Headlines

ಮಾಲೂರು ಕ್ಷೇತ್ರದ ಮರು ಮತ ಎಣಿಕೆಗೆ ಸಜ್ಜಾದ ಕೋಲಾರ: ಹಾಲಿ, ಮಾಜಿ ಶಾಸಕರಲ್ಲಿ ಢವಢವ

ಮಾಲೂರು ಕ್ಷೇತ್ರದ ಮರು ಮತ ಎಣಿಕೆಗೆ ಸಜ್ಜಾದ ಕೋಲಾರ: ಹಾಲಿ, ಮಾಜಿ ಶಾಸಕರಲ್ಲಿ ಢವಢವ


ಕೋಲಾರ, ನವೆಂಬರ್ 07: ಇದೇ ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಎಣಿಕೆ (ಮತಗಳ ಮರು ಎಣಿಕೆ) ಸುಪ್ರೀಂ ಕೋರ್ಟ್ನ ಆದೇಶದಂತೆ ನಡೆಯುತ್ತಿರುವುದು, ದೇಶದಲ್ಲೇ ಸದ್ದು ಮಾಡುತ್ತಿದೆ. ಇದೊಂದು ಚುಣಾವಣೆ ಇವಿಎಂ ಭವಿಷ್ಯ, ಕಾಂಗ್ರೆಸ್ ನ (ಕಾಂಗ್ರೆಸ್) ಮತಚೋರಿ ಹಾಗೂ ಕಾಂಗ್ರೆಸ್ ಮತ ಚೋರಿ ವಿರುದ್ದ ಬಿಜೆಪಿಗೆ ಬಲವಾದ ಅಸ್ತ್ರ ಘಟನೆ. ಹಾಗಾದರೆ ಸದ್ಯ ಮರು ಎಣಿಕೆಗೆ ಏನೆಲ್ಲಾ ಸಿದ್ಧತೆ ನಡೆದಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಎಣಿಕೆಗೆ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಮಂಜುನಾಥಗೌಡ ಮೊರೆಹೋಗಿದ್ದರು. ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ ಹೈಕೋರ್ಟ್ ಮರು ಎಣಿಕೆಗೆ ಸೂಚಿಸಿತ್ತು. ಜೊತೆಗೆ ಈ ವೇಳೆ ಹಾಲಿ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಮರು ಎಣಿಕೆವರೆಗೆ ಅಸಿಂಧುಗೊಳಿಸಿ ಆದೇಶ ನೀಡಿತ್ತು. ನಂತರ ಅಸಿಂಧು ಆದೇಶವನ್ನು ಪ್ರಶ್ನಿಸಿ ಹಾಲಿ ಶಾಸಕ ನಂಜೇಗೌಡ ಸುಪ್ರೀಂ ಮೊರೆ ಹೋಗಿದ್ದರು. ಸದ್ಯ ಸುಪ್ರೀಂ ಅಸಿಂಧು ಆದೇಶಕ್ಕೆ ತಡೆಕೊಟ್ಟು ಮರು ಎಣಿಕೆಗೆ ಸೂಚಿಸಿತ್ತು.

ಇದನ್ನೂ ಓದಿ: ಮಾಲೂರು ಕ್ಷೇತ್ರದ ಮರು ಮತಎಣಿಕೆಗೆ ನಿಗದಿಪಡಿಸಿದ ಚುನಾವಣಾ ಆಯೋಗ!

ಚುನಾವಣಾ ಆಯೋಗ ನವೆಂಬರ್ 11 ರಂದು ಮರು ಎಣಿಕೆ ಕಾರ್ಯಕ್ಕೆ ದಿನಾಂಕ ನಿಗದಿ ಮಾಡಿದೆ. ಸದ್ಯ ಮರು ಎಣಿಕೆ ಕಾರ್ಯಕ್ಕೆ ಕೋಲಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಆರ್.ರವಿ ಅವರು ಕೋಲಾರ ಹೊರವಲಯದ ಕೃಷಿ ವಿಶ್ವವಿದ್ಯಾಲಯದ ಕಾಲೇಜು ಅಧಿಕಾರಿ ಕಾರ್ಯಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಮರುಎಣಿಕೆ ಕಾರ್ಯದ ಸಿಬ್ಬಂದಿಗೆ ತರಬೇತಿ ನೀಡಲು ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯ ಮರು ಎಣಿಕೆ ಕಾರ್ಯಕ್ಕೆ ದಿನಗಣನೆ ಆರಂಭವಾಗಿದ್ದು, ಜಿಲ್ಲಾಚುನಾವಣಾಧಿಕಾರಿ ಹಾಗೂ ಕೋಲಾರ ಎಸ್ ಪಿ ನಿಖಿಲ್ ಪರಿಶೀಲನೆ ನಡೆಸಿದ್ದಾರೆ.

ಮರು ಎಣಿಕೆಯಿಂದ ಹಲವು ಪ್ರಶ್ನೆಗಳಿಗೆ ಉತ್ತರ

ಈ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ ದೇಶದಲ್ಲೇ ಮೊದಲ ಬಾರಿಗೆ ಮರುಎಣಿಕೆ ಕಾರ್ಯ ನಡೆಯುತ್ತಿದ್ದು, ಈ ಮರು ಎಣಿಕೆ ಕಾರ್ಯವು ಹಲವು ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ದೇಶದಲ್ಲಿ ಕಾಂಗ್ರೆಸ್ ಆರಂಭಿಸಿರುವ ಮತ ಚೋರಿ ಅಭಿಯಾನದ ವಿರುದ್ಧ ಬಿಜೆಪಿ ನಡೆಯುತ್ತಿರುವ ಆರೋಪಕ್ಕೆ ಸ್ಥಳೀಯ ಮತ ಎಣಿಕೆಯಲ್ಲಿ ಏನಾದರೂ ಬದಲಾವಣೆ ಆಗಲಿದೆ ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಪ್ರಬಲ ಅಸ್ತ್ರ ಸಿಕ್ಕಂತಾಗಲಿದೆ.

ಕಾಂಗ್ರೆಸ್ ಇವಿಎಂ ವಿರುದ್ಧ ಆರೋಪಕ್ಕೂ ಈ ಮರುಎಣಿಕೆ ಉತ್ತರವನ್ನು ನೀಡಲಿದೆ. ಒಂದು ವೇಳೆ ಮರುಎಣಿಕೆಯಲ್ಲಿ ಇದೇ ಫಲಿತಾಂಶ ಬಂದರೆ ಯಾವುದೇ ಬದಲಾವಣೆಗಳಿಲ್ಲ. ಇನ್ನು ಮರು ಎಣಿಕೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕಾದ ಹಿನ್ನೆಲೆ ಮರು ಎಣಿಕೆ ಕಾರ್ಯವು ಗುಪ್ತವಾಗಿಯೇ. ಯಾವುದೇ ಕಾರಣಕ್ಕೂ ಯಾರೂ ಮರು ಎಣಿಕೆಯ ಫಲಿತಾಂಶ ಪ್ರಕಟವಾಗುತ್ತಿಲ್ಲ ಎಂದು ತನ್ನ ಆದೇಶದಲ್ಲಿ ಅತ್ಯುತ್ತಮವಾಗಿದೆ.

ಇದನ್ನೂ ಓದಿ: ಮಾಲೂರು ಕ್ಷೇತ್ರದ ಮರು ಮತ ಎಣಿಕೆ: ಪರಾಜಿತ ಅಭ್ಯರ್ಥಿಯಿಂದ ಚುನಾವಣಾ ಆಯೋಗಕ್ಕೆ ಮಹತ್ವದ ಪತ್ರ

ಮರುಏಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಎರಡು ಸ್ಟ್ರಾಂಗ್ ಕೊಠಡಿಗಳಲ್ಲಿ ಐವಿಎಂಗಳನ್ನು ಇರಿಸಲಾಗಿದೆ. ಒಂದು ಎಣಿಕಾ ಕೇಂದ್ರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಒಟ್ಟು 14 ಟೇಬಲ್‌ಗಳಲ್ಲಿ 18 ಸುತ್ತಿನ ಮತ ಎಣಿಕೆ ಕಾರ್ಯ ಸರಿಯಾಗಿ. ಮರು ಮತ ಎಣಿಕೆ ಹಿನ್ನೆಲೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು, ಯಾವುದೇ ಅಹಿತರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಒಟ್ಟಾರೆ ಮಾಲೂರು ಕ್ಷೇತ್ರದ ಅಭ್ಯರ್ಥಿಗಳ ಮರು ಎಣಿಕೆ ಹಿನ್ನೆಲೆ ಮಾಲೂರು ಕ್ಷೇತ್ರದ ಅಭ್ಯರ್ಥಿಗಳ ಎದೆಬಡಿತ ಜೋರಾಗಿದ್ದು, ಎಣಿಕೆಯ ಫಲಿತಾಂಶ ಇಡೀ ದೇಶದ ಗಮನ ಸೆಳೆಯಲು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *