Headlines

Koppal: ಅಪ್ರಾಪ್ತೆ ತಂಗಿಗೆ ಮಗು ಕರುಣಿಸಿ ಜೈಲುಪಾಲಾದ ಭೂಪ!

Koppal: ಅಪ್ರಾಪ್ತೆ ತಂಗಿಗೆ ಮಗು ಕರುಣಿಸಿ ಜೈಲುಪಾಲಾದ ಭೂಪ!


ಕೊಪ್ಪಳ, ನವೆಂಬರ್ 06: ನಿನ್ನನ್ನು ಮದುವೆ ಆಗುತ್ತೇನೆ ಎಂದು ಪುಸಲಾಯಿಸಿ ಸ್ವಂತ ಅಣ್ಣನೇ ಅಪ್ರಾಪ್ತೆ ತಂಗಿ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮಗು ಕರುಣಿಸಿರುವ ವ್ಯಕ್ತಿಗತ ಘಟನೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ನಡೆದಿದೆ. ಗರ್ಭವತಿಯಾದ ಬಾಲಕಿ ವಾರದ ಹಿಂದೆ ಮಗುವಿಗೆ ಜನ್ಮ ನೀಡಿದ್ದು, 21 ವರ್ಷದ ಆರೋಪಿ ಅಣ್ಣನ ವಿರುದ್ಧ ಬಾಲಕಿ ದೂರಿನನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆ ಏನು?

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆರೋಪಿ ಅಣ್ಣ ತನ್ನ ಅಪ್ರಾಪ್ತೆ ತಂಗಿ ಬಳಿ ತಾನು ನಿನ್ನನ್ನು ಮದುವೆ ಆಗಿರುವುದಾಗಿ ಹೇಳಿದ್ದ. ನಿನ್ನನ್ನು ಯಾವತ್ತೂ ಕೈಬಿಡಲ್ಲ, ಚೆನ್ನಾಗಿ ನೋಡಿಕೊಳ್ಳುತ್ತೇನೆ. ಯಾರೂ ನಿನಗೆ ಏನು ಹೇಳಿದ ರೀತಿ ಕಾವಲಾಗಿ ಇರುತ್ತೇನೆ ಎಂದೆಲ್ಲ ಪುಸಲಾಯಿಸಿದ್ದ. ಈ ವೇಳೆ ಸಂತ್ರಸ್ತೆ ಇದನ್ನು ವಿರೋಧಿಸಿದ್ದು ಸಮಾಜ ಈ ರೀತಿಯ ಸಂಬಂಧವನ್ನು ಒಪ್ಪಲ್ಲ ಎಂದಿದ್ದಳು. ಹೀಗಿದ್ದರೂ ಯಾರು ಬೆನ್ನು ಬಿದ್ದಿದ್ದ ಆತ ಮನೆಯಲ್ಲಿ ಇಲ್ಲದೆ ಇರುವಾಗ ತಂಗಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದ. ಫೆಬ್ರವರಿಯಿಂದ ಇವರ ನಡುವೆ ಈ ರೀತಿ ಸಂಬಂಧ ನಡೆದುಕೊಂಡು ಬಂದಿದ್ದು, ವಿಷಯವನ್ನು ಮನೆಯವರಿಗೆ ತಿಳಿಸಲು ಸಂತ್ರಸ್ತೆ ಯತ್ನಿಸಿದ್ದಳು. ಆದರೆ ಈ ವೇಳೆ ವಿಷಯ ಮನೆಯವರಿಗೆ ಹೇಳಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆರೋಪಿ ಬೆದರಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ!

ಈ ನಡುವೆ ಅಕ್ಟೋಬರ್ 26 ರ ಬೆಳಿಗ್ಗೆ ಮನೆ ಕೆಲಸ ಮಾಡುವಾಗ ಸಂತ್ರಸ್ತೆ ಜಾರಿಯಲ್ಲಿತ್ತು, ಘಟನೆಯಲ್ಲಿ ಸೊಂಟಕ್ಕೆ ಏಟು ಬಿದ್ದಿತ್ತು. ಹೀಗಾಗಿ ಆಸ್ಪತ್ರೆಗೆ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದಿದ್ದು, ಈ ವೇಳೆ ವೈದ್ಯರು ಬೆನ್ನಿಗೆ ಪೆಟ್ಟಾಗಿದೆ. ಶೀಘ್ರವಾಗಿ ಸ್ಕ್ಯಾನಿಂಗ್ ಮಾಡಿಸುವಂತೆ ಸೂಚಿಸಿದ್ದರು. ಬಳಿಕ ಅಕ್ಟೋಬರ್ 30 ರಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ಸಂತ್ರಸ್ತೆಯನ್ನು ಕರೆದುಕೊಂಡು ಬಂದಿದ್ದು, ಈ ವೇಳೆ ಆಕೆಯ ಹೊಟ್ಟೆಯಲ್ಲಿ ಮಗು ಇರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲಿಯವರೆಗೆ ಗರ್ಭಿಣಿ ಎಂಬ ವಿಷಯ ತನಗೇ ಗೊತ್ತಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದು, ಅದೇ ದಿನ ರಾತ್ರಿ ಗಂಡು ಮಗುವಿಗೆ ಆಕೆ ಜನ್ಮ ನೀಡಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 1:10 pm, ಗುರುವಾರ, 6 ನವೆಂಬರ್ 25



Source link

Leave a Reply

Your email address will not be published. Required fields are marked *