ರಾಜಮೌಳಿಯ (ರಾಜಮೌಳಿ) ಮುಂದಿನ ಸಿನಿಮಾಕ್ಕಾಗಿ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ, ಸಿನಿಮಾದ ಬಗ್ಗೆ ಯಾವ ಗುಟ್ಟು ಸಹ ರಾಜಮೌಳಿ ಈವರೆಗೆ ಬಿಟ್ಟುಕೊಟ್ಟಿರಲಿಲ್ಲ. ಕೇವಲ ಒಂದು ಪೋಸ್ಟರ್ ಅಷ್ಟೆ ಈ ಹಿಂದೆ ಬಿಡುಗಡೆಯಾಗಿದೆ. ಇಂದು (ನವೆಂಬರ್ 07) ಸಿನಿಮಾದ ವಿಲನ್ ಪೋಸ್ಟರ್ ಅನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದ್ದಾರೆ ರಾಜಮೌಳಿ.
ರಾಜಮೌಳಿಯ ಸಿನಿಮಾಗಳಲ್ಲಿ ವಿಲನ್ಗಳಿಗೆ ಹೀರೋಗಳಷ್ಟೇ ಪ್ರಾಧಾನ್ಯತೆ ಇರುತ್ತದೆ. ಅತ್ಯುತ್ತಮ ನಟರನ್ನೇ ವಿಲನ್ ಪಾತ್ರಕ್ಕೆ ರಾಜಮೌಳಿ ಆಯ್ಕೆ ಮಾಡಿಕೊಳ್ಳುತ್ತಾರೆ, ‘ಈಗ’ ಸಿನಿಮಾದಲ್ಲಿ ಸುದೀಪ್, ‘ಬಾಹುಬಲಿ’ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ, ‘ಆರ್ ಆರ್ ಆರ್’ನಲ್ಲಿ ಹಾಲಿವುಡ್ ನಟ, ಇದೀಗ ರಾಜಮೌಳಿ ತಮ್ಮ ಮುಂದಿನ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ಅವರ ವಿಲನ್ ಆಗಿ ಆಯ್ಕೆಯಾಗಿದ್ದಾರೆ. ಇದೀಗ ಪೃಥ್ವಿರಾಜ್ ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
ರಾಜಮೌಳಿ ಸಿನಿಮಾಗಳಲ್ಲಿ ವಿಲನ್ ಗಳು ದೈತ್ಯ ದೇಹಿಗಳಾಗಿ ಕಾಣಿಸಿಕೊಳ್ಳುತ್ತಾರೆ ಆದರೆ ಈ ಸಿನಿಮಾದಲ್ಲಿ ಪೃಥ್ವಿರಾಜ್ ಅಂಗವಿಕಲನ ಪಾತ್ರದಲ್ಲಿ ನಟಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಸಿನಿಮಾದ ಪ್ರಮುಖ ವಿಲನ್ ಆಗಿದ್ದರೂ ಸಹ ಅವರದ್ದು ಅಂಗವಿಕಲನ ಪಾತ್ರ. ಆದರೆ ತಂತ್ರಜ್ಞಾನದ ನೆರವಿನಿಂದ ತಾನು ಅಂದುಕೊಂಡಿದ್ದನ್ನು ಸಾಧಿಸಲು ಹೊರಟಿರುವ ಪಾತ್ರವದು.
ಇದನ್ನೂ ಓದಿ:ಒಟಿಟಿಯಲ್ಲಿ ನೋಡಿ ಮಹೇಶ್ ಬಾಬು-ರಾಜಮೌಳಿ ಸಿನಿಮಾ ಇವೆಂಟ್ : ಯಾವಾಗ?
ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಪೃಥ್ವಿರಾಜ್ ಸುಕುಮಾರ್ ವೀಲ್ಚೇರ್ ಮೇಲೆ ಕೂತು ಕೋಪದಿಂದ ಮುನ್ನುಗ್ಗುತ್ತಿದೆ. ಅವರ ಎರಡು ಕಾಲುಗಳು, ಒಂದು ಕೈ ಬಡಲಾಗಿ ಸ್ವಾಧೀನ ಇಲ್ಲದಿರುವುದು ತಿಳಿಯುತ್ತಿದೆ. ಆದರೆ ಅವರು ಕೂತಿರುವ ವ್ಹೀಲ್ ಚೇರ್ ಅತ್ಯಾಧುನಿಕ ತಂತ್ರಜ್ಞಾನದಿಂದ ಭರ್ತಿಯಾಗಿದೆ. ಅವರ ವ್ಹೀಲ್ ಚೇರ್ ಗೆ ನಾಲ್ಕು ಕೈಗಳಿವೆ. ‘ಸ್ಪೈಡರ್ ಮ್ಯಾನ್’ ಸಿನಿಮಾದ ವಿಲನ್ ಡಾ ಆಕ್ಟೋಪಸ್ ಬೆನ್ನಿಗೆ ಇದ್ದ ಕೈಗಳು ಇವು ಹೋಲುತ್ತಿವೆ. ವ್ಹೀಲ್ ಚೇರ್ಗೆ ದೊಡ್ಡ ಕುರ್ಚಿ ಇದೆ. ದೊಡ್ಡ ಚಕ್ರಗಳು ಇವೆ. ಒಟ್ಟಾರೆ ಪೃಥ್ವಿರಾಜ್ ಬಹಳ ಬುದ್ಧಿವಂತ, ತಂತ್ರಜ್ಞಾನ ಪರಿಣಿತ ವಿಲನ್ ರೀತಿ ಪೋಸ್ಟರ್ನಲ್ಲಿ ಕಾಣುತ್ತಿದೆ. ಸಿನಿಮಾದಲ್ಲಿ ಅವರ ಪಾತ್ರದ ಹೆಸರು ‘ಕುಂಭ’.
ಪೋಸ್ಟರ್ ಹಂಚಿಕೊಂಡಿರುವ ರಾಜಮೌಳಿ, ಪೃಥ್ವಿರಾಜ್ ಬಗ್ಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಪೃಥ್ವಿರಾಜ್ ಸುಕುಮಾರ್ ಅವರ ಮೊದಲ ಶಾಟ್ ತೆಗೆದ ಕೂಡಲೇ ಅವರ ಬಳಿಗೆ ಹೋಗಿ, ‘ನನಗೆ ಪರಿಚಯವಿರುವ ನಟರಲ್ಲೇ ಅತ್ಯುತ್ತಮ ನಟ ನೀವು’ ಎಂದು ಹೇಳಿದ್ದಾರೆ’ ರಾಜಮೌಳಿ. ಮುಂದುವರೆದು, ‘ಈ ದುಷ್ಟ, ನಿರ್ದಯಿ, ಪ್ರಭಾವಶಾಲಿ ವಿಲನ್ ಕುಂಭ ಪಾತ್ರಕ್ಕೆ ಜೀವ ತುಂಬಿದ್ದು ನಿರ್ದೇಶಕನಾಗಿ ತುಂಬಾ ತೃಪ್ತಿಕರವಾಗಿತ್ತು. ಈ ಪಾತ್ರಕ್ಕೆ ಜೀವ ತುಂಬಲು ಒಪ್ಪಿಕೊಂಡಿದ್ದಕ್ಕೆ ಪೃಥ್ವಿ ಸುಕುಮಾರನ್ ಅವರಿಗೆ ಧನ್ಯವಾದಗಳು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ