ಬೆಳಗಾವಿ, ನವೆಂಬರ್ 07: ಕಳೆದ 9 ದಿನಗಳಿಂದ ಬೆಳಗಾವಿಯಲ್ಲಿ (ಬೆಳಗಾವಿ) ಕಬ್ಬು ಬೆಳೆಗಾರರ ಹೋರಾಟ (ಕಬ್ಬು ರೈತರ ಪ್ರತಿಭಟನೆ) ನಡೆಸುತ್ತಿದ್ದಾರೆ. ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಹೋರಾಟ ತೀವ್ರಗೊಳ್ಳಲು ಇತ್ತ ಸರ್ಕಾರದ ಸಭೆಯ ಮೇಲೆ ಸಭೆ ಮಾಡಿದೆ. ಯಾವುದೇ ತೀರ್ಮಾನ ಕೈಗೊಳ್ಳದ ಸರ್ಕಾರಕ್ಕೆ ಇದೀಗ ಕಬ್ಬು ಬೆಳೆಗಾರರು ಮತ್ತೊಂದು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ನಾಳೆ ಒಂದು ದಿನ ಟೈಮ್ ಇದೆ, ಅಷ್ಟರಲ್ಲಿ ಘೋಷಣೆ ಮಾಡಲಿ. ಇಲ್ಲದಿದ್ರೆ ನಾಡಿದ್ದು ಪುಣೆ-ಬೆಂಗಳೂರು ರಸ್ತೆ ಬಂದ್ ಮಾಡಿ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಹಸಿರು ಸೇನೆಯ ಸಂಘದ ಪೂಜಾ ರಾಜ್ಯಾಧ್ಯಕ್ಷ ಚೂನಪ್ಪರಿ ಹೇಳಿದರು
ಈ ಕುರಿತಾಗಿ ಟಿವಿ9ಗೆ ಹಸಿರು ಸೇನೆಯ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿಕೆ ನೀಡಿದ್ದು, ಸಿಎಂ ಅವರ ಜೊತೆಗೆ ಮಾತಾಡಿ ನಮ್ಮ ಬೇಡಿಕೆಯನ್ನು ಹೇಳಲಾಗಿದೆ. ಪ್ರತಿ ಟನ್ ಕಬ್ಬಿಗೆ 3,500 ರೂ ಕೊಡಬೇಕು ಅಂತಾ ಹೇಳಿದ್ದಾರೆ. ಸಕ್ಕರೆ ಕಾರ್ಖಾನೆಯವರು ಒಪ್ಪುತ್ತಿಲ್ಲ ಅಂತಾ ಸಿಎಂ ಹೇಳಿದರು. ನೀವು ಒಪ್ಪಿಸಿ ಇಲ್ಲದಿದ್ದರೆ ಸರ್ಕಾರದಿಂದ 1 ಸಾವಿರ ಕೋಟಿ ರೂ. ಕೊಡಿ ಅಂತಾ ಹೇಳಿದ್ದೇನೆ.
ಇದನ್ನೂ ಓದಿ: ಬೆಳಗಾವಿ: ಪೊಲೀಸರ ಮೇಲೆ ಕಲ್ಲು ತೂರಾಟ; ವಾಹನಗಳ ಸ್ಥಿತಿ ಹೇಗಿದೆ ನೋಡಿ
ಇನ್ನು ಕಲ್ಲುತೂರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಲ್ಲು ತೂರಾಟ ನಡೆಸಿದವರು ನಮ್ಮ ರೈತರಲ್ಲ. ರಸ್ತೆ ತಡೆದವರು ನಮ್ಮವರು. ಆದರೆ ಕಲ್ಲು ತೂರಿದವರು ನಮ್ಮವರಲ್ಲ. ಕಲ್ಲು ತೂರಾಟದಲ್ಲಿ ಪೊಲೀಸರಿಗೆ ಗಾಯವಾಗಿದೆ ಎಂದು ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದ್ದಾರೆ.
ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಹೇಳಿದ್ದಿಷ್ಟು
ಟಿವಿ9ಗೆ ಬೆಳಗಾವಿ ಎಸ್ ಪಿ ಭೀಮಾಶಂಕರ ಗುಳೇದ್ ಹೇಳಿಕೆ ನೀಡಿದ್ದು, ಹತ್ತರಗಿ ಟೋಲ್ ಬಳಿ ಕಲ್ಲು ತೂರಾಟವಾಗಿದ್ದು ದುರದೃಷ್ಟಕರ. ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡಿದರು. ಕೆಲವು ಕಿಡಿಗೇಡಿಗಳು ಕಲ್ಲುತೂರಾಟ. ಲಾಠಿಚಾರ್ಜ್ ಮಾಡದಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೆವು. ಕಲ್ಲು ತೂರಾಟದಲ್ಲಿ ನಮ್ಮ 6 ಸಿಬ್ಬಂದಿಗೆ ಗಾಯವಾಗಿದೆ. ಪುಣೆ-ಬೆಂಗಳೂರು ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಏನೆಲ್ಲಾ ಹಾನಿಯಾಗಿದೆ ಎಂದು ಪರಿಶೀಲಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 6:32 pm, ಶುಕ್ರ, 7 ನವೆಂಬರ್ 25