ಬೆಂಗಳೂರು ಸಾಕಾಗಿದೆ, ಜನರನ್ನು ಆಹ್ವಾನಿಸುವುದನ್ನು ನಿಲ್ಲಿಸುವ ಸಮಯ ಬಂದಿದೆ ಎಂದ ವ್ಯಕ್ತಿ

ಬೆಂಗಳೂರು ಸಾಕಾಗಿದೆ, ಜನರನ್ನು ಆಹ್ವಾನಿಸುವುದನ್ನು ನಿಲ್ಲಿಸುವ ಸಮಯ ಬಂದಿದೆ ಎಂದ ವ್ಯಕ್ತಿ


ಬೆಂಗಳೂರು ಸಾಕಾಗಿದೆ, (ಬೆಂಗಳೂರು ಅಧಿಕ ಜನಸಂಖ್ಯೆ) ಯಾರನ್ನು ಇಲ್ಲಿಗೆ ಬನ್ನಿ ಎಂದು ಕರೆಯಬೇಡಿ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಡ್ಡಿಟ್‌ನಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಇದಕ್ಕೊಂದು ಶೀರ್ಷಿಕೆ ಕೂಡ ಇದೆ. “ಬೆಂಗಳೂರು ಸಾಕಾಗಿದೆ, ಜನರನ್ನು ಮಿತಿ ಮೀರಿ ನಿಲ್ಲಿಸುವ ಸಮಯ ಬಂದಿದೆ. ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ.

ವ್ಯಕ್ತಿಯೊಬ್ಬರು, ಬೆಂಗಳೂರಿನ ಜೀವನ ಸಾಕಾಗಿದೆ ಎನ್ನುವ ಮೂಲಕ ಬಹಳ ಹತಾಶೆ ವ್ಯಕ್ತಪಡಿಸಿದ್ದಾರೆ. “ಒಂದು ಕಾಲದಲ್ಲಿ ಎಲ್ಲರನ್ನು ಆಕರ್ಷಿಸುತ್ತಿದ್ದ, ಹಸಿರಿಗೆ ಹೆಸರುವಾಸಿಯಾಗಿರುವ ಬೆಂಗಳೂರು ಇಂದು ಅಧಿಕ ಜನಸಂಖ್ಯೆ ಮತ್ತು ಕಳಪೆ ಯೋಜನೆಯ ಒತ್ತಡದಿಂದ ಹೇಗೆ ಕುಗ್ಗುತ್ತಿದೆ ಎಂಬುದನ್ನು ನೋಡಿ.” ಎಂದು ರೆಡ್ಡಿಯಲ್ಲಿ ಬರೆದುಕೊಂಡಿದ್ದು, ಇದೀಗ ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಗುಂಡಿ ಮುಚ್ಚಿದ್ದರಿಂದ ಕಾರು ರಿಪೇರಿಗೆ 23 ಸಾವಿರ ರೂ ಖರ್ಚು, ಗುಂಡಿಗೆ ನಾನು ಹಣ ಕೊಡ್ತೇನೆ ಎಂದ ನಿವಾಸಿ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ಈ ಪೋಸ್ಟ್ ನೋಡಿ ಹಲವು ಬಳಕೆದಾರರು, ಮಿತಿ ಮೀರಿ ಬೆಳೆಯುತ್ತಿರುವ ಬೆಂಗಳೂರು, ಕಂಪನಿಗಳು, ಅವಕಾಶಗಳು, ಭರವಸೆ ನೀಡುತ್ತಲೇ ಇರುವ ರಾಜಕಾರಣಿಗಳ ಬಗ್ಗೆ ಟೀಕಿಸಿದ್ದಾರೆ. ನಗರಕ್ಕೆ ಬೇಕಾದ ಮೂಲಸೌಕರ್ಯಗಳ ಬಗ್ಗೆ ಯಾರೂ ಕೂಡ ಯೋಚನೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ ಬೆಂಗಳೂರಿನಲ್ಲಿ ಎಲ್ಲಿದೆ? ನೀರು ಎಲ್ಲಿದೆ? ಈ ಬೆಳವಣಿಗೆ ನಿಜವಾಗಿ ಯಾರಿಗಾಗಿ? ನಿಗಮಗಳಿಗೆ ನೀಡುವ ತೆರಿಗೆಯಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ. ಹೊಸ ಕಂಪನಿಗಳು ತಮ್ಮ ಲಾಭಗಳನ್ನು ಮಾತ್ರ ಮಾಡುತ್ತಿವೆ. ಸ್ಥಳೀಯ ಜನರ ಅಭಿವೃದ್ಧಿಗೆ ಒತ್ತು ನೀಡುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 1:11 pm, ಗುರುವಾರ, 6 ನವೆಂಬರ್ 25



Source link

Leave a Reply

Your email address will not be published. Required fields are marked *