Headlines

Video: ತಡರಾತ್ರಿ ಮನೆಗೆ ಬಂದ ಮಗನನ್ನು ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಂಡ ತಂದೆ

Video: ತಡರಾತ್ರಿ ಮನೆಗೆ ಬಂದ ಮಗನನ್ನು ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಂಡ ತಂದೆ


ಒಬ್ಬರೋ ಇಬ್ಬರೋ ಮಕ್ಕಳಿರುವಾಗ ಕಾರಣ ತಂದೆತಾಯಂದಿರಿಗೆ (ಪಾಲಕರು) ತಮ್ಮ ಮಕ್ಕಳ ಮೇಲೆ ಮುದ್ದು ಜಾಸ್ತಿ. ತಮ್ಮ ಮಗ ಅಥವಾ ಮಗಳು ಏನು ತಪ್ಪು ಮಾಡಿದ್ರೂ ಗದರುವುದಿಲ್ಲ. ಹೀಗಾಗಿ ಮಕ್ಕಳು ಕೂಡ ಅದನ್ನೇ ಪ್ಲಸ್ ಪಾಯಿಂಟ್ ಆಗಿ ತೆಗೆದುಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ. ಹೌದು, ಯುವಕ ತಡವಾಗಿ ಮನೆಗೆ ಬಂದಿದ್ದು, ಆತನ ದಾರಿಯನ್ನೇ ಕಾಯುತ್ತಿದ್ದ ತಂದೆಯೂ ಮಾಡಿದ ಕೆಲಸ ನೋಡಿದ್ರೆ ನೀವು ಬಾಯಿಯ ಮೇಲೆ ಬೆರಳು ಇಡ್ತೀರಾ. ಈ ರೀತಿ ಕೂಡ ವೆಲ್ಕಮ್ ಸಿಗುತ್ತಾ ಎಂಬ ಪ್ರಶ್ನೆಯೊಂದು ನಿಮ್ಮ ತಲೆಯಲ್ಲಿ ಮೂಡುತ್ತದೆ. ಫನ್ನಿ ಎನಿಸುವ ಈ ವಿಡಿಯೋ ಸದ್ಯ ವೈರಲ್ ಆಗಿದೆ.

ತಡವಾಗಿ ಮನೆಗೆ ಬಂದ ಮಗ, ತಂದೆ ಮಾಡಿದ್ದೇನು?

@baxnal ಹೆಸರಿನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ವಿಡಿಯೋದಲ್ಲಿ ರಾತ್ರಿಯಾದ್ರು ಮನೆಗೆ ಬಾರದೆ ಇರುವವರು ತಂದೆ ಸೇರಿದಂತೆ ಮನೆಯ ಸದಸ್ಯರನ್ನು ಕಾಯುತ್ತಿದ್ದಾರೆ. ಯುವಕನೊಬ್ಬ ಬಾಗಿಲು ತೆರೆದು ಮೆಲ್ಲನೆ ಒಳಗೆ ಬರುತ್ತಿದ್ದಂತೆ ಆರತಿ ತಟ್ಟೆಯ ತಂದೆಯೂ ಮಗನಿಗೆ ಆರತಿ ಮಾಡಿ ಮನೆಯೊಳಗೆ ಸ್ವಾಗತಿಸುವುದನ್ನು ನೀವು ನೋಡಬಹುದು. ತಂದೆಯಿಂದ ಈ ರೀತಿ ಪ್ರತಿಕ್ರಿಯೆ ಬರುತ್ತಿದ್ದಂತೆ ಯುವಕ ಜೋರಾಗಿ ನಕ್ಕಿದ್ದಾನೆ. ಆದರೆ ವ್ಯಕ್ತಿಯೂ ಆರತಿ ತಟ್ಟೆಯಲ್ಲಿದ್ದ ಬೆಲ್ಟ್ ತೆಗೆದು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಇದನ್ನು ನೋಡಿದ ಮನೆಯ ಸದಸ್ಯರೆಲ್ಲರೂ ಜೋರಾಗಿ ನಗುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ತಂದೆಯ ತ್ಯಾಗಕ್ಕೆ ಮಗನ ಬಹುಮಾನ: ಅಪ್ಪನಿಗೆ ಉಡುಗೊರೆಯಾಗಿ ಟಾಟಾ ಪಂಚ್ ನೀಡಿದ ಮಗ

ನವೆಂಬರ್ 5 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗೆ ಸೇರಿದೆ. ಒಬ್ಬ ಬಳಕೆದಾರ ನಮ್ಮ ಮನೆಯಲ್ಲಿ ತಂದೆಯ ರಿಯಾಕ್ಷನ್ ಹೀಗೆ ಇರಲ್ಲ, ಮೊದಲು ಕೈ ಸಿಗುವುದೇ ಬೆಲ್ಟ್ ಅಂಗಡಿ. ಯಾರಾದರೂ ಮೊದಲು ಆರತಿ, ಆಮೇಲೆ ಬೆನ್ನಿಗೆ ಬೆಲ್ಟ್ ನಿಂದ ಬೀಳುತ್ತೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಚಿಕಿತತ್ಸೆಗೆ ಸಿದ್ಧವಾದಂತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *