ಹೇಳಲೋ, ಬೇಡವೋ ಎಂದು ಅಂಜುತ್ತಲೇ Bigg Boss 12ರ ವಿನ್ನರ್​ ಘೋಷಿಸಿದ ಮಲ್ಲಮ್ಮ- ಇವರೇ ಅವರು!

ಹೇಳಲೋ, ಬೇಡವೋ ಎಂದು ಅಂಜುತ್ತಲೇ Bigg Boss 12ರ ವಿನ್ನರ್​ ಘೋಷಿಸಿದ ಮಲ್ಲಮ್ಮ- ಇವರೇ ಅವರು!

ಹೇಳಲೋ, ಬೇಡವೋ ಎಂದು ಅಂಜುತ್ತಲೇ Bigg Boss 12ರ ವಿನ್ನರ್​ ಘೋಷಿಸಿದ ಮಲ್ಲಮ್ಮ- ಇವರೇ ಅವರು!

ಬಿಗ್​ಬಾಸ್​ ಮನೆಯಿಂದ ಅನಿರೀಕ್ಷಿತವಾಗಿ ಹೊರಬಂದ ಮಲ್ಲಮ್ಮ, ತಮ್ಮ ಎಲಿಮინೇಷನ್‌ಗೆ ಕಾಂಟ್ರವರ್ಸಿ ಇಲ್ಲದಿರುವುದೇ ಕಾರಣ ಎಂಬ ಚರ್ಚೆಯ ನಡುವೆ, ಬಿಗ್ ಬಾಸ್ 12ರ ವಿನ್ನರ್ ಯಾರೆಂದು ಅಳುಕುತ್ತಲೇ ಗಿ  ಹೆಸರನ್ನು ಸೂಚಿಸಿದ್ದಾರೆ. ಅವರು ಹೇಳಿದ್ದು ಯಾರ ಹೆಸರನ್ನು?

ಬಿಗ್​ಬಾಸ್​ (Bigg Boss) ಮಲ್ಲಮ್ಮ ಅಪಾರ ಜನಮೆಚ್ಚುಗೆ ಗಳಿಸಿದರೂ ಅತಿ ಶೀಘ್ರದಲ್ಲಿ ಮನೆಯಿಂದ ಹೊರಕ್ಕೆ ಬಂದು ಶಾಕ್​ ಮೂಡಿಸಿದವರು. ಇವರು ಮನೆಯಿಂದ ಹೊರಕ್ಕೆ ಇಷ್ಟು ಬೇಗ ಬಂದಿರುವುದಕ್ಕೆ ವಿಭಿನ್ನ ಕಾರಣಗಳನ್ನು ನೀಡಲಾಗುತ್ತಿದೆ.

ಇವರು ಈ ಮೊದಲೇ ಬಂದಿರುವುದಾಗಿ ಸುದ್ದಿ ಹರಡಿದ್ದರಿಂದ ವೋಟಿಂಗ್​ ಕಡಿಮೆಯಾಯಿತು ಎನ್ನಲಾಗುತ್ತಿದೆಯಾದರೂ, ಯಾರೊಂದಿಗೂ ಜಗಳ ಮಾಡದೇ ತಮ್ಮ ಪಾಡಿಗೆ ತಾವು ಇರುವ ಸ್ಪರ್ಧಿಗಳು ಬಿಗ್​ಬಾಸ್​ಗೆ ಬೇಡ. ಕಚ್ಚಾಡುವ, ಜಗಳವಾಡುವ, ಅಶ್ಲೀಲತೆಯಿಂದಲೇ ಫೇಮಸ್​ ಆಗಿ ಟಿಆರ್​ಪಿ ಹೆಚ್ಚಿಸುವ ಸ್ಪರ್ಧಿಗಳು ಕೊನೆಯವರೆಗೂ ಇರುತ್ತಾರೆ, ಆದ್ದರಿಂದ ಒಳ್ಳೆಯವರಿಗೆ ಅವಕಾಶಗಳು ಕಡಿಮೆ ಎನ್ನುವ ಆರೋಪಗಳು ಕೂಡ ಇದಾಗಲೇ ಹಲವು ಭಾಷೆಗಳ ಬಿಗ್​ಬಾಸ್​​ನಿಂದ ಬಂದಿದ್ದಿದೆ.

ಅವರನ್ನು ಹೊರಕ್ಕೆ ಬರಬೇಕು, ಇವರು ಹೊರಕ್ಕೆ ಬರಬೇಕು, ಆಕೆ ಅಂಥವಳು, ಇವನು ಇಂಥವನು ಎಂದೆಲ್ಲಾ ಒಂದಿಷ್ಟು ಮಂದಿಯ ಹೆಸರನ್ನು ಸೋಷಿಯಲ್​ ಮೀಡಿಯಾದಲ್ಲಿ ದಿನವೂ ಹಾಕಲಾಗುತ್ತದೆ. ಇದರ ಅರ್ಥ ಅವರನ್ನು ನೋಡುವುದಕ್ಕಾಗಿಯೇ ಹೇಗೆ ಜನರು ಕಾತರದಿಂದ ಕಾಯುತ್ತಾರೆ, ಅವರಿಂದಲೇ ಷೋ ಕಳೆ ಹೆಚ್ಚುತ್ತದೆ ಎನ್ನುವುದು ಇದರ ಅರ್ಥ.

ಅದೇನೇ ಇದ್ದರೂ ಮಲ್ಲಮ್ಮ ಅಂತೂ ಹೊರಕ್ಕೆ ಬಂದಾಗಿದೆ. ಕಾಂಟ್ರವರ್ಸಿ ಮಾಡಿಕೊಳ್ಳದೇ ಇರುವವರಿಗೆ ಬಿಗ್​ಬಾಸ್​ನಲ್ಲಿ ಹೆಚ್ಚು ದಿನ ಇರುವ ಅವಕಾಶ ಇಲ್ಲ ಎನ್ನುವುದು ಈ ಮೂಲಕ ಸಾಬೀತಾಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಇದಾಗಲೇ ಭಾರಿ ಅಸಮಾಧಾನದ ಹೊಗೆಯೂ ಆಡುತ್ತಿದೆ.

ಹಾಗಿದ್ದರೆ ಬಿಗ್​ಬಾಸ್​ 12ರ ವಿನ್ನರ್​ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಹಲವರು ಇದಾಗಲೇ ಗಿಲ್ಲಿ ನಟನ ಹೆಸರನ್ನು ಹೇಳಿದ್ದಾರೆ. ಕೆಲವರು ಕಾವ್ಯಾ ಶೈವ ಹೆಸರು ಹೇಳುತ್ತಿದ್ದರೆ, ಮತ್ತೆ ಕೆಲವರು ವಿಭಿನ್ನ ಸ್ಪರ್ಧಿಗಳ ಹೆಸರು ಹೇಳುತ್ತಿದ್ದಾರೆ.

ಇದೀಗ ಮಲ್ಲಮ್ಮ ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಗಿದೆ. ಕೆಲವು ಮಾಧ್ಯಮಗಳಿಗೆ ಈ ಬಗ್ಗೆ ಉತ್ತರಿಸಿದ್ದ ಮಲ್ಲಮ್ಮ,ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ, ಯಾರು ಬೇಕಾದರೂ ಬರಲಿ ಎನ್ನುತ್ತಿದ್ದರು. ಆದರೆ ಇದೀಗ ಓಪನ್​ ಅಪ್​ ಆಗಿರೋ ಮಲ್ಲಮ್ಮ, ಅಳುಕುತ್ತಲೇ ಹೇಳಲೋ ಬೇಡವೋ ಎನ್ನುತ್ತಲೇ ಗಿಲ್ಲಿ ನಟ (Gilli Nata) ಹೆಸರು ಹೇಳಿದ್ದಾರೆ.

ಹಾಸ್ಯದಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಿರುವ ಗಿಲ್ಲಿ ನಟ ಅವರಿಗೆ ಇದಾಗಲೇ ಭಾರಿ ಡಿಮಾಂಡ್​ ಕೂಡ ಇದೆ. ಕಾಂಟ್ರವರ್ಸಿ ಇದ್ದರಷ್ಟೇ ಬಿಗ್​ಬಾಸ್​ನಲ್ಲಿ ಬೆಲೆ ಎನ್ನುವುದಕ್ಕೆ ವಿಭಿನ್ನವಾಗಿ ಹಾಸ್ಯದಿಂದಲೇ ಎಲ್ಲರನ್ನೂ ನಗಿಸುತ್ತಾ ಇರುವ ಸ್ಪರ್ಧಿ ಕೂಡ ಬಿಗ್​ಬಾಸ್​ಗೆ ಯೋಗ್ಯ ಇರಲು ಸಾಧ್ಯ ಎನ್ನುವುದನ್ನು ಗಿಲ್ಲಿ ನಟ ತೋರಿಸುತ್ತಿದ್ದಾರೆ. ಇದೀಗ ಅವರದ್ದೇ ಹೆಸರನ್ನು ಮಲ್ಲಮ್ಮ ಕೂಡ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *