ಸಾಮಾಜಿಕ ಜಾಲತಾಣದ (ಸಾಮಾಜಿಕ ಮಾಧ್ಯಮ) ಶಕ್ತಿಯೇ ಅಂಥಹದ್ದು ಯಾರನ್ನು ಬೇಕಾದರೂ ಒಂದೇ ದಿನದಲ್ಲಿ ಸ್ಟಾರ್ ಆನ್ ಆಗಿ ಮಾಡುತ್ತದೆ. ಎಂಥೆಂಥಹವರ ಜೀವನವನ್ನೇ ಬದಲಿಸಿದೆ ಈ ಸಾಮಾಜಿಕ ಜಾಲತಾಣ. ಟೀ ಮಾರುತಿದ್ದವನು ಕೋಟ್ಯಧೀಶನನ್ನಾಗಿ ಮಾಡಿದೆ, ಲಾರಿ ಓಡಿಸುತ್ತಿದ್ದವ ಲಕ್ಷಾಧೀಶ್ವರನಾಗಿದ್ದಾನೆ, ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ ಹಿನ್ನೆಲೆ ಗಾಯಕಿ ಆಗಿದ್ದಾಳೆ ಹೀಗೆ ಹೇಳುತ್ತಾ ಹೋದರೆ ಹಲವು ಉದಾಹರಣೆಗಳಿವೆ. ಅದರಲ್ಲಿ ಒಂದು ಕುಂಭಮೇಳ ಮೋನಲಿಸ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಆಕೆ ಸೆಲೆಬ್ರಿಟಿ ಆಗಿದ್ದು, ಇದೀಗ ನೆರೆಯ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ನೀಡುತ್ತಿದ್ದಾರೆ.
ಕುಂಭಮೇಳ ಮೊನಲಿಸ ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ತೆಲುಗಿನ ‘ಲೈಫ್’ ಹೆಸರಿನ ಸಿನಿಮಾದಲ್ಲಿ ಕುಂಭಮೇಳ ಮೊನಲಿಸ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಸಾಯಿ ಚರಣ್ ನಾಯಕ. ಶ್ರೀನು ಕೋಟಪೇಟಿ ನಿರ್ದೇಶನ ಮಾಡುತ್ತಿದ್ದಾರೆ. ವಂಗಮಾಂಬ ಕ್ರಿಯೇಶನ್ಸ್ ಮೂಲಕ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ ನಿರ್ಮಾಪಕ ಅಂಜಯ್ಯ. ನಿನ್ನೆಯಷ್ಟೆ ಸಿನಿಮಾದ ಮುಹೂರ್ತ ಹೈದರಾಬಾದ್ ನ ಪ್ರಸಾದ್ ಲ್ಯಾಬ್ಸ್ ನಲ್ಲಿ ನಡೆದಿದ್ದು, ಮೊನಲಿಸಾ ಹಾಗೂ ನಾಯಕ ಸಾಯಿ ಚರಣ್ ಅವರ ಓಪನಿಂಗ್ ಶಾಟ್ ಗಳ ಚಿತ್ರಗಳು ಸಹ ನಡೆದಿವೆ.
ಇದನ್ನೂ ಓದಿ:ಘೋಷಣೆ ಆಗಿಯೇ ಬಿಡು ರಜನಿ-ಕಮಲ್ ಸಿನಿಮಾ, ಆದರೆ ಒಂದು ಟ್ವಿಸ್ಟ್
ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಮೊನಾಲಿಸಾ, ‘ಹೈದರಾಬಾದ್‌ಗೆ ಬಂದಿರುವುದು ಮತ್ತು ತೆಲುಗು ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ಬಹಳ ಖುಷಿಯಾಗಿದೆ. ‘ಲೈಫ್’ ಸಿನಿಮಾ ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಲೈಫ್ ನೀಡಲಿದೆ ಎಂಬ ವಿಶ್ವಾಸ ನನಗೆ ಇದೆ. ಈಗ ನನಗೆ ತೆಲುಗು ಬರುವುದಿಲ್ಲ ಆದರೆ ಸಿನಿಮಾ ಮುಗಿಯುವ ವೇಳೆಗೆ ತೆಲುಗು ಕಲಿಯುವ ವಿಶ್ವಾಸವಿದೆ. ಅವಕಾಶ ನೀಡಿದ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ’
ಮಧ್ಯ ಪ್ರದೇಶದ ಇಂಧೋರದ ಮೋನಲಿಸ ಭೋಸ್ಲೆ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ, ಜಪಮಾಲೆ, ಹೂವು ಮಾರಾಟ ಮಾಡುತ್ತಿದ್ದರು. ಕುಂಭಮೇಳಕ್ಕೆ ಭೇಟಿ ನೀಡಿದ ಫೋಟೊಗ್ರಾಫರ್ ಒಬ್ಬರು ಇವರ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇ ತಡ ಆ ಚಿತ್ರ ವೈರಲ್ ಆಯ್ತು. ಇವರ ಅಂದಕ್ಕೆ ಜನ ಮಾರುಹೋದರು. ಮೊನಲಿಸ ಭೋಂಸ್ಲೆಗೆ ಕುಂಭಮೇಳ ಮೊನಲಿಸ ಎಂಬ ಹೆಸರು ಬಿತ್ತು. ಚಿತ್ರ ವೈರಲ್ ಆದ ಬೆನ್ನಲ್ಲೆ ಮೊನಲಿಸ ಸೆಲೆಬ್ರಿಟಿ ಆದರು. ಈಗ ದೇಶದಾದ್ಯಂತ ಹಲವು ಖಾಸಗಿ ಘಟಕಗಳಲ್ಲಿ ಭಾಗಿ ಆಗುತ್ತಾರೆ, ಅದಕ್ಕಾಗಿ ರೂಪಾಯಿ ಹಣ ಚಾರ್ಜ್ ಮಾಡುತ್ತಾರೆ. ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಪ್ಯಾಷನ್ ಶೋಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ತೆಲುಗು ಇದೆ ಒಂದು ಹಿಂದಿ ಸಿನಿಮಾದಲ್ಲಿಯೂ ಮೊನಲಿಸ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ