Headlines

ಅಕ್ರಮ ಪರಮಾಣು ಚಟುವಟಿಕೆಗಳು ಪಾಕಿಸ್ತಾನದ ಇತಿಹಾಸದಲ್ಲೇ ಇದೆ; ಟ್ರಂಪ್ ಹೇಳಿಕೆಗೆ ಭಾರತ ಪ್ರತಿಕ್ರಿಯೆ

ಅಕ್ರಮ ಪರಮಾಣು ಚಟುವಟಿಕೆಗಳು ಪಾಕಿಸ್ತಾನದ ಇತಿಹಾಸದಲ್ಲೇ ಇದೆ; ಟ್ರಂಪ್ ಹೇಳಿಕೆಗೆ ಭಾರತ ಪ್ರತಿಕ್ರಿಯೆ


ನವದೆಹಲಿ, ನವೆಂಬರ್ 7: ಪಾಕಿಸ್ತಾನ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಡೊನಾಲ್ಡ್ ಟ್ರಂಪ್) ಹೇಳಿಕೆಯನ್ನು ನೀಡಿದ್ದರು. ಈ ರೀತಿ ರಹಸ್ಯ ಮತ್ತು ಕಾನೂನುಬಾಹಿರವಾದ ಚಟುವಟಿಕೆಗಳನ್ನು ನಡೆಸುವುದು ಪಾಕಿಸ್ತಾನದ (ಪಾಕಿಸ್ತಾನ) ಇತಿಹಾಸದಲ್ಲೇ ಇದೆ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿದೆ. “ರಹಸ್ಯ ಮತ್ತು ಅಕ್ರಮ ಪರಮಾಣು ಚಟುವಟಿಕೆಗಳನ್ನು ನಡೆಸುವುದು ಪಾಕಿಸ್ತಾನದಲ್ಲಿ ಹೊಸತೇನಲ್ಲ. ಅದು ಕಳ್ಳಸಾಗಣೆ, ರಫ್ತು ನಿಯಂತ್ರಣ ಉಲ್ಲಂಘನೆ, ರಹಸ್ಯ ಪಾಲುದಾರರನ್ನು ನಡೆಸುತ್ತಿದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“ಈ ರೀತಿ ಪಾಕಿಸ್ತಾನದ ಅಕ್ರಮ ಚಟುವಟಿಕೆಗಳ ಬಗ್ಗೆ ಭಾರತ ಯಾವಾಗಲೂ ಎಲ್ಲಾ ಸಮುದಾಯದ ಗಮನ ಸೆಳೆಯುತ್ತಿದೆ. ಈ ಪಾಕಿಸ್ತಾನದ ಪರಮಾಣು ಪರೀಕ್ಷೆಯ ಬಗ್ಗೆ ಯುಎಸ್ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯನ್ನು ನಾವು ಗಮನಿಸಿದ್ದೇವೆ” ಎಂದು ಜೈಸ್ವಾಲ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಟರ್ಕಿಯಲ್ಲಿ ಶಾಂತಿ ಮಾತುಕತೆಗಳ ನಡುವೆ ಕದನವಿರಾಮ ಉಲ್ಲಂಘಿಸಿ ಅಫ್ಘಾನಿಸ್ತಾನಕ್ಕೆ ನುಗ್ಗಿದ ಪಾಕಿಸ್ತಾನ

ಪಾಕಿಸ್ತಾನ, ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾ ಸೇರಿದಂತೆ ಹಲವಾರು ದೇಶಗಳು ಸಕ್ರಿಯವಾಗಿ ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ ಕೆಲವು ದಿನಗಳ ನಂತರ ಮತ್ತು ಅಮೆರಿಕ ತನ್ನದೇ ಆದ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸುತ್ತದೆ ಎಂದು ಖಾತರಿಪಡಿಸಿದ ಭಾರತ ನಂತರ ಈ ಪ್ರತಿಕ್ರಿಯೆಯನ್ನು ನೀಡಿದೆ.

ಇದನ್ನೂ ಓದಿ: ಭಾರತದ ಹೆಣ್ಣುಮಕ್ಕಳು ಯುದ್ಧವಿಮಾನವನ್ನೂ ಹಾರಿಸುತ್ತಿದ್ದಾರೆ; ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಸಂದೇಶ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತು ಕೂಡ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆ ನೀಡಿದ್ದಾರೆ. “ಇತ್ತೀಚೆಗೆ ಅಘಾನಿಸ್ತಾನದ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಅಂದಿನಿಂದ, ಅಭಿವೃದ್ಧಿ ಸಹಕಾರದ ವಿಷಯದಲ್ಲಿ ನಾವು ಹಲವಾರು ವಿನಿಮಯಗಳನ್ನು ನಡೆಸಿದ್ದೇವೆ. ಅದರ ಜೊತೆಗೆ ವಿದೇಶಾಂಗ ಸಚಿವರು ಮತ್ತು ಅಫ್ಘಾನಿಸ್ತಾನದ ವಿದೇಶಾಂಗ ಸಚಿವರ ನಡುವೆ ದೂರವಾಣಿ ಸಂಭಾಷಣೆಯನ್ನು ನಡೆಸಿದ್ದೇವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *