2025 ರ ನವೆಂಬರ್ 06, ಗುರುವಾರದ ದ್ವಾದಶ ರಾಶಿಗಳ ಫಲಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಸ್ಥೆ ಡಾ ಬಸವರಾಜ ಗುರೂಜಿ ಪ್ರಸ್ತುತಪಡಿಸಿದ್ದಾರೆ. ಈ ದಿನ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಕಾರ್ತೀಕ ಮಾಸ, ಶರದ್ ಋತು, ಕೃಷ್ಣಪಕ್ಷ ಪಾಡ್ಯವಾಗಿದ್ದು, ಭರಣಿ ನಕ್ಷತ್ರ ಮತ್ತು ವ್ಯತಿಪಾತ ಯೋಗವಿದೆ. ರವಿ ತುಲಾ ರಾಶಿಯಲ್ಲಿ, ಚಂದ್ರ ಮೇಷ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ರಾಹುಕಾಲ ಮಧ್ಯಾಹ್ನ 1:29 ರಿಂದ 2:57 ರವರೆಗೆ ಇರುತ್ತದೆ, ಸರ್ವ ಸಿದ್ಧಿ ಮತ್ತು ಶುಭಕಾಲ ಮಧ್ಯಾಹ್ನ 12:03 ರಿಂದ 1:27 ರವರೆಗೆ ಇರುತ್ತದೆ.