ರಾಕಿಂಗ್ ಸ್ಟಾರ್ ಯಶ್ ಕುಟುಂಬ ತಮ್ಮ ಮನೆಯ ಮುದ್ದಿನ ನಾಯಿಮರಿ ಕೊಕೊ ಹುಟ್ಟುಹಬ್ಬವನ್ನು ಪೂರ್ತಿ ಫ್ಯಾಮಿಲಿ ಸೇರಿ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದು, ಫೋಟೊಗಳನ್ನು ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ರಾಧಿಕಾ ಪಂಡಿತ್ ಇದೀಗ ಬರ್ತ್ ಡೇ ಸಂಭ್ರಮದ ಫೋಟೊಗಳನ್ನು ಶೇರ್ ಮಾಡಿದ್ದು, ಈ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಮತ್ತು ಫ್ಯಾಮಿಲಿ ಮಗ ಯಥರ್ವ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ನಿಜವಾದ ಪ್ರಾಣಿ ಪಕ್ಷಿಗಳನ್ನೆಲ್ಲಾ ಪಾರ್ಟಿಗೆ ತಂದಿದ್ದರು, ರಾಕಿಂಗ್ ಸ್ಟಾರ್. ಇದೀಗ ತಮ್ಮ ಮನೆಯ ಮತ್ತೊಬ್ಬ ಸದಸ್ಯರ ಹುಟ್ಟುಹಬ್ಬ ಆಚರಿಸಿದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಪ್ರಾಣಿ ಪ್ರಿಯರಾಗಿದ್ದು, ಈ ಜೋಡಿ ತಮ್ಮ ಮನೆಯಲ್ಲಿ ಮುದ್ದಾದ ಶ್ವಾನವನ್ನು ಸಾಕಿದೆ. ಅದಕ್ಕೆ ಮುದ್ದಾಗಿ ಕೊಕೋ ಎಂದು ಹೆಸರಿಟ್ಟಿದ್ದಾರೆ. ಈ ಕೊಕೊ ಹುಟ್ಟುಹಬ್ಬವನ್ನು ಇದೀಗ ಸೆಲೆಬ್ರೇಟ್ ಮಾಡಲಾಗಿದೆ.

ಕೊಕೊ ಜೊತೆಗಿನ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಕಂಡೀಶನ್ ಗಳಿಂದ ತುಂಬಿರುವ ಈ ಜಗತ್ತಿನಲ್ಲಿ, ಅಚಲವಾದ ವಾತ್ಸಲ್ಯ ಹೇಗಿರುತ್ತದೆ ಎಂಬುದನ್ನು ಅವಳು ನಮಗೆ ನೆನಪಿಸುತ್ತಾಳೆ. ಹುಟ್ಟುಹಬ್ಬದ ಶುಭಾಶಯಗಳು, ಕೊಕೊ ಎಂದು ಬೆರೆದುಕೊಂಡಿದ್ದಾರೆ.

ಕೊಕೊ ಯಶ್ ಕುಟುಂಬದ ಒಂದು ಭಾಗವೇ ಆಗಿ ಹೋಗಿದೆ. ಅವರು ಎಲ್ಲೇ ಹೋದರೂ ಕೊಕೊ ಕೂಡ ಜೊತೆಯಲ್ಲಿಯೇ ಇರುತ್ತೆ. ಇದೀಗ ಕೊಕೊಗೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಕೊಕೊ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೊಕೊ ಮುಖವನ್ನು ಹೊಂದಿರುವ ಪುಟ್ಟದಾದ ಮುದ್ದಾದ ಕೇಕ್ ತಯಾರಿಸಿದ್ದು, ಕೇಕ್ ಮೇಲೆ ಹ್ಯಾಪಿ ಬರ್ತ್ ಡೇ ಕೊಕೊ 2 ಎಂದು ಬರೆಯಲಾಗಿದೆ.

ಕೊಕೊ ಹುಟ್ಟುಹಬ್ಬವನ್ನು ರಾಧಿಕಾ ಪಂಡಿತ್, ಮಕ್ಕಳಾದ ಯಥರ್ವ್ ಮತ್ತು ಆಯ್ರ, ರಾಧಿಕಾ ತಂದೆ, ತಾಯಿ, ಮನೆಯಲ್ಲಿರುವ ಸ್ಟಾಪ್ ಜೊತೆ ಸೆಲೆಬ್ರೇಟ್ ಮಾಡಲಾಗಿದೆ.

ಇತ್ತೀಚೆಗೆ ಮಗನ ಹುಟ್ಟುಹಬ್ಬಕ್ಕೆ ಕಾಣಿಸಿಕೊಂಡಿದ್ದ ಯಶ್ ಕೊಕೊ ಹುಟ್ಟುಹಬ್ಬದಲ್ಲಿ ಮಿಸ್ಸಿಂಗ್ ಆಗಿದ್ದಾರೆ. ಟಾಕ್ಸಿಕ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋದರಿಂದ ಕ್ಕೊ ಬರ್ತ್ ಡೇಗೆ ಬಂದಿಲ್ಲ.

ರಾಧಿಕಾ ಕೊಕೊ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿದ್ದು, ತಮ್ಮ ಬಾಳಲ್ಲಿ ಕೊಕೊ ಎಷ್ಟು ಮುಖ್ಯ ಅನ್ನೋದನ್ನು ತಿಳಿಸಿದ್ದಾರೆ. ಕೊಕೊ ಜೊತೆಗೆ ಕೇಕ್ ಕತ್ತರಿಸುವ ಫೋಟೊ ಸಹ ಶೇರ್ ಮಾಡಿದ್ದಾರೆ.

ಕೊಕೊ ಜೊತೆಗೆ ಯಶ್ ಮತ್ತು ರಾಧಿಕಾ ಸೆಲ್ಫಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಹಲವು ದಿನಗಳ ಬಳಿಕ ಈ ಜೋಡಿ ಜೊತೆಯಾಗಿ ಸೆಲ್ಫಿಗೆ ಪೋಸ್ ಕೊಟ್ಟಿದೆ ಎಂದು ಸಂಭ್ರಮಿಸಿದ್ದಾರೆ ಫ್ಯಾನ್ಸ್.

Source link
ಕುಟುಂಬದ ಜೊತೆ ಮುದ್ದಿನ ನಾಯಿ ಮರಿ COCO Birthday ಆಚರಿಸಿದ ರಾಧಿಕಾ ಪಂಡಿತ್