Headlines

ಕಾವ್ಯಾಗೋಸ್ಕರ ದೊಡ್ಡ ತ್ಯಾಗ ಮಾಡಿದ ಗಿಲ್ಲಿ; ಸಿಕ್ತು ಪ್ರೀತಿಯ ಅಪ್ಪುಗೆ

ಕಾವ್ಯಾಗೋಸ್ಕರ ದೊಡ್ಡ ತ್ಯಾಗ ಮಾಡಿದ ಗಿಲ್ಲಿ; ಸಿಕ್ತು ಪ್ರೀತಿಯ ಅಪ್ಪುಗೆ


ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (ಬಿಬಿಕೆ 12) ಕಾವ್ಯಾಗೋಸ್ಕರ ದೊಡ್ಡ ತ್ಯಾಗ ಮಾಡಿದ್ದಾರೆ ಗಿಲ್ಲಿ. ಈ ತ್ಯಾಗ ಅದೆಷ್ಟು ದೊಡ್ಡದಾಗಿತ್ತು ಎಂದರೆ ಅವರಿಗೆ ಮನೆಯಿಂದ ಬರುತ್ತಿದ್ದ ಪತ್ರವೇ ತಪ್ಪಿ ಹೋಯ್ತು. ಆದರೂ ಅವರ ಮೊಗದಲ್ಲಿ ಯಾವುದೇ ಬೇಸರವಿಲ್ಲ. ಆದರೆ, ಅವರು ಮಾಡಿದ ಈ ತ್ಯಾಗಕ್ಕೆ ಕಾವ್ಯಾ ಅವರಿಂದ ಪ್ರೀತಿಯ ಅಪ್ಪುಗೆ ಸಿಕ್ಕಿದೆ. ಇದರಿಂದ ಗಿಲ್ಲಿ ಖುಷಿ ಆದರು.

ಈ ವಾರ ಮನೆಯಿಂದ ಪತ್ರ ಬರುತ್ತಿದೆ. ಇದಕ್ಕೆ ವಿವಿಧ ಚಟುವಟಿಕೆ ನೀಡಲಾಗುತ್ತಿದೆ. ಕಾವ್ಯ ಹಾಗೂ ಗಿಲ್ಲಿಯನ್ನು ಪ್ರತ್ಯೇಕವಾಗಿ ಕರೆಯಲಾಯಿತು. ಈ ವೇಳೆ ಗಿಲ್ಲಿ ಎದುರು ಕಾವ್ಯಾ ಲೆಟರ್ ಹಾಗೂ ಕಾವ್ಯಾ ಎದುರು ಗಿಲ್ಲಿ ಲೆಟರ್ ಇಡಲಾಯಿತು. ಯಾರಾದರೂ ಒಬ್ಬರು ಮಾತ್ರ ಲೆಟರ್ನ ಹೊರಗೆ ತರಬಹುದಿತ್ತು. ಒಂದೊಮ್ಮೆ ಅಪ್ಪಿ ತಪ್ಪಿ ಇಬ್ಬರೂ ಲೆಟರ್ ತಂದರೆ ಇಬ್ಬರೂ ಲೆಟರ್ ಕಳೆದುಕೊಂಡು ನಾಮಿನೇಷನ್ ನಲ್ಲಿ ನಡೆಯಬೇಕಿತ್ತು.

ಗಿಲ್ಲಿ ಲೆಟರ್ ತಂದೇ ತರುತ್ತಾನೆ ಎಂಬ ಭರವಸೆಯಲ್ಲಿ ಕಾವ್ಯಾ ಅವರು ಯಾವುದೇ ಪತ್ರ ತರಲು ಹೋಗಿಲ್ಲ. ನೋಡಿದರೆ ಅದು ನಿಜವೇ ಆಗಿದೆ. ಗಿಲ್ಲಿ ಕಾವ್ಯಾ ಲೆಟರ್ ತಂದಿದ್ದರು. ಈ ಕಾರಣಕ್ಕೆ ಗಿಲ್ಲಿ ನಾಮಿನೇಟ್ ಆದರೆ, ಕಾವ್ಯ ನಾಮಿನೇಷನ್ ನಿಂದ ಬಚಾವ್ ಆದರು. ಇಬ್ಬರ ಅಂಡರ್‌ಸ್ಟಾಂಡಿಂಗ್ ನೋಡಿ ಅನೇಕರಿಗೆ ಅಚ್ಚರಿಯಾಗಿದೆ.

ಇದನ್ನೂ ಓದಿ: ಕಣ್ಣೀರು ಸುರಿಸುತ್ತ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಒಂದಾಗ ಅಶ್ವಿನಿ ಗೌಡ, ಜಾಹ್ನವಿ

ಗಿಲ್ಲಿ ಲೆಟರ್ ತಂದಿದ್ದಕ್ಕೆ ಕಾವ್ಯಾ ಅವರು ಸಂತೋಷಪಟ್ಟರು. ಕಾವ್ಯ ಕೂಡ ಗಿಲ್ಲಿ ತ್ಯಾಗವನ್ನು ಕೊಂಡಾಡಿದರು. ಜೊತೆಗೆ, ಪ್ರೀತಿಯಿಂದ ಅಪ್ಪುಗೆ ಕೊಟ್ಟರು. ಆಯ್ಕೆ ಆದ ಆರು ಮಂದಿ ಒಬ್ಬರು ಕ್ಯಾಪ್ಟನ್ ಆಗಿ ಆಯ್ಕೆ ಆಗಬೇಕಿದೆ. ಈ ವಾರ ಒಂದಷ್ಟು ಬಹಿರಂಗವನ್ನು ಕರೆಸಿ ಮತದಾನ ಮಾಡಲಾಗಿತ್ತು. ಈ ವೇಳೆ ಕಾವ್ಯಕ್ಕೆ ಹೆಚ್ಚು ಮತ ಬಿದ್ದರೆ ಅವರು ಈ ವಾರದ ಕ್ಯಾಪ್ಟನ್ ಕೂಡ ಆಗಲಿದ್ದಾರೆ. ಇದು ನಿಜವಾದ ಅಭಿಮಾನಿಗಳು ಕೂಡ ಖುಷಿಪಡಲಿದ್ದಾರೆ. ಇದರ ಜೊತೆಗೆ ಗಿಲ್ಲಿ ಅವರು ತಮ್ಮ ಆಟದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆಯಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *