ಬೆಳಗಾವಿ, ನವೆಂಬರ್ 07: ಟನ್ ಕಬ್ಬಿಗೆ 3,500 ರೂ ಎಫ್ ಆರ್ಪಿ ನಿಗದಿಪಡಿಸುವಂತೆ ರೈತರು ರಸ್ತೆಗಿಳಿದಿದ್ದಾರೆ. ಹೋರಾಟದ ಕಾವು ಜೋರಾಗಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಕ್ರಾಸ್ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ನಾಲ್ಕು ಕೆಎಸ್ ಆರ್ ಟಿಸಿ ಬಸ್ ಗಾಜು ಪುಡಿ ಆಗಿದೆ. ಒಂದು ಗೂಡ್ಸ್ ವಾಹನಕ್ಕೂ ಕಲ್ಲು ತೂರಾಟ ಮಾಡಲಾಯಿತು. ಅಷ್ಟೇ ಅಲ್ಲದೆ ಪೊಲೀಸರ ಮೇಲೂ ಕಲ್ಲು ತೂರಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಕೆಎಸ್ಆರ್ಟಿಸಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.