
ಪ್ರೀತಿಸಿದ ಯುವಕ ಮೋಸ ಮಾಡಿದ ಎಂದು ಮನನೊಂದು ಯುವತಿ ಆ*ಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ನಡೆದಿದೆ. ಸಿಂಧು ಪರಣ್ಣನವರ್ ಆ*ಹತ್ಯೆಗೆ ಮಾಡಿಕೊಂಡ ಯುವತಿ.
ಹಾವೇರಿ (ನ.07): ಪ್ರೀತಿಸಿದ ಯುವಕ ಮೋಸ ಮಾಡಿದ ಎಂದು ಮನನೊಂದು ಯುವತಿ ಆ*ಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ನಡೆದಿದೆ. ಸಿಂಧು ಪರಣ್ಣನವರ್ (25 ವರ್ಷ) ಆ*ಹತ್ಯೆಗೆ ಮಾಡಿಕೊಂಡ ಯುವತಿ. ಬಾಯ್ ಫ್ರೆಂಡ್ ಮನೆ ಮುಂದೆ ಶವ ಇಟ್ಟು ಮೃತ ಯುವತಿ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ.
ಬ್ಯಾಡಗಿ ತಾಲೂಕು ಶಂಕ್ರಿಕೊಪ್ಪ ಗ್ರಾಮದ ಯುವತಿ ಸಿಂಧು, ರಾಣೆಬೆನ್ನೂರು ತಾಲೂಕು ಕುದರಿಹಾಳ ಗ್ರಾಮದ ಯುವಕ ಶರತ್ ನೀಲಪ್ಪನವರ್ ಎಂಬ ಯುವಕನ ಜೊತೆ ಹಲವು ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ, ಪ್ರೀತಿಸಿ ಕೈ ಕೊಡಲು ಶರತ್ ಮುಂದಾಗಿದ್ದನಂತೆ. ಇದರಿಂದ ಮನನೊಂದಿದ್ದ ಯುವತಿ ಸಿಂಧು ನೇಣಿಗೆ ಶರಣಾಗಿದ್ದಾರೆ. ಮಗಳ ಸಾವಿನಿಂದ ಮನನೊಂದು ಪೋಷಕರು ಹಾಗೂ ಕುಟುಂಬಸ್ಥರು ಕುದುರಿಹಾಳ ಗ್ರಾಮದ ಶರತ್ ಮನೆಯ ಮುಂದೆ ಯುವತಿಯ ಶವವಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ.
ಶರತ್ ಸಹೋದರಿಯಿಂದ ಸಿಂಧು ಪರಿಚಯವಾಗಿದ್ದಳಂತೆ. ಬಳಿಕ ಶರತ್ ಹಾಗೂ ಸಿಂಧು ನಡುವೆ ಪ್ರೇಮ ಬೆಳೆದಿತ್ತು ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ಶರತ್ ಮನೆಯ ಸದಸ್ಯರು ಮನೆಗೆ ಬೀಗಹಾಕಿ ಪರಾರಿಯಾಗಿದ್ದಾರೆ.
ಮದುವೆ ಮಾಡಿಸುವಂತೆ ಸಿಂಧು ಹಠ ಹಿಡಿದಿದ್ಲು
ಸದ್ಯ ಯುವತಿಯ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಹಲವು ದಿನಗಳಿಂದ ಶರತ್ ಜೊತೆ ಮದುವೆ ಮಾಡಿಸುವಂತೆ ಸಿಂಧು ಹಠ ಹಿಡಿದಿದ್ಲು. ಇದಕ್ಕೆ ಶರತ್ ಕುಟುಂಬ ಸದಸ್ಯರು ಒಪ್ಪಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಯುವತಿ ನೇಣಿಗೆ ಶರಣಾಗಿದ್ದಾಳೆ. ನಮ್ಮ ಮಗಳ ಸಾವಿಗೆ ನ್ಯಾಯ ಬೇಕು.. ನ್ಯಾಯ ಎಂದು ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.