Headlines

ಕದ್ದ ಮಾಲಲ್ಲಿ ದೇವರಿಗೂ ಪಾಲು ಕೊಡ್ತಿದ್ದ ಖತರ್ನಾಕ್​ ಕಳ್ಳ!: 20 ವರ್ಷಗಳಿಂದ ರಾಬರಿಯೇ ಫುಲ್​ಟೈಮ್​ ಕೆಲಸ

ಕದ್ದ ಮಾಲಲ್ಲಿ ದೇವರಿಗೂ ಪಾಲು ಕೊಡ್ತಿದ್ದ ಖತರ್ನಾಕ್​ ಕಳ್ಳ!: 20 ವರ್ಷಗಳಿಂದ ರಾಬರಿಯೇ ಫುಲ್​ಟೈಮ್​ ಕೆಲಸ


ಬೆಂಗಳೂರು, ನವೆಂಬರ್ 06: ಐದು ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳನನ್ನನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಅಸ್ಲಾಂ ಪಾಷಾ ಅರೆಸ್ಟ್ ಆದ ಆರೋಪಿ, ಈತನ ಮೇಲೆ 150 ಕಳ್ಳತನ ಪ್ರಕರಣಗಳಿವೆ. ಹಗಲುವೇಳೆ ಐಷಾರಾಮಿ ಮನೆಗಳನ್ನು ಗುರುತಿಸುತ್ತಿದ್ದ ಆರೋಪಿ ರಾತ್ರಿವೇಳೆ ಕೈಚಳಕ ತೋರಿಸುತ್ತಿದ್ದ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಶಿವಮೊಗ್ಗ ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಈ ಮನೆಗಳ್ಳತನ ಮಾಡಿದೆ.

ಕಿಟಕಿ ತೆರೆದು ಮಹಿಳೆಯರು ನಿದ್ರೆಗೆ ಜಾರಿದ್ರೆ ಕುತ್ತಿಗೆಯಲ್ಲಿರೋ ಸರ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಈತ, ಕಿಟಕಿ ಪಕ್ಕದಲ್ಲಿ ಮೇನ್ ಡೋರ್ ಇದ್ರೆ ಕಿಟಕಿ ಗ್ಲಾಸ್ ಒಡೆದು ಡೋರ್ ಓಪನ್ ಮಾಡಿ ಕದಿಯುತ್ತಿದ್ದ. ಹಾಲು ಪೇಪರ್ ಮನೆಬಳಿ ಬಿದ್ದಿದ್ದು ಮೇನ್ ಡೋರ್ ಲಾಕ್ ಆಗಿರುವ ಮನೆಗಳು, ರಾತ್ರಿ ವೇಳೆ ಲೈಟ್ ಆನ್ ಆಗಿರುವ ಮನೆಗಳು ಸೇರಿ ಗೇಟ್ ಲಾಕ್ ಆಗಿದ್ದ ಮನೆಗಳನ್ನೇ ಟಾಗರ್ಗಟ್ ಮಾಡಿ ಈತ ಕೈಚಳಕ ತೋರುತ್ತಿದ್ದ. ಇನ್ನು ಒಂದು ಠಾಣೆ ಕಳ್ಳತನ ಮಾಡಿದ್ರೆ ಆ ಕೇಸ್ ಹಳೇದಾಗೋವರೆಗೂ ಮತ್ತೆ ಆ ಕಡೆ ಈತ ಹೋಗಬೇಕು. ಕನಿಷ್ಠ ಒಂದು ವರ್ಷವಾದರೂ ಆ ಏರಿಯಾದಿಂದ ಕಾಯ್ದುಕೊಳ್ಳಬೇಕಾಗಿತ್ತು.

ಇದನ್ನೂ ಓದಿ: ತಿಂಗಳಿನಿಂದ ಪೊಲೀಸ್ ಠಾಣೆಯಲ್ಲಿ ನಿಂತಿದ್ದ ಚಿನ್ನ, ಬೆಳ್ಳಿ ಮತ್ತು ಕಂತೆ ಕಂತೆ!

ಕದ್ದ ಮಾಲ್ ನಲ್ಲಿ ದೇವರಿಗೂ ಪಾಲು ಕೊಡ್ತಿದ್ದ ಅಸ್ಲಾಂ ಪಾಷಾ, ಪ್ರತೀ ಬಾರಿ ಕಳ್ಳತನ ಮಾಡಿದರೂ ಅಜ್ಮೀರ್ ದರ್ಗಾಗೆ ಹೋಗಿ ಹುಂಡಿಗೆ ಹಣ ಹಾಕಿ ಬರುತ್ತಿದ್ದ. ಅಸ್ಲಾಂ ತಂದೆ ತಾಯಿಗೆ ಒಟ್ಟು ಏಳು ಜನ ಮಕ್ಕಳು. ಆ ಮೇಲೆ ಮೂವರದ್ದು ಕಳ್ಳತನವೇ ಕೆಲಸ. ಕಳೆದ 20 ವರ್ಷಗಳಿಂದ ಕಳ್ಳತನ ಮಾಡಿಕೊಂಡು ಬರುತ್ತಿರುವ ಅಸ್ಲಾಂ ಪಾಷಾ, ಅಜ್ಮೀರ್ ದರ್ಗಾಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಮೋಜು-ಮಸ್ತಿಗಾಗಿ ಹೋಗುತ್ತಿದ್ದ. ಬಳಿಕ ಉಳಿದ ಹಣವನ್ನ ಕುಟುಂಬಸ್ಥರಿಗೂ ನೀಡುತ್ತಿದ್ದ. ಆ ಬಳಿಕವೇ ಮತ್ತೊಂದು ಕಳ್ಳತನಕ್ಕೆ ಕೈ ಹಾಕುತ್ತಿದ್ದ ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ವಿದ್ಯಾರಣ್ಯಪುರ ಠಾಣಾ ವಿನ್ಯಾಸ ಚಿನ್ನಾಭರಣ ಎಗರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಲಾಕ್ ಆಗಿರುವ ಆರೋಪಿಯಿಂದ 22 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *