‘ಅಮೃತಧಾರೆ’ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾಳ ಮದುವೆಯ ವಾರ್ಷಿಕೋತ್ಸವದಂದು ಅವರನ್ನು ಒಂದು ಮಾಡಲು ಮಲ್ಲಿ ಮತ್ತು ಆನಂದ್ ಹೋಟೆಲ್ಗೆ ಕರೆದೊಯ್ಯುತ್ತಾರೆ. ಅಲ್ಲಿ ಗೌತಮ್-ಭೂಮಿಕಾ ಹುಸಿ ಮುನಿಸು ತೋರಿದರೆ, ಇನ್ನೊಂದೆಡೆ ಆಕಾಶ್ ಮತ್ತು ಮಿಂಚು ನಡುವೆ ಮುದ್ದಾದ ಜಗಳ ನಡೆಯುತ್ತದೆ.
ಅಮೃತಧಾರೆಯಲ್ಲಿ (Amruthadhaare) ಗೌತಮ್ ಮತ್ತು ಭೂಮಿಕಾಳನ್ನು ಒಂದು ಮಾಡಲು ಮಲ್ಲಿ, ಆನಂದ್ ಎಲ್ಲಾ ಪ್ರಯತ್ನಿಸುತ್ತಿದ್ದಾರೆ. ಇಬ್ಬರನ್ನೂ ಒಂದೇ ಕಡೆ ಹೋಟೆಲ್ಗೆ ಕರೆದುಕೊಂಡು ಹೋಗುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ.

ಮದುವೆಯ ವಾರ್ಷಿಕೋತ್ಸವದ ನಿಮಿತ್ತ ಹೋಟೆಲ್ಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಆಕಾಶ್ ತಿನ್ನುವ ಪರಿ ನೋಡಿ ಮಿಂಚುಗೆ ವಿಪರೀತ ಕೋಪ ಬಂದಿದೆ. ಎಷ್ಟೆಂದ್ರೂ ಅವಳು ಸಕತ್ ಕ್ಲೀನ್ ಅಲ್ಲವೆ?

ಅಲ್ಲಿ ಹೇಗೆ ಬೇಕೋ ತಿನ್ನುತ್ತಿದ್ದಾನೆ ಆಕಾಶ್. ಇದನ್ನು ನೋಡಿ ಮಿಂಚು ಅಹಸ್ಯ ಪಟ್ಟುಕೊಂಡಿದ್ದಾಳೆ. ಅಷ್ಟರಲ್ಲಿ ಆನಂದ್ ಪತ್ನಿ ಹೋಗಿ ಆಕಾಶ್ಗೆ ಮುದ್ದು ಮಾಡುತ್ತಾಳೆ.

ಇದನ್ನು ನೋಡಿ ಮಿಂಚುಗೆ ವಿಪರೀತ ಕೋಪ ಬರುತ್ತದೆ. ನೀವ್ಯಾಕೆ ಅವನನ್ನು ಮುದ್ದು ಮಾಡಿದ್ರಿ ಎಂದು ಕೇಳುತ್ತಾಳೆ. ಅದಕ್ಕೆ ಆಕೆ ಅವನು ನಿನ್ನ ಹಾಗೆ ಮುದ್ದು ಮುದ್ದು ಇದ್ದಾನಲ್ವಾ ಅದಕ್ಕೇ ಎನ್ನುತ್ತಾಳೆ.

ಅವನೇನು ಮುದ್ದು ಇದ್ದಾನೆ, ಮುದ್ದೆ ಹಾಗೆ ಇದ್ದಾನೆ ಎಂದು ಕೋಪ ಮಾಡಿಕೊಳ್ಳುತ್ತಾಳೆ. ತನಗೆ ಮಿಂಚು ಏನೋ ಹೇಳುತ್ತಿದ್ದಾಳೆ ಎನ್ನುವುದನ್ನು ಅತ್ತ ಕಡೆಯಿಂದಲೇ ನೋಡುವ ತಿಂಡಿ ಪೋತ ಆಕಾಶ್, ನಿನಗೂ ಬೇಕಾ ಎಂದು ಕೇಳುತ್ತಾನೆ.

ಒಟ್ಟಿನಲ್ಲಿ ಅಕ್ಕ-ತಮ್ಮನ ಕ್ಯೂಟ್ ಮುದ್ದು ಮುದ್ದು ಜಗಳ ವೀಕ್ಷಕರ ಮನಸ್ಸನ್ನು ಗೆದ್ದಿದೆ. ಅದೇ ಇನ್ನೊಂದೆಡೆ, ಭೂಮಿಕಾ ಮತ್ತು ಗೌತಮ್ ಕಣ್ಸನ್ನೆಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಹುಸಿ ಮುನಿಸು ತೋರುತ್ತಿದ್ದಾರೆ.

Source link
Amruthadhaare: ತಮ್ಮಂಗೆ ಮುದ್ದು ಮಾಡಿದ್ರೆ ಈ ಅಕ್ಕಂಗೆ ಸಿಕ್ಕಾಪಟ್ಟೆ ಕೋಪ- ಒಂದಾಗೋ ಕಾಲ ಬಂದೇ ಬಿಡ್ತಾ?