (ಶಿವಮೊಗ್ಗ) ಅಂಬೇಡ್ಕರ್ ವಸತಿ ನಿಲಯದಲ್ಲಿ ನಡೆದಿದೆ. ವನಿಷಾ (21) ಮೃತ ವಿದ್ಯಾರ್ಥಿನಿ . ಶಿವಮೊಗ್ಗ ಕೋಟೆಯಲ್ಲಿರುವ ರಸ್ತೆ ಸಮಾಜ ಕಲ್ಯಾಣ ಇಲಾಖೆ ಡಾ. ಬಿ.ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದ ಟೆರೆಸ್ ಮೇಲೆ ವನಿಷಾ ಶವ ನೇಣು ಬಿಗಿದ ಸ್ಥಿತಿಯಲ್ಲಿದೆ. ಮನಿಷಾ ಮೃತದೇಹ ಹಾಸ್ಟೆಲ್ ಮಹಡಿ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.
ಶಿವಮೊಗ್ಗ ಡಿವಿಎಸ್ ಕಾಲೇಜ್ ನಲ್ಲಿ ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ವನಿಷಾ (21) ಇನ್ನೇನು ಕಾಲೇಜ್ ಹೋಗುವ ಸಮಯದಲ್ಲಿ ತಿಂಡಿ ಮಾಡಿಕೊಂಡು ಹಾಸ್ಟೆಲ್ ಟೆರೇಸ್ ಮೇಲೆ ಹೋಗಿದ್ದಾಳೆ. ಆದರೆ, ಸ್ವಲ್ಪ ಹೊತ್ತಿನ ಬಳಿಕ ಟ್ಯಾಂಕ್ ಪಕ್ಕದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮನಿಷಾ ಶವ ಇದೆ. ಟೆರೇಸ್ ಮೇಲೆ ಬಟ್ಟೆ ಹಾಕಲು ಹೋಗಿದ್ದ ವಿದ್ಯಾರ್ಥಿನಿರು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: 38ರ ಮಹಿಳೆಯ ಕಾಮದಾಹಕ್ಕೆ 19 ವರ್ಷದ ಯುವಕ ಬಲಿ: ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣು
ಮಗಳ ಸಾವಿನ ಸುದ್ದಿ ತಿಳಿದ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ. ಮಗಳು ಚೆನ್ನಾಗಿಯೇ ಇದ್ದಳು. ಹತ್ತಿರದಲ್ಲೇ ಇರುವ ತನ್ನವರಿಗೆ ಬಂದು ಹೋಗುತ್ತಿದ್ದಳು. ಆದರೆ ಏಕಾಏಕಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದ್ರೆ ಹೆತ್ತವರಿಗೆ ನಂಬಲು ಆಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತ ಯಾವುದೇ ದೊಡ್ಡ ಸಮಸ್ಯೆ ಅವಳಿಗೆ ಯಾವುದೇ ಸಂಬಂಧವಿಲ್ಲ ಎಂಬ ಮಾತು. ಹೀಗಾಗಿ ಹಾಸ್ಟೆಲ್ ನಲ್ಲೇ ನೇಣು ಹಾಕಿಕೊಂಡಿರುವುದು ನೂರೆಂಟು ಅನುಮಾನಗಳನ್ನು ಹುಟ್ಟಿಹಾಕಿದೆ.
ಸಾಯುವ ಹಿಂದಿನ ರಾತ್ರಿ ಮನಿಷಾ ಫೋನಿನಲ್ಲಿ ತಾಯಿ ಜೊತೆ ಮಾತನಾಡಿದ್ದು, ಬೆಳಗ್ಗೆ ನಮಗೆ ಬರುತ್ತೇನೆಂದು ಹೇಳಿದ್ದಳು. ಆದರೆ, ನನಗೆ ಶವವಾಗಿ ಹೋಗಿದ್ದಾಳೆ. ಬಡತನ ನಡುವೆ ಮಗಳಿಗೆ ವಿದ್ಯಾಭ್ಯಾಸ ಕೊಡುವುದೇ ದೊಡ್ಡ ಸವಾಲು ಆಗಿತ್ತು. ಈಗ ಮಗಳ ಸಾವನಿಂದ ತಾಯಿಗೆ ದಿಕ್ಕೇ ತೋಚ.
ವನಿಷಾ ತುಂಬಾ ಪ್ರತಿಭಾವಂತ ವಿದ್ಯಾರ್ಥಿನಿ, ಬಡತನ ನಡುವೆ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ನಿನ್ನೆ ಮತ್ತು ಇಂದು ಹಾಸ್ಟೆಲ್ ವಾರ್ಡನ್ ಸ್ವಪ್ನಾ ಎಲ್ಲಾ ವಿದ್ಯಾರ್ಥಿನಿಯರ ಮುಂದೆ ಮನಿಷಾಗೆ ಬೈದಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸೋದರ ಮಾವ ಮಂಜುನಾಥ್ ನೇರ ಆರೊಪಿಸಿದ್ದಾರೆ.
ಮನಿಷಾ ಸಾವಿನ ಬಳಿಕ ವಾರ್ಡನ್, ಕುಟುಂಬಸ್ಥರಿಗೆ ಕರೆ ಮಾಡಿ ಮಾತ್ರ ಕರೆದುಕೊಂಡು ಬಂದಿದ್ದಾಳೆ ಬೇಗ ಬನ್ನಿ ಎಂದು ಹೇಳಿದ್ದಾರೆ. ಇಲ್ಲ, ಬಿಟ್ಟು, ನೇಣು ಹಾಕಿಕೊಂಡಿರುವ ಸಂಗತಿ ಮಾತ್ರ ವಾರ್ಡನ್ ಹೇಳಿದ್ದು ಏಕೆ ಎಂದು ಮೃತರ ಪ್ರಶ್ನೆ ಎಂದು, ಸಾವಿನ ಬಗ್ಗೆ ತನಿಖೆ ಮಾಡಲು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಈ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿ ವಿದ್ಯಾರ್ಥಿನಿಯ ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿದುಬರಬೇಕಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 7:40 pm, ಬುಧವಾರ, 5 ನವೆಂಬರ್ 25