Headlines

ನಮ್ಮ ಮೆಟ್ರೋ ಪ್ರಯಾಣಕರಿಗೆ ಮತ್ತೆ ಟಿಕೆಟ್ ದರ ಏರಿಕೆಯ ಶಾಕ್! ಈ ಬಾರಿ ಎಷ್ಟು?

ನಮ್ಮ ಮೆಟ್ರೋ ಪ್ರಯಾಣಕರಿಗೆ ಮತ್ತೆ ಟಿಕೆಟ್ ದರ ಏರಿಕೆಯ ಶಾಕ್! ಈ ಬಾರಿ ಎಷ್ಟು?


ಬೆಂಗಳೂರು, (ನವೆಂಬರ್ 05): ನಮ್ಮ ಮೆಟ್ರೋ (ನಮ್ಮ ಮೆಟ್ರೋ) ಪ್ರಯಾಣಿಕರಿಗೆ ಮತ್ತೊಮ್ಮೆ ದರ ಏರಿಕೆ ಬಿಸಿ ತಟ್ಟಲಿದೆ. ಹೌದು…ಇನ್ನೂ ಮೂರೇ ತಿಂಗಳಲ್ಲೇ ಮತ್ತೆ ಮೆಟ್ರೋ ದರ ಮತ್ತಷ್ಟು ಏರಿಕೆ ಆಗಲಿದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ 5% ರಷ್ಟು ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್ ಸಿಎಲ್ (BMRCL) ಮುಂದಾಗಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ತಪ್ಪು ಲೆಕ್ಕದಿಂದ ದೇಶದಲ್ಲೇ ನಮ್ಮ ಮೆಟ್ರೋ ದುಬಾರಿ ಮೆಟ್ರೋ ಅನ್ನಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಪ್ರತಿವರ್ಷ 5% ರಷ್ಟು ಏರಿಕೆ ಮಾಡಿದ್ರೆ, ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಇಡೀ ದೇಶದಲ್ಲೇ ದುಬಾರಿ ಟಿಕೆಟ್ ದರ ಇರೋ ಮೆಟ್ರೋ ಎಂಬ ಕುಖ್ಯಾತಿ ಸಹ ನಮ್ಮ ಮೆಟ್ರೋದ ಮೇಲಿದೆ. ಇನ್ಮುಂದೆ ಪ್ರತಿ ವರ್ಷ ಫೆಬ್ರವರಿಯಲ್ಲಿ ಶೇಕಡಾ 5ರಷ್ಟು ಬೆಲೆ ಏರಿಕೆಗೆ ಬಿಎಂಆರ್ ಸಿಎಲ್ ನ ನಿಗದಿತ ಸಮಿತಿ ಶಿಫಾರಸ್ಸು ಮಾಡಿದೆ.ಇದರ ಪ್ರಕಾರ 2026ರ ಫೆಬ್ರವರಿಯಲ್ಲಿ ಮತ್ತೊಮ್ಮೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಆಗೋದು ಗ್ಯಾರಂಟಿ.

ಇದನ್ನೂ ಓದಿ: ಬೆಂಗಳೂರು, ದೆಹಲಿ, ಮುಂಬೈ ಮೆಟ್ರೋ ದರ ವ್ಯತ್ಯಾಸವೆಷ್ಟು? ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ತೇಜಸ್ವಿ ಸೂರ್ಯ

ಇನ್ನೂ ಮೂರೇ ತಿಂಗಳಲ್ಲೇ ಮತ್ತೆ ಮೆಟ್ರೋ ದರ ಹೆಚ್ಚಾಗಲಿದೆ, ಈ ವರ್ಷ ಮಾಡಿರುವ ದರ ಏರಿಕೆ ತಪ್ಪಿನಿಂದ ಮುಂದಿನ ವರ್ಷಗಳಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ ಆಗಲಿದೆ ಅನ್ಸುತ್ತೆ. ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರು ಮೊದಲು ತಪ್ಪು ಲೆಕ್ಕ ಕೊಟ್ಟು ಏರಿಕೆ ಮಾಡಿರುವ ದರವನ್ನು ಇಳಿಸಲಿ, ನಂತರ ಪ್ರತಿವರ್ಷ ಬೇಕಾದರೆ 5% ರಷ್ಟು ಏರಿಕೆ ಮಾಡಲಿ ಅಂತಿದ್ದಾರೆ.

ನಮ್ಮ ಮೆಟ್ರೋ ಅಧಿಕಾರಿಗಳು ಫೆಬ್ರವರಿ 9 ರಂದು 105.5% ದರ ಏರಿಕೆ ಮಾಡಿದ್ದು, ಈ ಒನ್ ಟು ಡಬಲ್ ದರ ಏರಿಕೆಯನ್ನು ವಿರೋಧಿಸಿ ಪ್ರಯಾಣಿಕರು ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಲ್ಲೇ 71.5% ಕ್ಕೆ ಟಿಕೆಟ್ ದರ ಇಳಿಸಲಾಗಿದೆ. ಆದರೆ ಈ ದರವೇ ಸರಿಯಲ್ಲ ದರ ಏರಿಕೆ ಸಮಿತಿ ಮುಂದೆ ತಪ್ಪು ಲೆಕ್ಕ ನೀಡಿ ಪ್ರಯಾಣಿಕರಿಂದ ದುಪ್ಪಟ್ಟು ವಸೂಲಿ ಮಾಡಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ವಿವರವಾಗಿ ಬಹಿರಂಗಪಡಿಸಿದ್ದಾರೆ. ಈ ಸಂಬಂಧದ ಪರ ವಿರೋಧದ ಚರ್ಚೆಗಳು ನಡೆಯಲಿರುವ ಬಿಎಂಆರ್‌ಸಿಎಲ್ ಮತ್ತೆ ಮೆಟ್ರೋ ಟಿಕೆಟ್ ದರ ಏರಿಕೆಗೆ ಮುಂದಾಗಿದ್ದು, ಬೆಂಗಳೂರಿಗರಿಗೆ ಮತ್ತೆ ದರ ಏರಿಕೆ ಬಿಸಿ ತಟ್ಟಲಿದೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ತಪ್ಪು ಲೆಕ್ಕ ನೀಡಿತಾ BMRCL? ಗಣಿತ ಪಾಠದ ಅವಶ್ಯಕತೆ ಇದೆ ಎಂದ ತೇಜಸ್ವಿ ಸೂರ್ಯ

ಒಟ್ಟಿನಲ್ಲಿ ಮೆಟ್ರೋ ಪ್ರಯಾಣಿಕರು ದರ ಏರಿಕೆಯ ಶಾಕ್ ನಿಂದ ಹೊರಬಂದಿಲ್ಲ. ಮತ್ತೆ ದರ ಏರಿಕೆ ಅನ್ನೋದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.



Source link

Leave a Reply

Your email address will not be published. Required fields are marked *