Annayya serial : ಅಣ್ಣಯ್ಯ ಧಾರಾವಾಹಿಯಲ್ಲಿ ವೀಕ್ಷಕರು ಈ ವೀರಭದ್ರನ ಸೊಕ್ಕು ಅಡಗೋದು ಯಾವಾಗ ಎಂದು ಕಾಯುತ್ತಿದ್ದರೆ, ಅಲ್ಲಿ ಶಾರದಮ್ಮನ ಕೈಯಿಂದ ಕಪಾಳ ಮೋಕ್ಷ ಮಾಡಿಸಿಕೊಂಡು ಇಂಗು ತಿಂದ ಮಂಗನಂತಾಗಿದೆ ವೀರಭದ್ರನ ಸ್ಥಿತಿ. ಇನ್ನು ಮುಂದೈತೆ ಮಾರಿಹಬ್ಬ ಎನ್ನುತ್ತಿದ್ದಾರೆ ಜನ.

ಅಣ್ಣಯ್ಯ ಧಾರಾವಾಹಿಯಲ್ಲಿ ವೀಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದ ಆ ಗಳಿಗೆ ಬಂದೇ ಬಿಟ್ಟಿದೆ. ಇಲ್ಲಿವರೆಗೂ ವೀರಭದ್ರ ಶಾರದಮ್ಮನಿಗೆ ಎಷ್ಟೋ ಕೆಡುಕನ್ನು ಉಂಟು ಮಾಡಿದ್ದಾನೆ. ಅಷ್ಟೇ ಯಾಕೆ ಮಕ್ಕಳನ್ನೇ ಶಾರದಮ್ಮನಿಂದ ದೂರ ಮಾಡಿದ್ದಾನೆ. ಇದೀಗ ಅದಕ್ಕೆ ಸೇಡು ತೀರಿಸುವ ಸಮಯ ಬಂದೇ ಬಿಟ್ಟಿದೆ.

ಒಂದು ಕಡೆ ಪಾರು ಸತ್ಯ ತಿಳಿಯಲು ತನ್ನ ಗಂಡನ ಜೊತೆ ತವರು ಮನೆಗೆ ಹೋಗಿದ್ದಾಳೆ. ಅಲ್ಲಿ ಶಿವು ಅತ್ತೆ ಬಳಿ ನಿಮ್ಮಲ್ಲಿ ಏನಾದ್ರೂ ಸಮಸ್ಯೆ ಇದೆಯೇ? ಎಂದು ಕೇಳಿದಾಗ ಅತ್ತೆ ನಿಮ್ಮ ಮಾವ ಮನುಷ್ಯನೇ ಅಲ್ಲ ಎನ್ನುವ ಸತ್ಯದ ಅರಿವು ಮಾಡಿಸುತ್ತಾರೆ.

ಇನ್ನೊಂದು ಕಡೆ ವೀರಭದ್ರ ಛತ್ರಿಯ ಜೊತೆಗೆ ಮಾದಪ್ಪನ ಮನೆಗೆ ಬಂದಿದ್ದಾನೆ. ರಶ್ಮಿ ಜೊತೆ ಮಾತನಾಡುತ್ತಾ ಮನೆಯಲ್ಲಿ ಯಾರೂ ಇಲ್ಲವ ಎನ್ನುತ್ತಾನೆ. ಆವಾಗ ರಶ್ಮಿ ಶಾಂತಮ್ಮ ಇದ್ದಾರೆ ಎನ್ನುತ್ತಾ ಶಾಂತಮ್ಮನಿಗೆ ಕಾಫಿ ತೆಗೆದುಕೊಂಡು ಬರಲು ಹೇಳುತ್ತಾಳೆ.

ಅಲ್ಲಿ ಶಾರದಮ್ಮನನ್ನು ನೋಡಿ ಶಾಕ್ ಆದ ವೀರಭದ್ರ ರಶ್ಮಿಯನ್ನು ಬೇರೆಡೆಗೆ ಕಳುಹಿಸಿ, ಶಾರದಮ್ಮನ ಬಳಿ ಬಂದು ನಿನ್ನ ಸಾವು ನನ್ನ ಕೈಯಿಂದಲೇ ಎನ್ನುತ್ತಾ ಕುತ್ತಿಗೆ ಹಿಸುಕೋಕೆ ಬರುತ್ತಾನೆ. ಆವಾಗ ಸಿಟ್ಟಿಗೇಳುವ ಶಾರದಮ್ಮ ವೀರಭದ್ರನ ಕೆನ್ನೆಗೆ ಬಾರಿಸಿ ಬೀಳುವಂತೆ ಮಾಡುತ್ತಾಳೆ.

ಇಷ್ಟು ದಿನ ತನ್ನ ಜೀವನವನ್ನೇ ಹಾಳು ಮಾಡಿದ ವೀರಭದ್ರನಿಗೆ ಮುಟ್ಟಿ ನೊಡುವಂತೆ ತಿರುಗೇಟು ಕೊಟ್ಟ ಶಾರದಮ್ಮ, ಆತನ ಮುಂದೆಯೇ ಕಾಲ ಮೇಲೆ ಕಾಲು ಹಾಕಿ ಮಂಚದ ಮೇಲೆ ಕುಳಿತುಕೊಂಡು, ತನಗೆ ಕೋಪ ಬಂದರೆ ತಾನು ಏನು ಬೇಕಾದರೂ ಮಾಡುವೆ ಅನ್ನೋದನ್ನು ತೋರಿಸುತ್ತಾರೆ.

ಪ್ರೊಮೊ ನೋಡಿ ಸಖತ್ ಖುಷಿ ಪಟ್ಟಿರುವ ವೀಕ್ಷಕರು. ವೀರಭದ್ರನಿಗೆ ಇನ್ನೆರಡು ಬಾರಿಸಿ ಎಂದು ಹೇಳಿದ್ದಾರೆ. ಇನ್ಮೇಲಿಂದ ಇದೇ ಈ ವೀರಭದ್ರು ಗೆ ಮಾರಿಹಬ್ಬ, ಸೂಪರ್ ಶಾರದಮ್ಮ. ಹಿಂಗೆ ಆಗಬೇಕು ವೀರಭದ್ರ ಬಾoಡ್ಲಿಗೆ, ಇನ್ನು ನಾಲ್ಕು ಬಾರಸು ಶಾರದಮ್ಮ ಎಂದು ಹೇಳಿದ್ದಾರೆ ವೀಕ್ಷಕರು.

Source link
Annayya serial: ಕೊಲ್ಲಲು ಬಂದ ವೀರಭದ್ರನ ಸೊಕ್ಕು ಮುರಿದ ಶಾರದಮ್ಮ… ಇನ್ನು ನಾಲ್ಕು ಬಾರಿಸಿ ಅಂತಿದ್ದಾರೆ ವೀಕ್ಷಕರು