Headlines

ಈ ಸರ್ಕಾರಿ ಶಾಲೆಯ ಮಕ್ಕಳಿಗೆ ತಟ್ಟೆಯ ಬದಲು ಹಳೇ ಪೇಪರ್​ನಲ್ಲಿ ಬಿಸಿಯೂಟ!

ಈ ಸರ್ಕಾರಿ ಶಾಲೆಯ ಮಕ್ಕಳಿಗೆ ತಟ್ಟೆಯ ಬದಲು ಹಳೇ ಪೇಪರ್​ನಲ್ಲಿ ಬಿಸಿಯೂಟ!


ಭೋಪಾಲ್, ನವೆಂಬರ್ 7: ಸರ್ಕಾರಿ ಶಾಲಾ ಮಕ್ಕಳು ತಟ್ಟೆಗಳಿಗೆ ಬದಲಾಗಿ ಹಳೇ ಪೇಪರ್‌ನಲ್ಲಿ ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (ವಿಡಿಯೋ ವೈರಲ್) ಆಗುತ್ತಿದೆ. ಮಧ್ಯಪ್ರದೇಶದ ಶಿಯೋಪುರ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿಜಯಪುರ ಬ್ಲಾಕ್‌ನ ಹುಲ್ಪುರ್ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅವರು ಹಳೇ ಪೇಪರ್ನಲ್ಲಿ ಬಡಿಸಿದ ಊಟವನ್ನು ಮಾಡುತ್ತಿದ್ದಾರೆ. ಈ ರೀತಿ ಸ್ವಲ್ಪವೂ ಶುಚಿತ್ವವಿಲ್ಲದೆ, ಅಮಾನವೀಯವಾಗಿ ಮಕ್ಕಳ ಜೊತೆ ವರ್ತಿಸುತ್ತಿರುವ ಶಾಲಾ ಸಿಬ್ಬಂದಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯ ಬೆಳಕಿಗೆ ಬಂದ ನಂತರ, ಶಿಯೋಪುರ್ ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ತಕ್ಷಣ ತನಿಖೆಗೆ ಆದೇಶಿಸಿದ್ದಾರೆ. ಆ ಶಾಲೆಯ ಪ್ರಾಂಶುಪಾಲರಿಗೆ ಶೋ-ಕಾಸ್ ನೋಟಿಸ್ ಸಹ ನೆರವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *