ತುಮಕೂರು, ನವೆಂಬರ್ 07: ಸಿಎಂ ಸಿದ್ದರಾಮಯ್ಯ ಭೇಟಿ ಹಿನ್ನಲೆ ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ ತುಮಕೂರು ನಿವಾಸದಲ್ಲಿ ಸಕಲ ಸಿದ್ಧತೆ ಭರದಿಂದ ಸಾಗಿದೆ. ಸ್ಥಾನ ಕೈತಪ್ಪಿದ ಬಳಿಕ ಮೊದಲ ಬಾರಿಗೆ ಸಿಎಂ ರಾಜಣ್ಣ ಅತಿಥ್ಯ ನೀಡುತ್ತಿದ್ದರು, ಸಹಜವಾಗಿಯೇ ಈ ಬಗ್ಗೆ ಕುತೂಹಲ ಹೆಚ್ಚಿದೆ. ಸಂಪುಟ ಪುನಾರಚನೆ ಜೊತೆಗೆ ಮತ್ತೆ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಗ್ಗೆ ಬಹಿರಂಗವಾಗಿಯೇ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದು, ಇಂದು ಊಟದ ವೇಳೆ ರಾಜ್ಯ ರಾಜಕೀಯ ಚರ್ಚೆಗೆ ಅವಕಾಶವಿದೆ. ಈ ವೇಳೆ ಪರಮೇಶ್ವರ್ ಮತ್ತು ತುಮಕೂರು ಶಾಸಕರು ನಿರೀಕ್ಷಿಸುವ ನಿರೀಕ್ಷೆಯಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.