Headlines

ನೈಟ್‌ ಶಿಫ್ಟ್​ ಹೊರೆ ಕಡಿಮೆ ಮಾಡಲು 10 ರೋಗಿಗಳನ್ನು ಕೊಂದ ನರ್ಸ್

ನೈಟ್‌ ಶಿಫ್ಟ್​ ಹೊರೆ ಕಡಿಮೆ ಮಾಡಲು 10 ರೋಗಿಗಳನ್ನು ಕೊಂದ ನರ್ಸ್


ನೈಟ್ ಶಿಫ್ಟ್‌ನಲ್ಲಿ ಕೆಲಸದ ಒತ್ತಡ ಕಡಿಮೆ ಮಾಡಲು ನರ್ಸ್ 10 ರೋಗಿಗಳನ್ನು ಕೊಂದಿರುವ ಘಟನೆ ಜರ್ಮನಿಯಲ್ಲಿ (ಜರ್ಮನ್ ನರ್ಸ್) ನಡೆದಿದೆ. ಇದೀಗ ಪ್ಯಾಲಿಯೇಟಿವ್ ಕೇರ್ ನರ್ಸ್ (ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯರು ಮಾಡುವ ನರ್ಸ್)ಗೆ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. ಈ ನರ್ಸ್ 10 ರೋಗಿಗಳನ್ನು ಕೊಂದಿದ್ದಾರೆ, 27 ರೋಗಿಗಳನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಬಿಬಿಸಿ ವರದಿಯ ಪ್ರಕಾರ, ಈ ನರ್ಸ್‌ಗೆ ಜರ್ಮನಿಯ ಆಚೆನ್‌ನ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಈ 2023-2024ರಲ್ಲಿ ಪಶ್ಚಿಮ ಜರ್ಮನಿಯ ವೂರ್ಸೆಲೆನ್‌ನಲ್ಲಿನ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಈ 44 ವರ್ಷದ ನರ್ಸ್ ವೃದ್ಧರು ಮತ್ತು ಮಾರಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಟಾರ್ಗೆಟ್ ಮಾಡಿ, ಮಾರ್ಫಿನ್ ಮತ್ತು ಮಿಡಜೋಲಮ್ ಎಂಬ ನಿದ್ರಾಜನಕ ಚುಚ್ಚುಮದ್ದು ನೀಡುತ್ತಿದ್ದರು. ಇದರಿಂದ ರಾತ್ರಿ ವೇಳೆ ಸುಮ್ಮನಾಗುತ್ತಿದ್ದರು ಎಂದು ಕೋರ್ಟ್ ಮುಂದೆ ನರ್ಸ್ ಹೇಳಿದ್ದಾರೆ. ರಾತ್ರಿ ವೇಳೆ ನನಗೆ ಕಿರಿಕಿರಿ ಮಾಡಿತು. ಸರಿಯಾಗಿ ನಿದ್ದೆಯೂ ಬರಲು. ರಾತ್ರಿಯಿಂದ ಬೆಳಿಗ್ಗೆ ತನಕ ಅವರ ಸೇವೆ ಮಾಡಬೇಕು. ಇದನ್ನು ಬೇಸತ್ತು ಹೀಗೆ ಮಾಡಿದ್ದೇನೆ ಎಂದು ನರ್ಸ್ ಕೋರ್ಟ್ ಮುಂದೆ ತಪ್ಪೊಪ್ಪಿದೆ. ನರ್ಸ್ ಮಾಡಿದ ಈ ಕೃತ್ಯಕ್ಕೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿ, ಆದೇಶ ಹೊರಡಿಸಿದೆ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿರುವ ಮೀನನ್ನು ಹುಡುಕಿ ಜಾಣರೆನಿಸಿಕೊಳ್ಳಿ

ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಯುತ್ತಿದೆ:

ನರ್ಸ್ 2007ರಲ್ಲಿ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿ, 2020ರಲ್ಲಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ರಾತ್ರಿ ವೇಳೆ ಕೆಲಸ ಮಾಡಿ ಅಭ್ಯಾಸವಿಲ್ಲದ ಕಾರಣ, ರೋಗಿಗಳನ್ನು ನಿಭಾಯಿಸುವುದು ಕಷ್ಟವಾಗಿತ್ತು. ಮಕ್ಕಳನ್ನು ಕಾಟ ತಡೆಯಲಾಗದೆ. ನರ್ಸ್ ಮಾರ್ಫಿನ್ ಮತ್ತು ಮಿಡಜೋಲಮ್ ಚುಚ್ಚುಮದ್ದು ನೀಡಿದ್ದರು. ಇದು ಆಸ್ಪತ್ರೆಯ ಆಡಳಿತಕ್ಕೆ ತಿಳಿದು ಬಂದಿದೆ, ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ, 2024ರಲ್ಲಿ ಬಂಧಿಸುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಜರ್ಮನಿಯಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂದು ಬಿಸಿಸಿ ವರದಿ ಮಾಡಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *