ಕಬ್ಬು ಬೆಳೆಗಾರರ ಹೋರಾಟ: ಟನ್​ ಕಬ್ಬಿಗೆ 3500 ರೂ. ಕೊಟ್ಟರೆ ಕಾರ್ಖಾನೆಗಳಿಗೆ ನಿಜಕ್ಕೂ ನಷ್ಟವಾಗುತ್ತಾ?

ಕಬ್ಬು ಬೆಳೆಗಾರರ ಹೋರಾಟ: ಟನ್​ ಕಬ್ಬಿಗೆ 3500 ರೂ. ಕೊಟ್ಟರೆ ಕಾರ್ಖಾನೆಗಳಿಗೆ ನಿಜಕ್ಕೂ ನಷ್ಟವಾಗುತ್ತಾ?


ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕಬ್ಬು ಬೆಳೆಗಾರರು ರಸ್ತೆಗೆ ಇಳಿದಿದ್ದಾರೆ. ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿ ಮಾಡಲೇಬೇಕು ಎಂದು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಪ್ರತಿ ಕಬ್ಬು ಬೆಳೆಗಾರರಿಗೆ ಟನ್‌ಗೆ 2700 ರಿಂದ 3200 ರೂ. ಇನ್ನೂ ನೀಡುತ್ತಿವೆ. ರಾಜ್ಯದಲ್ಲಿ ಒಟ್ಟು 73 ಸಕ್ಕರೆ ಕಾರ್ಖಾನೆಗಳಿವೆ. ಆ ಮೇಲಿನ ಬಹತೇಕ ಸಕ್ಕರೆ ಕಾರ್ಖಾನೆಗಳು ಮತ್ತು ಹಾಲಿ ಮಾಜಿ ಶಾಸಕರುಗಳದ್ದೇ ಆಗಿವೆ.

ಪ್ರತಿಭಟನೆ ನಡೆಸುತ್ತಿರುವ ರೈತರು 3-4 ಬೇಡಿಕೆಗಳಲ್ಲಿ ಪ್ರಮುಖ ಬೇಡಿಕೆ ಟನ್‌ಗೆ 3500 ರೂ. ನೀಡಬೇಕೆಂಬುದು. ಒಂದು ವೇಳೆ ಸಕ್ಕರೆ ಕಾರ್ಖಾನೆ 3500 ರೂ. ನೀಡಿದರೆ ಅವರಿಗೆ ನಷ್ಟವೇ? ನಿಜವಾಗಿಯೂ ಇಲ್ಲಿ ನಷ್ಟವಾಗುತ್ತಿರುವುದು ರೈತರಿಗ ಅಥವಾ ಕಾರ್ಖಾನೆಗಾ? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇದು. ಒಂದು ಬೆಲೆಯಲ್ಲಿ ಕಬ್ಬು ಬೆಳೆಯಲು ರೈತರು ಸರಿಸುಮಾರು 30 ರಿಂದ 80 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಇಷ್ಟು ಖರ್ಚು ಮಾಡಿದ ಮೇಲೆ ಇಳುವರಿ ಚೆನ್ನಾಗಿ ಬರುತ್ತೆ ಎಂಬ ನಿರೀಕ್ಷೆಯಲ್ಲಿ ರೈತರಿತ್ತಾರೆ. ಆದರೆ, ಒಂದು ವೇಳೆ ಕಬ್ಬು ಬೆಳೆ ಪ್ರಕೃತಿ ಆಟಕ್ಕೆ ಸಿಲುಕಿದರಂತೂ ಕಥೆ ಮುಗಿಯಿತು. ಆ ವರ್ಷ ಇಳುವರಿ ಕಡಿಮೆಯಾದಂತೆ ಅಥವಾ ಬೆಳೆ ಮಣ್ಣು ಪಾಲಾದಂತೆ.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ​​ಪ್ರತಿಭಟನೆ: ಪೊಲೀಸರ ಲಾಠಿ ಚಾರ್ಜ್ ಗೆ ಪ್ರತಿಯಾಗಿ ರೈತರಿಂದ ಕಲ್ಲೇಟು

ಇನ್ನು, ಇಳುವರಿ ಚೆನ್ನಾಗಿ ಬಂದರೂ ಕಟಾವು ಆಗಿ ಕಾರ್ಖಾನೆಯ ಅಂಗಳಕ್ಕೆ ಬಂದಾಗ ಅಲ್ಲಿ ತೂಕದಲ್ಲಿ ಆಗುವ ಮೋಸವೂ ರೈತರಿಗಾಗುವ ನಷ್ಟವೇ. ಮುಂದುವರೆದಂತೆ ಕಬ್ಬು ಕಾರ್ಖಾನೆಯ ಮಶಿನಿನ್ ಬಾಯಿಗೆ ಸಿಲುಕಿ ನಾನಾ ರೂಪವನ್ನು ತಾಳುತ್ತದೆ. ಸಕ್ಕರೆ, ಬೆಲ್ಲ ಮತ್ತು ಉಪ ಉತ್ಪನ್ನಗಳಾದ ಮೊಲಾಸಿಸ್, ಎಥನಾಲ್, ಬಗಾಸ್, ಸ್ಪಿರಿಟ್, ಫಿಲ್ಟರ್ ಕೇಕ್, ಗೊಬ್ಬರ ಮತ್ತು ವಿದ್ಯುತ್, ಕಾರ್ಖಾನೆಗಳು ಉತ್ಪತ್ತಿಯಾಗುತ್ತವೆ. ಆ ಮೂಲಕ ಅವು ಲಾಭ ಪಡೆದುಕೊಳ್ಳುತ್ತವೆ.

ಕಾರ್ಖಾನೆಗಳಿಗೆ ಆಗುವ ಲಾಭವೆಷ್ಟು?

ಕಬ್ಬಿನ ರಿವಕವರ್ ಶೇ. 10ರಷ್ಟು ಇದ್ದರೆ ಒಂದು ಟನ್ ಕಬ್ಬಿನಿಂದ 100 ಕೆಜಿ ಸಕ್ಕರೆ ಉತ್ಪಾದನೆಯಾಗುತ್ತದೆ. ಒಂದು ವೇಳೆ ಸಕ್ಕರೆ ಪ್ರಮಾಣ ಕಡಿಮೆ ಇದ್ದಲ್ಲಿ ಸಕ್ಕರೆ ಉತ್ಪಾದನೆ ಕೂಡ ಕಡಿಮೆಯಾಗುತ್ತದೆ. ಒಂದು ಕೆಜಿ ಸಕ್ಕರೆಗೆ 45 ರೂ.ಗೆ ಮಾರಾಟವಾಗುತ್ತದೆ. ಅಂದರೆ 100 ಕೆಜಿ ಸಕ್ಕರೆ ಬೆಲೆ 4500 ರೂಪಾಯಿಗಳು. ಆದರೆ, ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರದ ಪ್ರಕಾರ ಕಾರ್ಖಾನೆಗಳು ಸಕ್ಕರೆಯನ್ನು ಕೆಜಿಗೆ 31 ರೂ.ನಂತೆ ಮಾರಾಟ ಮಾಡಬೇಕು. 100 ಕೆಜಿ ಸಕ್ಕರೆಯನ್ನು 3100 ರೂ.ಗೆ ಮಾರಬೇಕು. ಹಾಗಂತ ಸಕ್ಕರೆ ಕಾರ್ಖಾನೆಗೆ ಇದರಿಂದ ನಷ್ಟ ಎಂದು ಭಾವಿಸು. ಏಕೆಂದರೆ ಕಬ್ಬಿನಿಂದ ತಯಾರಾಗುವ ಉತ್ಪನ್ನಗಳಿಂದ ಸಕ್ಕರೆಗಿಂತ ಅಧಿಕ ಆದಾಯ ಕಾರ್ಖಾನೆಗಳಿಗೆ ಬರುತ್ತದೆ.

ಉದಾಹರಣೆಗೆ, ಎಥನಾಲ್ ಪ್ರತಿ ಲೀಟರ್‌ಗೆ ಸುಮಾರು 65.61 ರೂಪಾಯಿಗೆ ಮಾರಾಟವಾಗುತ್ತದೆ. 1 ಟನ್’ ಕಬ್ಬಿನಿಂದ ಸುಮಾರು 70 ರಿಂದ 80 ಲೀಟರ್’ ಎಥನಾಲ್’ ಅನ್ನು ಪಡೆಯಬಹುದು. ಅಂದರೆ, 70 ಲೀಟರ್‌ಗೆ 4,550 ರೂ. ಆದವು. ಎಥನಾಲ್‌ ಒಂದರಿಂದಲೇ ಇಷ್ಟೊಂದು ಲಾಭ ಕಾರ್ಖಾನೆಗೆ ಆಗಲಿದೆ, ರೈತರಿಗೆ ಹಣ ನೀಡುವ ಎಥನಾಲ್‌ನಿಂದ ರಿಕವರಿ ಆಗಲಿದೆ. ಇನ್ನು ಮೊಲಾಸಿಸ್‌ನಿಂದ ತಯಾರಾಗುವ ಡಿಸ್ಟಿಲ್ಡ್ ಸ್ಪಿರಿಟ್‌ನಿಂದಲೂ ಏನು ಕಡಿಮೆ ಲಾಭ ಬರುವುದಿಲ್ಲ. ಈ ಡಿಸ್ಟಿಲ್ಡ್ ಸ್ಪಿರಿಟ್ ಅನ್ನು ಮದ್ಯ ತಯಾರಿಕೆ ಸೇರಿದಂತೆ ಅನೇಕ ವಸ್ತುಗಳನ್ನು ಬಳಸಲಾಗಿದೆ. ಹೀಗಾಗಿ ಇದು ಕೂಡ ಸಕ್ಕರೆ ಕಾರ್ಖಾನೆ ಕಿಸೆ ತುಂಬಿಸುತ್ತದೆ. ಕಾರ್ಖಾನೆ ಉತ್ಪಾದಿಸುವ ವಿದ್ಯುತ್ ಹೀಗೆ, ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ತಯಾರಿಸುವ ವಸ್ತುವು ಲಾಭದಾಯಕವೇ. ಇಲ್ಲಿಗೆ ಯಾರಿಗೆ ಲಾಭ? ನಷ್ಟ ಯಾರಿಗೆ? ನೀವೇ ಯೋಚಿಸಿ.

ಕೇಂದ್ರದ FRP ಬೆಲೆ ಎಷ್ಟು?

ಕೇಂದ್ರದ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್‌ಗೆ 355 ರೂ.ನಿಗದಿ ಮಾಡಿದೆ. ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ. ಶೇ.10.25 ಮೂಲ ಇಳುವರಿ ದರವಿದ್ದರೆ (ಸಕ್ಕರೆ ಉತ್ಪಾದನಾ ಪ್ರಮಾಣ) ಪ್ರತಿ ಕ್ವಿಂಟಾಲ್ ಗೆ 355 ರೂ.ಗಳಂತೆ ಅನುಮೋದನೆ ನೀಡಲಾಗಿದೆ. ಅಂದರೆ ಒಂದು ಟನ್‌ಗೆ 3550 ರೂ. ಆಗುತ್ತದೆ. ಕೇಂದ್ರ ಸರ್ಕಾರ 201 ರಿಂದ ಪ್ರತಿವರ್ಷ ಕಬ್ಬಿನ ಎಫ್‌ಆರ್‌ಪಿ ಬೆಲೆ ಏರಿಸುತ್ತಲೇ ಬಂದರೂ ಸಕ್ಕರೆ ಕಾರ್ಖಾನೆಗಳು, ರಾಜ್ಯ ಸರ್ಕಾರ ಮಾತ್ರ ಈ ಬೆಲೆಗೆ ಹಿಂದೇಟು ಹಾಕುತ್ತಿರುವುದು ಯಾಕೆ ಮಾತ್ರ ಆ ದೇವರೇ ಬಲ್ಲ. ಇಲ್ಲಿ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಏನು ಅಡ್ಜೆಸ್ಟಮೆಂಟ್ ಇದೆಯೋ ಗೊತ್ತಿಲ್ಲ.

ಲೇಖನ- ವಿವೇಕ ಬಿರಾದಾರ

ರಂದು ಪ್ರಕಟಿಸಲಾಗಿದೆ – 4:11 pm, ಶುಕ್ರ, 7 ನವೆಂಬರ್ 25



Source link

Leave a Reply

Your email address will not be published. Required fields are marked *