Headlines

Horoscope Today 06 November : ಇಂದು ಈ ರಾಶಿಯವರು ಪ್ರೇಮಕ್ಕೆ ವಶವಾದರೂ ಒಪ್ಪಿಕೊಳ್ಳಲಾರರು

Horoscope Today 06 November : ಇಂದು ಈ ರಾಶಿಯವರು ಪ್ರೇಮಕ್ಕೆ ವಶವಾದರೂ ಒಪ್ಪಿಕೊಳ್ಳಲಾರರು


Horoscope Today 06 November : ಇಂದು ಈ ರಾಶಿಯವರು ಪ್ರೇಮಕ್ಕೆ ವಶವಾದರೂ ಒಪ್ಪಿಕೊಳ್ಳಲಾರರು

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಕಾರ್ಯಕ್ರಮ : ಶರದ್, ಚಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಸೂರ್ಯ ಕೃತ್ತಿಕಾ, ಯೋಗ : ವ್ಯತಿಪಾತ್, ಕರಣ – – 10 am 6 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:30 – 14:57, ಗುಳಿಕ ಕಾಲ 09:10 – 10:36, ಯಮಗಂಡ ಕಾಲ 06:16 – 07:43

ಮೇಷ ರಾಶಿ :

ಕಳೆದಲ್ಲಿಯೇ ಹುಡುಕುವುದು ಅನ್ವೇಷಣೆಯ ಕ್ರಮ. ಹಠದ ಸ್ವಭಾವವೂ ಹೌದು. ಅಪಕ್ವವಾದ ಮಾತುಗಳಿಗೆ ಅವಕಾಶ ಕೊಡಬೇಡಿ. ಹೇಳಿಕೊಳ್ಳುವ ಸಾಧನೆ ಅಲ್ಲದಿದ್ದರೂ ಒಮ್ಮೊಮ್ಮೆ ಹೇಳಿಕೊಳ್ಳುವುದು. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುತ್ತದೆ. ಇಂದಿನ ಕೆಲಸದಲ್ಲಿ ಮಂದಗತಿ ಇರಲಿದೆ. ಇತರರಿಂದ ಗೌರವ ಪ್ರಾಪ್ತವಾಗುತ್ತದೆ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ ಇರಲಿದೆ. ನಿರಂತರ ಘಾಸಿಯಿಂದ ಶಿಲೆಯಂತೆ ಸ್ಥಾಯಿಯಾಗಲು ಸಾಕು. ಸ್ನೇಹಿತರ ಜೊತೆ ನೋವನ್ನು ಹಂಚಿಕೊಂಡು ಸಮಾಧಾನ ತಂದುಕೊಳ್ಳುವಿರಿ. ತಂದೆಯ ಜೊತೆ ಅಪರೂಪದ ಸಮಾರಂಭಕ್ಕೆ ಹೋಗುವಿರಿ. ನೆರಳಿನಾಟದ ಕಲಾವಿದರಿಗೆ ಬೇಡಿಕೆ ಬರಲಿದೆ. ಖರೀದಿಯಲ್ಲಿ ನೀವು ಸ್ಥೂಲವಾಗಿ ಖರ್ಚನ್ನು ಅಂದಾಜಿಸಿಕೊಳ್ಳಿ. ಮಕ್ಕಳು ನಿಮ್ಮ ಬಳಿ ಹೊಸತನ್ನು ತಿಳಿದುಕೊಳ್ಳಲು ಬಯಸುವರು. ಇಂದು ನೀವು ನಿಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತೀರಿ. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡುವಿರಿ.

ವೃಷಭ ರಾಶಿ :

ನಿಮ್ಮ ಅಸ್ಮಿತೆಯನ್ನ ಬಿಟ್ಟುಕೊಡಲಾರಿರಿ. ವಿಭಿನ್ನವಾಗಿ ಯಾವುದನ್ನಾದರೂ ಮಾಡಬಹುದು. ಆದರೆ ಅದು ಸ್ವೀಕಾರ್ಯವೇ ಎಂಬುದೂ ಮುಖ್ಯ. ಯಾವುದನ್ನೂ ಸಹಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿ ಇರದು. ವಾಸಸ್ಥಳವನ್ನು ನೀವು ಇಂದು ಬದಲಿಸುವ ಆಲೋಚನೆ ಮಾಡುವಿರಿ. ಸರ್ಕಾರದ ನಿಮ್ಮ ಕೆಲಸವು ಬೇಗನೆ ಮುಗಿದುಹೋಗುವುದು. ಆಭರಣ ಜೋರಾಗಿ ನಡೆಯುವುದು. ಮಾರಾಟದ ವಿಚಾರವಾಗಿ ನೀವು ಬೇರೆಯವರಿಗೆ ಹೋಗಬೇಕಾಗಬಹುದು. ನಿಮಗೆ ಅವಿವಾಹಿತನಾಗಿದ್ದೇನೆ ಎಂಬ ಕೊರಗು ಕಾಡಬಹುದು. ನಿಮ್ಮ ಸ್ವಭಾವಕ್ಕೆ ಹೊಂದಿಕೊಳ್ಳುವ ಸಂಗಾತಿಯು ಸಿಗುವುದು ಕಷ್ಟವಾದೀತು. ಆತ್ಮಾಭಿಮಾನವು ಅಹಂಕಾರವಾಗಿ ಪರಿವರ್ತನೆಯಾಗುವುದು. ಇಂದು ಮಾಡುವ ಪ್ರಯಾಣದಲ್ಲಿ ಅಪರಿಚಿತರ ಗೆಳೆತನವಾಗಬಹುದು. ನಿಮ್ಮ ಎಲ್ಲ ವಿವರಗಳನ್ನು ಇತರರ ಜೊತೆ ಹೇಳಿಕೊಳ್ಳುವುದು ಬೇಡ. ಯಾರನ್ನೂ ಉಪಯೋಗಿಸಲು ಹೋಗಬೇಡಿ. ಉದ್ಯೋಗದಲ್ಲಿ ಯಾವುದಾದರೊಂದು ರೀತಿಯಲ್ಲಿ ಪ್ರಗತಿಯನ್ನು ಸಾಧಿಸಲು ಹೆಜ್ಜೆ ಇಡಿ.

ಮಿಥುನ ರಾಶಿ :

ನಿಂದನೆಯಿಂದ ಮಾತ್ರ ಕಾರ್ಯಸಾಧನೆಯು ಆಗುವುದಾದರೆ ಅದನ್ನು ಮಾಡಿ ಕ್ಷಮೆಯನ್ನು ಯಾಚಿಸಿ. ಇಂದು ಮಾಡುವ ಕಾರ್ಯವನ್ನು ಮುಂದೂಡುವುದು ಬೇಡ. ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬಂತೆ ಎಲ್ಲರಿಗೂ ಬೈಯುತ್ತ ಇರುವಿರಿ. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಟವಿರುವುದು. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾದೀತು. ಉದ್ಯಮವು ಒಂದೊಂದೇ ಹೆಜ್ಜೆ ಬೆಳೆಯುತ್ತಿರುವುದು ಸಂತೋಷ ಕೊಡುವುದು. ನಿಮ್ಮ ಕೆಲಸಕ್ಕೆ ಇಂದೇ ಫಲ ನೀಡಬೇಕು ಮೂರ್ಖತನವಾದೀತು. ಅಪರಿಚಿತರಿಗೆ ನೀವು ಹಣವನ್ನು ಕೊಡುವಿರಿ. ಮೈಮರೆತು ಇಂದಿನ ತುರ್ತು ಕಾರ್ಯವನ್ನು ಮರೆಯುವಿರಿ. ಪರಾಕ್ರಮದ ಪ್ರದರ್ಶನ ನಿಮ್ಮಿಂದಾಗಲಿದೆ. ಅಸಹಜ ವರ್ತನೆಯಿಂದ ಸಂಗಾತಿಗೆ ಅನುಮಾನ ಬರಲಿದೆ. ಮನೆಯ ಹಿರಿಯರನ್ನು ಅನಾದರದಿಂದ ನೋಡುವುದು ಉಚಿತವಲ್ಲ. ಆತುರವು ಕಡಿಮೆ ಆದರೆ ಕೆಲಸವೂ ಸುಲಲಿತವಾದಂತೆ. ನಿಮ್ಮ ಕಚೇರಿಯಲ್ಲಿ ಉಂಟಾದ ಅಸಮಾಧಾನವನ್ನು ಆಪ್ತರ ಜೊತೆ ಹಂಚಿಕೊಳ್ಳಲು. ಇಂದು ನೀವು ಬಹಳ ಸಿಟ್ಟಾಗಿದ್ದರೂ ಬೇಗ ಶಾಂತರಾಗುವಿರಿ.

ಕರ್ಕಾಟಕ ರಾಶಿ :

ಮಕ್ಕಳ ದುರಭ್ಯಾಸಕ್ಕೆ ಚಿಕಿತ್ಸೆ ಬುದ್ಧಿಯಿಂದ ಕಾರ್ಯ ಮಾಡಿ. ಒಳ್ಳೆಯ ಗುಣಗಳೇ ನಿಮಗೆ ಸತ್ಫಲವನ್ನು ಕೊಡುವುದು. ಉದ್ಯೋಗದ ಕಾರಣದಿಂದ ಅನಾರೋಗ್ಯ ಕಾಣಿಸಿಕೊಳ್ಳಬಹುದು. ಭೂಮಿಯಿಂದ ಅಧಿಕ ಲಾಭ ಪಡೆಯಲು ಚರ್ಚೆಗಳು ಆಗಬಹುದು. ದುಸ್ಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ಪ್ರಯತ್ನಿಸುವುದು ಬೇಡ. ಸಂಬಂಧದ ವಿಚಾರದಲ್ಲಿ ದೃಷ್ಟಿ ಬದಲಾದರೆ ಸಾಕು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ಇಂದಿನ ಮನೆಯ ಕೆಲಸದಿಂದ ನಿಮಗೆ ಶ್ರಮವಾಗುವುದು. ಕೃಷಿ ಚಟುವಟಿಕೆಯಲ್ಲಿ ಹೆಚ್ಚು ತೊಡಗುವಿರಿ. ಆಸ್ತಿ ಖರೀದಿಯ ಬಗ್ಗೆ ಎಲ್ಲರ ಜೊತೆ ಕಲಹವಾಗುವುದು. ಹಳೆಯ ಆಸೆಯನ್ನು ನೀವು ತೀರಿಸಿಕೊಳ್ಳುವ ಅವಕಾಶವಿರಲಿದೆ. ಕೆಲವು ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲುವುದೇ ಉತ್ತಮ. ಇಂದು ನಿಮ್ಮ ಅನಗತ್ಯ ಮಾತುಗಳು ಕಲಹಕ್ಕೆ ಬದಲಾಗಿ. ಇತರರ ವಸ್ತುಗಳನ್ನು ನೀವು ಹಾಳು ಮಾಡುತ್ತೀರಿ. ವಿದ್ಯಾಭ್ಯಾಸದ ಸಾಲವನ್ನು ನೀವು ತೀರಿಸುವಿರಿ.

 

ಸಿಂಹ ರಾಶಿ :

ನಿಮ್ಮೊಳಗಿನ ಆಗಾಧ ಪ್ರೇಮವೂ ಕೆಲವು ಬಾರಿ ಗುರುತಿಗೆ ಸಿಗದು. ಇಂದು ಯಾರ ಮಾತನ್ನೂ ಎದುರಿಸುವ ಸಾಮರ್ಥ್ಯ ಇರದು. ತಂದೆಯ ಮನಸ್ಸನ್ನು ಅರಿತು ಅವರ ಜೊತೆ ವ್ಯವಹರಿಸಿ. ಇಂದು ನಿಮ್ಮ ಹಿತಶತ್ರುಗಳಿಂದ ತೊಂದರೆ ಕೊಡಬಹುದು. ನಾಯಕತ್ವದ ಗುಣವನ್ನು ಹೆಚ್ಚು ಮಾಡಿಕೊಳ್ಳಬೇಕು. ಮನೆಗೆ ಸಹಕಾರವನ್ನು ನೀವು ನೀಡಲಿದೆ ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಷ್ಕಾಮದಿಂದ ಮಾಡಿದ ಕೆಲಸಕ್ಕೆ ಕೀರ್ತಿಯೇ ಲಾಭ. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ರಾಜಕೀಯದ ಒಡನಾಟ ನಿಮ್ಮಲ್ಲಿ ನಕಾರಾತ್ಮಕ ಅಂಶವನ್ನು ಹೆಚ್ಚಿಸಬಹುದು. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯಲ್ಲಿ ಬೇಸರ ಉಂಟಾಗಿದ್ದು ಹೊರಗೆ ಸುತ್ತಾಡುವ, ವಿರಾಮವನ್ನು ಪಡೆಯುವ ಮನಸ್ಸು ಇರಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲವಾದೀತು. ಹೂಡಿಕೆಯನ್ನು ಬಹಳ ಮುತುವರ್ಜಿಯಿಂದ ಮಾಡಬೇಕಾದೀತು. ಅಪರಿಚಿತರ ಹಸಿವನ್ನು ನೀಗಿಸುವಿರಿ.

ಕನ್ಯಾ ರಾಶಿ :

ಇಂದು ದೈಹಿಕವಾದ ನೋವನ್ನು ಸಹಿಸುವ ಶಕ್ತಿ ಗೊತ್ತಿಲ್ಲದಂತೆ ಬರಲಿದೆ. ದೈವಾನುಗ್ರಹಕ್ಕೆ ಬೇಕಾದ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಮಕ್ಕಳ ಮೇಲಿನ ಮೋಹಕ್ಕೆ ಅವರ ತಪ್ಪನ್ನು ತಿದ್ದಲಾರಿರಿ. ಸ್ನೇಹಿತರಿಂದ ಇಂದು ಮನೆ ತುಂಬಲಿದೆ. ವ್ಯಾಪಾರದಲ್ಲಿ ಹಿತಶತ್ರುಗಳ ಕಾಟದಿಂದ ನಿಮಗೆ ತೊಂದರೆಯಾಗಬಹುದು. ಇದರಿಂದ ನಿಮ್ಮ ನೆಮ್ಮದಿಯೂ ದೂರವಾದೀತು. ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ವಿವಾಹಕ್ಕೆ ಸ್ಪಷ್ಟವಾದ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಕಡಿಮೆ ಮಾತಾಡುವುದು ಇಂದು ಸಾಧ್ಯವಾಗಿಲ್ಲ. ನಿಮ್ಮವರ ತಪ್ಪುಗಳನ್ನು ತಿದ್ದಲು ಸಮಯವನ್ನು ಕೊಡಿ. ಭೂಮಿಯ ವ್ಯವಹಾರದಿಂದ ಅಲ್ಪ ಅಭಿವೃದ್ಧಿಯು ಆಗಲಿದೆ. ಸಾಲದ ಹೊರೆಯನ್ನು ಸ್ವಲ್ಪ ಇಳಿಸಲು ಸಾಧ್ಯವಿಲ್ಲ. ನಿಮ್ಮ ಜೊತೆ ಇಂದಿನ ಸಮಯವನ್ನು ಕಳೆಯುವಿರಿ. ಸಂಗಾತಿಯ ಬಗ್ಗೆ ಹೆಚ್ಚು ಕರುಣೆ ಬರಬಹುದು.

ತುಲಾ ರಾಶಿ :

ವಸ್ತ್ರವಿನ್ಯಾಸದವರಿಗೆ ಬೇಡಿಕೆ ಬರಲಿದೆ. ಯಾವುದಾದರೂ ಒಳ್ಳೆಯ ವೇತನದ ಉದ್ಯೋಗಕ್ಕೆ ಸೇರುವಿರಿ. ನ್ಯಾಯಕ್ಕೆ ಬೇಕಾದ ಸೂಕ್ತ ಸಾಕ್ಷಿಯ ಕೊರತೆ ಇರುವುದು. ಸರ್ಕಾರದ ಕೆಲಸದಲ್ಲಿ ಗೊತ್ತಿರದ ತಪ್ಪುಗಳು ಆಗಬಹುದು. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಗಾಗಿದೆ. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದರೆ ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ಮಂಗಲಕರವಾದ ವಸ್ತುಗಳಿಂದ ಖರೀದಿಮಾಡುವಿರಿ. ದುರ್ವ್ಯಸನದಿಂದ ಸಂಪತ್ತನ್ನು ನಷ್ಟ ಮಾಡಿಕೊಳ್ಳುವಿರಿ. ನಿಂತ ಸ್ಥಳದಿಂದ ನಿಮ್ಮನ್ನು ಕದಲಬಹುದು. ನಿಮ್ಮ ತಪ್ಪಿಗೆ ಪಶ್ಚಾತ್ತಾಪವಾದರೂ ಕೊನೆಯ ಹಂತವಾಗಿ ಇರಲಿ. ಕುಟಂಬದವರು ಸೇರಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಹೊಸ ವ್ಯವಹಾರವನ್ನು ಆರಂಭಿಸಿರುವವರಿಗೆ ಪೂರ್ಣ ಚಿತ್ರಣವು ಸಿಗದು. ಹಿರಿಯರ ಎದುರು ಸಭ್ಯತೆಯಿಂದ ನಡೆದುಕೊಳ್ಳಿ. ಎದುರಾಳಿಗಳ ಬಗ್ಗೆ ಭಯವಿರೋದು. ಕೋಪವನ್ನು ಕಡಿಮೆ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.

ವೃಶ್ಚಿಕ ರಾಶಿ :

ಸಮಯವಿದ್ದಾಗ ನೆರೆಹೊರೆಯರ ಭೇಟಿ ಮಾಡಿರಿ. ನೋವನ್ನು ಮರೆಯುವ ಪ್ರಯತ್ನವು ಬೇರೆ ರೀತಿಯಲ್ಲಿ ನಡೆಯುವುದು. ಐಷಾರಾಮಿಯಾಗಿ ಬದುಕಲು ನಿಮ್ಮ ಹಣವನ್ನೇ ಖರ್ಚುಮಾಡುವಿರಿ. ಅಹಂಕಾರದ ವರ್ತನೆಯನ್ನು ತೋರಿಸಬಹುದು. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲಾ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಮನೆಯಲ್ಲಿ ಒಂಟಿಯಾಗಿರುವ ಕಾರಣ ಎಲ್ಲಿಗೂ ಹೊರಗೆ ಹೋಗಲಾಗದು. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ಭೋಗಕ್ಕೆ ಬೇಕಾದ ಹಣವು ನಿಮ್ಮ ಕೈ ಸೇರಲಿದೆ. ದಾಂಪತ್ಯದಲ್ಲಿ ಉಂಟಾದ ಕಲಹವನ್ನು ನೀವೇ ಸರಿ ಮಾಡಿಕೊಳ್ಳಿ. ನಿಮ್ಮನ್ನೇ ನೀವು ವಂಚಿಸಿಕೊಳ್ಳಿರಿ. ಕಲಾವಿದರಿಗೆ ಸಿಕ್ಕ ಅವಕಾಶಗಳು ತಪ್ಪಿಹೋಗಬಹುದು. ಸಣ್ಣ ವಿಚಾರವನ್ನು ನೀವೇ ದೊಡ್ಡ ಮಾಡಿಕೊಳ್ಳುವಿರಿ. ವ್ಯವಸ್ಥೆಯ ಸಣ್ಣ ಕೊರತೆಗಳು ಮುಖ್ಯವಾಗಬಾರದು.

ಧನು ರಾಶಿ :

ನಿಮ್ಮನ್ನು ಸುಂದರವಾಗಿ ಪಡೆದುಕೊಳ್ಳಿ. ವಿದೇಶದ ವೃತ್ತಿಯಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗುವುದು. ನಿಮ್ಮ ವರ್ತನೆಗಳೇ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡುವುದು. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ಹರಿದ ಬಟ್ಟೆಗಳನ್ನು ನಿಮಗೆ ಗೊತ್ತಿಲ್ಲದೇ ಧರಿಸುವಿರಿ. ಸ್ಥಾನದಲ್ಲಿ ಇಂದು ಒಲವು ಹುಟ್ಟಿಕೊಳ್ಳಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುತ್ತಾರೆ. ಆದಾಯದ ಮೂಲವು ಸರಿಯಾಗಿ ಇರಲಿದೆ. ನಿಮ್ಮ ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಬಹುದು. ಹೂಡದಲ್ಲಿ ನಿಮಗೆ ಆಸಕ್ತಿಯು ಇಂದು ಕಡಿಮೆ ಇರಲಿದೆ. ಉದ್ಯಮದಲ್ಲಿ ಅನಿರೀಕ್ಷಿತ ಬದಲಾವಣೆ ಆಗಬಹುದು. ಸುಮ್ಮನೇ ಆಡಿದ ಮಾತು ಸತ್ಯವಾಗಬಲ್ಲದು. ಆಪ್ತರ ಬಗ್ಗೆ ಇರುವ ನಕಾರಾತ್ಮಕ ಭಾವವನ್ನು ನೀವು ಅವರಿಗೆ ಹೇಳುತ್ತೀರಿ.

ಮಕರ ರಾಶಿ :

ನೀವು ಪಡೆದುಕೊಳ್ಳುವ ಸವಲತ್ತುಗಳಿಗೆ ಮಾರ್ಗ ಸರಿ ಇರದು. ನಿಮಗೆ ನೆಮ್ಮದಿ ಬೇಕಾದರೆ ಸುತ್ತಲಿನವರ ಜೊತೆ ಸೌಹಾರ್ದತೆ ಮುಖ್ಯ. ನಿಮ್ಮ ಸುರಕ್ಷತೆಯ ಬಗ್ಗೆ ಮೊದಲು ಗಮನವಿರಲಿ. ಅನಂತರ ಉಳಿದುದರ ರಕ್ಷಣೆ. ಹಣವು ವ್ಯಯವಾಗಬಹುದು. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಮೇಲ್ನೋಟಕ್ಕೆ ಶಾಂತಸ್ವಭಾವದಂತೆ ಕಾಣಿಸುವುದು.’ ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಬೇಡದ ವಿಚಾರಗಳನ್ನು ನಿಮ್ಮ ತಲೆಯಿಂದ, ವಸ್ತುಗಳನ್ನು ಮನೆಯಿಂದ ಹೊರಹಾಕಿ. ಗೊಂದಲವನ್ನು ಇತರರ ಬಳಿ ಹೇಳಿ. ಪರಿಹಾರವನ್ನು ಪಡೆಯಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮ ಆಲೋಚನೆಗಳೇ ನಿಮ್ಮನ್ನು ನಿರೂಪಿಸುತ್ತವೆ. ಇಂದಿನ ಎಲ್ಲ ಕಾರ್ಯಗಳಲ್ಲಿ ಏಕಾಗ್ರತೆಯ ಕೊರತೆ ಕಾಣಿಸುವುದು. ತಾಯಿಯ ಕಡೆಯವರಿಂದ ಧನಸಹಾಯವು ಸಿಗಬಹುದು. ಕೆಲಸದಲ್ಲಿ ವಿವಾದವನ್ನು ಮಾಡಿಕೊಳ್ಳಲು ಹೋಗಬೇಡಿ. ಯಾರೇ ಏನೇ ಹೇಳಿದರೂ ಕೇಳಿಕೊಳ್ಳುವ ತಾಳ್ಮೆ ಅಗತ್ಯವಾಗಿ ಬೇಕು.

ಕುಂಭ ರಾಶಿ :

ಕೊನೆಯ ಹಂತಕ್ಕೆ ನಿರುಪಾಯ ಸ್ಥಿತಿಯಲ್ಲಿ ಕುಳಿತಿರಬೇಕಾಗುವುದು. ನಿಮಗಿರುವ ಸ್ಥಾನಮಾನದ ಬಗ್ಗೆ ಆತಂಕ ಬರಬಹುದು. ಇಂದು ನಿಮ್ಮ ಯೋಜನೆಗೆ ಇಂದು ಎಲ್ಲವೂ ವಿರುದ್ಧವಾಗಿರುತ್ತದೆ. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳುವುದು ಉತ್ತಮ. ನಿಮಗೆ ಅಧಿಕಾರಿಗಳು ಅಪಮಾನ ಮಾಡಬಹುದು. ನಿಮ್ಮಿಂದ ಅನ್ಯರಿಗೆ ಅವಶ್ಯಕತೆ ಇದ್ದರಷ್ಟೇ ಮಾತನಾಡಿ. ಊಹಾಪೋಹಗಳಿಗೆ ಕಿವಿಗೊಡದೆ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯಿರಿ. ಸಿಗಬೇಕಾದ ಲಾಭದಿಂದ ವಂಚಿತರಾಗಿದೆ. ಕೃತಕತೆಯಿಂದ ತೊಂದರೆಯಾಗುವುದು. ಸಾಮಾಜಿಕ ಕಾರ್ಯಕ್ಕೆ ಇಂದು ಸಮಯ ಸಿಗದು. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಲಾಗಿದೆ.

ಮೀನ ರಾಶಿ :

ಯಾರಾದರೂ ನಿಮ್ಮನ್ನು ಬಲಿಪಶು ಮಾಡಬಹುದು. ರಾಜಕಾರಣದಿಂದ ಕಿರಿಕಿರಿ ಸೃಷ್ಟಿಯಾಗುವುದು. ಆಸ್ತಿಯ ಆಧಾರದ ಮೇಲೆ ನೀವು ಸಾಲವನ್ನು ಪಡೆಯಬೇಕಾಗಬಹುದು. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ನಿಮ್ಮ ಆಸ್ತಿಗಳನ್ನು ಸ್ವಾಧೀನ ಮಾಡಿಕೊಳ್ಳಬಹುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳಿರಿ. ಕೋಮಲ ತ್ವಚೆ ಹಾಳಾಗಿಹೋಗುವಂತೆ ಕಾಣಿಸುವುದು. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವವರು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾದರಿ ಬೇಡ. ಇಂದಿನ ಕೆಲವು ಸಂದರ್ಭಗಳಲ್ಲಿ ಮೌನವಾಗಿ ಇರುವಿರಿ. ವಿದೇಶದ ಸಂಪರ್ಕವು ಇಂದು ಸಿಗಬಹುದು. ನಿಮ್ಮ ಕೆಲಸದ ಬಗ್ಗೆ ಗಮನ ಹೆಚ್ಚಿರಲಿ. ಏಕಾಗ್ರತೆಯು ಭಂಗವಾಗಲು ಅನೇಕ ಕಾರಣಗಳು ಇರಲಿವೆ. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ.

– ಲೋಹಿತ ಹೆಬ್ಬಾರ್ – 8762924271 (What’s app only)



Source link

Leave a Reply

Your email address will not be published. Required fields are marked *