ಕಮಲ್ ಹಾಸನ್ ಹಳೆ ಸಿನಿಮಾ ಮರು ಬಿಡುಗಡೆಗೂ ವಿರೋಧ, ಪ್ರತಿಭಟನೆ

ಕಮಲ್ ಹಾಸನ್ ಹಳೆ ಸಿನಿಮಾ ಮರು ಬಿಡುಗಡೆಗೂ ವಿರೋಧ, ಪ್ರತಿಭಟನೆ


ಕಮಲ್ ಹಾಸನ್ ಈ ಹಿಂದೆ ಕನ್ನಡ ಭಾಷೆಯ ಬಗ್ಗೆ ನೀಡಿದ್ದ ಹೇಳಿಕೆ ವಿವಾದದ ಸ್ವರೂಪವಾಗಿತ್ತು. ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ವೇಳೆ ಕಮಲ್ ಹಾಸನ್ ಕನ್ನಡದ ಬಗ್ಗೆ ಮಾತನಾಡಿ, ‘ಕನ್ನಡ ತಮಿಳು ಭಾಷೆಯಿಂದಲೇ ಜನ್ಮ ನೀಡಿದೆ’ ಎಂಬರ್ಥದ ಮಾತುಗಳನ್ನು ಆಡಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದರು. ಸಿನಿಮಾ ಬಿಡುಗಡೆಗೆ ಅವಕಾಶ ನೀಡಲಿಲ್ಲ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಸಹ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆಗಲಿಲ್ಲ.

‘ಥಗ್ ಲೈಫ್’ ಸಿನಿಮಾ ಫ್ಲಾಪ್ ಆಯ್ತು, ಇದೀಗ ಕಮಲ್ ಹಾಸನ್ ನಟನೆಯ ಹಳೆಯ ಸಿನಿಮಾ ಒಂದು ಮರು ಬಿಡುಗಡೆ ಆಗುತ್ತಿದೆ, ಆ ಸಿನಿಮಾಕ್ಕೂ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ನಟನೆಯ ಕಲ್ಟ್ ಸಿನಿಮಾ ಖ್ಯಾತವಾಗಿರುವ ‘ನಾಯಕನ್’ ಸಿನಿಮಾ ಇಂದು ಭಾರತದ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಸಿನಿಮಾದ ಮರು ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ.

ಇಂದು (ನವೆಂಬರ್ 07) ಕಮಲ್ ಹಾಸನ್ ಹುಟ್ಟುಹಬ್ಬವಿದ್ದು, ಇದೇ ದಿನ ‘ನಾಯಗನ್’ ಸಿನಿಮಾ ಚೆನ್ನೈ, ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಮರು ಬಿಡುಗಡೆ ಆಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಸಿನಿಮಾದ ಒಂದು ಶೋ ಸಹ ಪ್ರದರ್ಶನ ಕಾಣುತ್ತಿಲ್ಲ. ಅಸಲಿಗೆ ನಗರದ ಒರಾಯಿನ್ ಮಾಲ್ ನಲ್ಲಿ ಸಿನಿಮಾದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವಂತೆ. ಆದರೆ ಕನ್ನಡಪರ ಹೋರಾಟಗಾರರು ಒರಾಯಿನ್ ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದು, ಸಿನಿಮಾ ಬಿಡುಗಡೆಯನ್ನು ತಡೆದಿದ್ದಾರೆ.

ಇದನ್ನೂ ಓದಿ:71ನೇ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ ಕಮಲ್ ಹಾಸನ್; ಆರೋಗ್ಯದ ಗುಟ್ಟೇನು?

ವಾಟಾಳ್ ನಾಗರಾಜ್, ಸಾರಾ ಗೋವಿಂದು, ಕರವೇ ಶಿವರಾಮೇ ಗೌಡ ಅವರು ಈ ಕಾಲೇಜಿನ ಓರಾಯಿನ್ ಮಾಲ್ ನ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಕಮಲ್ ಹಾಸನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಕಮಲ್ ಹಾಸನ್ ಕ್ಷಮೆ ಕೇಳುವವರೆಗೆ ನಾವು ಬಿಡುವುದಿಲ್ಲ. ‘ನಾಯಗನ್’ ಸಿನಿಮಾವನ್ನು ರಾಜ್ಯದ ಚಿತ್ರಮಂದಿರಗಳು, ಮಾಲ್‌ನವರು ಬಿಡುಗಡೆ ಮಾಡಿಲ್ಲ. ಅವರ ಈ ನಿರ್ಧಾರವನ್ನು ನಾವು ಅಭಿನಂದಿಸುತ್ತೇವೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವಂಥಹಾ ಹೇಳಿಕೆಗಳನ್ನು ಕಮಲ್ ಹಾಸನ್ ನೀಡಿದ್ದಾರೆ. ನಾವು ಇದನ್ನು ಸಹಿಸುವುದಿಲ್ಲ’ ಎಂದು ಹೋರಾಟಗಾರರು.

ಈ ಹಿಂದೆ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ವೇಳೆಯಲ್ಲಿಯೂ ಸಹ ಕನ್ನಡಪರ ಹೋರಾಟಗಾರರು, ಫಿಲಂ ಚೇಂಬರ್ ನವರು ಸಿನಿಮಾದ ವಿರುದ್ಧ ತೀವ್ರವಾದ ಹೋರಾಟ ನಡೆಸಿದ್ದರು. ಕಮಲ್ ಹಾಸನ್ ಅವರು ತಮ್ಮ ಸಿನಿಮಾದ ಬಿಡುಗಡೆಗಾಗಿ ನ್ಯಾಯಾಲಯದ ಮೆಟ್ಟಿಲೇರಿದರು. ಸಿನಿಮಾ ಬಿಡುಗಡೆಗೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ನೀಡುವಂತೆ ಸೂಚಿಸಿತ್ತು. ಸರ್ಕಾರ ಸಹ ಒಪ್ಪಿತ್ತು, ಆದರೆ ಕರ್ನಾಟಕದ ಯಾವೊಂದು ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ಸಹ ಸಿನಿಮಾವನ್ನು ಬಿಡುಗಡೆ ಮಾಡಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *