ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ತೃತೀಯ, ನಿತ್ಯ ಸೂರ್ಯನಕ್ಷತ್ರ : ಮೃಗಶಿರ, ಯೋಗ : ಪರಿಘ, – ಕರಣ : ೧೦ ಕೌಲವ, – ೬೦ ಕೌಲವ, ೬೦ ಆಂ. 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:10 – 10:37, ಗುಳಿಕ ಕಾಲ 06:17 – 07:43 ಯಮಗಂಡ ಕಾಲ 13:30 – 14:57.
ಮೇಷ ರಾಶಿ: ಸೀಮಿತ ಪರಿಧಿಯನ್ನು ಬಿಟ್ಟು ಯಾರೊಂದಿಗೂ ಏನನ್ನೂ ಹಂಚಿಕೊಳ್ಳಲಾರಿರಿ. ನಿಮಗೆ ಪ್ರತಿಭೆ, ಸಾಮರ್ಥ್ಯಗಳು ಇವೆ ಅನ್ನಿಸದೇ ಹೋಗಬಹುದು. ಇಂದು ಅಂದುಕೊಂಡ ದೇವರ ಕಾರ್ಯವು ನಡೆಯದೇ ಹೋಗಬಹುದು. ಯಾವುದಾದರೂ ಸಮಾಜ ಬಾಹಿರ ಕೃತ್ಯಗಳಲ್ಲಿ ಸಿಕ್ಕಿಕೊಳ್ಳುವ ಸಂಭವವಿರಲಿದೆ. ಸ್ತ್ರೀಯರಿಗೆ ನಾನಾ ರೀತಿಯಿಂದ ಅನುಕೂಲವಾಗುತ್ತದೆ. ವಿವಾಹವಾಗಲಿರುವವರನ್ನು ಅಕಾಸ್ಮಾತ್ ಭೇಟಿಯಾಗುವಿರಿ. ಇಂದಿನ ಕಾರ್ಯಗಳಲ್ಲಿ ಪ್ರಗತಿ ಇರಲಿದೆ ಸಂತೋಷವಾಗುತ್ತದೆ. ಉದ್ಯೋಗದಲ್ಲಿ ಭಡ್ತಿಯ ನಿರೀಕ್ಷೆ ಇರುವುದು. ಸಾದಿಷ್ಟವಾದ ಭೋಜನದಿಂದ ಸಂತೃಪ್ತಿ ಇರಲಿದೆ. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತ ವಸ್ತು. ಆತ್ಮೀಯರ ಭೇಟಿಯಿಂದ ನಿಮಗೆ ಸಮಾಧಾನ ಸಿಗಲಿದೆ. ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಶತ್ರುತ್ವ ಬರಬಹುದು. ಸಂತೋಷದ ಸಮಯವನ್ನು ನೆನಪಿಸಿಕೊಳ್ಳಿ. ನೀವು ಪ್ರಸಿದ್ಧಿಯನ್ನು ಪಡೆಯಲು ಆಸಕ್ತಿ ತೋರಿಸುತ್ತೀರಿ.
ವೃಷಭ ರಾಶಿ: ದೈಹಿಕವಾಗಿ ಕೊಡುವ ಅಥವಾ ಆಗುವ ಹಿಂಸೆಯನ್ನು ಸಹಿಸಲಾರಿರಿ. ವೃತ್ತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ಅನಿರೀಕ್ಷಿತ ಪ್ರಯಾಣದಿಂದ ಆಯಾಸವು ಅಧಿಕವಾದೀತು. ಯಾವುದಕ್ಕೂ ನಿರಾಸೆ ಇಟ್ಟುಕೊಳ್ಳುವುದು ಬೇಡ. ಸಮಯವು ಬೇಕಾಗಬಹುದು. ಅಧಿಕ ಖರ್ಚಿನಿಂದ ಇಂದಿನ ಕಾರ್ಯವನ್ನು ಸಾಧಿಸಿಕೊಳ್ಳಿ. ವಾಸಸ್ಥಳವನ್ನು ಬದಲಿಸಬೇಕು. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳನ್ನು ಹಿಂಸೆ ಕೊಡಬಹುದು. ನೆಮ್ಮದಿ ಕೆಡಿಸುವ ಬಂಧುಗಳಿಂದ ದೂರ ಇರುವುದು ಉತ್ತಮ. ಇಂದಿನ ಅಪ್ರಯೋಜನಕಸರಿ ಓಡಾಟದಿಂದ ನಿಮಗೆ ಆಯಾಸವಾಗುವುದು. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ತೊಂದರೆ ಆಗಬಹುದು. ಬಂದ ಅವಕಾಶವನ್ನು ಬಿಟ್ಟು ಅನಂತರಿಸುವುದರಲ್ಲಿ ಅರ್ಥವಿರದು. ಆರ್ಥಿಕ ತೊಂದರೆಗೆ ನೀವು ಬಂಧುಗಳ ಸಹಾಯವನ್ನು ಪಡೆಯಬಹುದು. ಬಹಳ ದಿನಗಳ ಅನಂತರ ಇಂದು ಸಂಗಾತಿಯು ಸಮಯವನ್ನು ಕೇಳಬಹುದು
ಮಿಥುನ ರಾಶಿ: ಸಂಪರ್ಕ ಸಾಧನಗಳು ಹಾಳಾದ ಕಾರಣ ಮನೆಯಲ್ಲಿ ಆತಂಕ ಸೃಷ್ಟಿಯಾಗಲಿದೆ. ಸಕಾರಾತ್ಮಕ ಅಂಶಗಳನ್ನು ಹೆಚ್ಚು ಸ್ವೀಕರಿಸಿ. ಇಂದು ತಂದೆ ಮತ್ತು ತಾಯಿಯ ಸೇವೆಯನ್ನು ಮಾಡುವ ಅವಕಾಶವು ನಿಮಗೆ ಸಿಗುವುದು. ನಂಬಿಕೆಯು ಭಗ್ನವಾಗಬಹುದು. ಎಲ್ಲರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಸಹಾಯಕವಾಗುವುದು. ಸಹೋದ್ಯೋಗಿಗಳಿಂದ ಕಾರ್ಯಗಳಿಗೆ ವಿಘ್ನವುಂಟಾಗುವುದು. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಿ. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಇಂದು ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ತೆರೆದುಕೊಳ್ಳಬಹುದು. ಪ್ರಯಾಣದಲ್ಲಿ ಅಪಾಯದ ಸ್ಥಿತಿ ತಲುಪುವಿರಿ. ನಿಮ್ಮ ಪ್ರಯತ್ನಕ್ಕೆ ಫಲವು ಇಂದು ಸಿಗಲಿ ಎಂಬ ನಿರೀಕ್ಷೆ ಬೇಡ. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿ ಅವರ ಮನಸ್ಸನ್ನು ನೋಯಿಸುವಿರಿ. ಪಾಲುದಾರಿಕೆಯಲ್ಲಿ ವ್ಯತ್ಯಾಸವನ್ನು ಮಾಡಬೇಕಾದೀತು. ಸುಮ್ಮನೆ ಎಲ್ಲಾದರೂ ಹೋಗಬೇಕು ಎಂದು ಅನ್ನಿಸುವುದು.
ಕರ್ಕಾಟಕ ರಾಶಿ: ದಿನದ ಹಾಗೂ ತಿಂಗಳ ಖರ್ಚನ್ನು ಲೆಕ್ಕಹಾಕುವಿರಿ. ನಿಮಗೆ ಅಧಿಕವಾದಂತೆ ಕಂಡುಬಂದಿದೆ. ಖರೀದಿಸಿದ ವಸ್ತುಗಳನ್ನು ಉಪಭೋಗ ಮಾಡಲಾಗದು. ಇಂದು ನೀವು ಯಾರನ್ನೂ ಲಘುವಾಗಿ ಕಾಣುವುದು ಬೇಡ. ಹಿತಶತ್ರುಗಳ ಕಾರಣದಿಂದ ಅವಕಾಶದಿಂದ ವಂಚಿತರಾಗುವಿರಿ. ವಾಹನ ಸಂಚಾರದಲ್ಲಿ ವ್ಯತ್ಯಯವಾಗುವುದು. ಎಲ್ಲ ರೀತಿಯಿಂದಲೂ ಅನುಕೂಲವಾಗಲಿ ಎಂಬ ಮನೋಭಾವವು ಇರಲಿದೆ. ಇಂದು ಕಿಂಚಿತ್ತಾದರೂ ಪರಹಿತವನ್ನು ಬಯಸಿ. ನಿಮ್ಮ ಅಳಿದುಳಿದ ಶತ್ರುಗಳು ನಾಶವಾಗುವರು. ಏನು ಬೇಕಾದರೂ ಮಾಡುತ್ತೇನೆ ಎಂಬ ಉತ್ಸಾಹ ಇರಲಿದೆ. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಆಸ್ತಿಯ ಗಳಿಕೆಯಲ್ಲಿ ಎಲ್ಲವೂ ಅನಾಯಾಸವಾಗಿ ನಡೆಯುವುದು. ಬಹಳ ದಿನಗಳ ಅನಂತರ ಮನೆಯಲ್ಲಿ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಬರಬಹುದು. ಸಣ್ಣ ವಿಚಾರಕ್ಕೆ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ. ನಿಮ್ಮ ಆರಾಮದ ದಿನಚರಿಯಲ್ಲಿಯೂ ಇಂದು ಕಿರಿಕಿರಿ.
ಸಿಂಹ ರಾಶಿ: ಸವಾಲನ್ನು ಗೆದ್ದು ತೋರಿಸಿದರೆ ಅದನ್ನು ಉಳಿಸಿಕೊಳ್ಳುವುದು ಕಷ್ಟ. ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕೆಟ್ಟ ಕೆಲಸಕ್ಕೆ ಪ್ರೋತ್ಸಾಹ ಕೊಡುವಿರಿ. ನೀವು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹವಿರುವುದು. ಗೆಲುವು ಕಷ್ಟಸಾಧ್ಯವಾದೀತು. ಅನಿರೀಕ್ಷಿತ ಪ್ರಯಾಣವಾದರೂ ಕಾರ್ಯದಲ್ಲಿ ಜಯ ಸಿಕ್ಕೀತು. ಬಹಳ ದಿನಗಳ ಅನಂತರ ಬಂಧುಗಳು ಮನೆಗೆ ಹೋಗುವುದರಿಂದ ಉತ್ತಮ ಆತಿಥ್ಯ ಪ್ರಾಪ್ತವಾಗುವುದು. ನೆರೆಹೊರೆಯವರು ನಿಮ್ಮ ಮನೆಯ ಬಗ್ಗೆ ಆಡಿಕೊಳ್ಳುವರು. ಇಂದು ನಿಮ್ಮ ಪ್ರೀತಿಪಾತ್ರರ ಭೇಟಿಯಾಗಲಿದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರುತ್ತದೆ. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭ ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುದು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಸಿದ್ಧರಿರುವಿರಿ. ತಪ್ಪನ್ನು ನೀವು ಒಪ್ಪಿಕೊಳ್ಳಲಾರಿರಿ. ಸಹೋದರರ ನಡುವೆ ವಾಗ್ವಾದವು ಆಗಬಹುದು.
ಕನ್ಯಾ ರಾಶಿ: ನಿಮ್ಮ ಸಮಯ ಹಾಗೂ ಅನುಕೂಲತೆಯನ್ನು ಇಟ್ಟಕೊಂಡು ಇತರರಿಗೆ ಸಮಯ ಕೊಡಿ. ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ಯಾರಾದರೂ ನೆನಪಿಸುತ್ತಾರೆ. ಮಾನಸಿಕ ಆರೋಗ್ಯವು ಇಂದು ಅನಿರೀಕ್ಷಿತ ಆಗಬಹುದು. ಬಾಂಧವರ ನಡುವೆ ವ್ಯವಹಾರದ ಕಾರಣ ಭಿನ್ನಾಭಿಪ್ರಾಯ ಬರಬಹುದು. ಇಂದಿನ ’ಮನೆಯ ವಾತಾವರಣದಮನದ ನಿಮ್ಮ ಅಧ್ಯಯನಕ್ಕೆ ತೊಡಕಾಗಬಹುದು. ದಾಯಾದಿಗಳು ನಿಮ್ಮ ಮೇಲೆ ಅಪವಾದವನ್ನು ಮಾಡಬಹುದು. ದಾಂಪತ್ಯದ ಒಡಕನ್ನು ದೊಡ್ಡದಾಗಿಸಿಕೊಳ್ಳುವುದು ಬೇಡ. ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ವಿವಾಹದ ವಿಳಂಬದಿಂದ ನಿಮಗೆ ಬೇಸರವಾದೀತು. ನಿಮ್ಮ ತಪ್ಪಿನಿಂದ ಹಿರಿಯ ಕೆಂಗಣ್ಣಿಗೆ ಗುರಿಯಾಗುವಿರಿ. ತಂದೆಯ ಜೊತೆ ನಿಮ್ಮ ಭವಿಷ್ಯದ ಚಿಂತನೆಯನ್ನು ಮಾಡಿದೆ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ಸಾಹವನ್ನು ಕೊಡುವುದು. ನೀವು ಪರಾವಲಂಬನೆಯನ್ನು ಕಡಿಮೆಮಾಡುವಿರಿ.
ತುಲಾ ರಾಶಿ: ನಿಮಗೆ ಬಲವನ್ನು ತುಂಬುವವರು ಯಾರಾದರೂ ಬೇಕಾಗಿದ್ದಾರೆ. ಇಂದು ನಿಮ್ಮ ವಿವಾಹದ ಪ್ರಸ್ತಾಪಗಳು ಬರಬಹುದು. ಇಂದಿನ ಲಾಭವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಸುಮ್ಮನೇ ನಿಮ್ಮಷ್ಟಕ್ಕೆ ಇರಿ. ವಾಹನದ ಕಾರಣ ಕಲಹವಾಗುವುದು. ಕಛೇರಿಯ ಕಾರ್ಯದ ನಿಮಿತ್ತ ಚಾಲನೆಯನ್ನು ಮಾಡಬೇಕಾಗಿದ್ದರೆ ನಿಮಗೆ ಕಷ್ಟವಾಯಿತು. ವಿತಂಡ ವಾದವನ್ನು ಮಾಡಿ ಎಲ್ಲರಿಂದ ದೂರಾಗುವಿರಿ. ಶತ್ರುಗಳು ಮಾನಸಿಕ ಕಿರುಕುಳವನ್ನು ಯಾವ ರೀತಿಯಿಂದಲೂ ಕೊಡಬಹುದು. ನಿಮ್ಮ ಕೆಲಸಕ್ಕೆ ಮಿತಿಯನ್ನು ಇಟ್ಟುಕೊಳ್ಳುವುದು ಉತ್ತಮ. ನಿಮ್ಮ ಮಾತುಗಳನ್ನು ಸಹಿಸುವುದು ಕೆಲವರಿಗೆ ಕಷ್ಟ. ಹಿರಿಯರ ತಿಳಿವಳಿಕೆಯು ಅಪಮಾನದಂತೆ ಕಾಣುತ್ತಿದೆ. ಇಂದು ಮನೆಯಲ್ಲಿ ನಿಮ್ಮ ಸಂಭ್ರಮವನ್ನು ಆಚರಿಸಲು ಆಗದು. ಆಲಸ್ಯದ ಕಾರಣ ನಿಮ್ಮ ಕಾರ್ಯವು ಪೂರ್ಣವಾಗದು. ಸಂಗಾತಿಯ ಮಾತನ್ನು ನೀವು ಗಂಭೀರವಾಗಿ ಪರಿಗಣಿಸುವುದಿಲ್ಲ. ಯಾರಿಂದಲಾದರೂ ಆರ್ಥಿಕ ಬೆಂಬಲವನ್ನು ನಿರೀಕ್ಷಿಸುವಿರಿ.
ವೃಶ್ಚಿಕ ರಾಶಿ: ಶೈಕ್ಷಣಿಕ ಅಂಶಗಳ ಗಮನ ಕಡಿಮೆಯಾಗಿ, ಸಾಮಾಜಿಕ ಕಾರ್ಯಗಳು ಹೆಚ್ಚಾಗುವುದು. ಧಾರ್ಮಿಕ ಆಚರಣೆಯನ್ನು ಸಂಭ್ರಮದಿಂದ ಮಾಡುವಿರಿ. ಇಂದು ನಿಮ್ಮ ಗೌರವಕ್ಕೆ ಯಾರಿಂದಲಾದರೂ ಚ್ಯುತಿಯಾಗಬಹುದು. ಉದ್ಯಮವನ್ನು ಮಾರಾಟಮಾಡುವ ಆಲೋಚನೆ ಮಾಡುವಿರಿ. ಅಕ್ರಮ ವ್ಯವಹಾರಗಳು ಎಲ್ಲರಿಗೂ ಗೊತ್ತಾದೀತು. ಉದ್ಯೋಗದಲ್ಲಿ ಪ್ರಗತಿ ಇಲ್ಲ ಎಂದು ಬೇಸರಗೊಂಡಿದ್ದರೆ ನಿಮಗೆ ಅಲ್ಪ ನೆಮ್ಮದಿಯ ಸಂಗತಿಯೂ ಇರಲಿದೆ. ನೌಕರರ ಕಾರ್ಯವು ನಿಮಗೆ ಸಂತೋಷವನ್ನು ತರದು. ಪ್ರಶಸ್ತಿಗಳ ಬಗ್ಗೆ ಹೆಚ್ಚಿನ ಗಮನ ಹಾಕಲಾರಿರಿ. ಸಂಪೂರ್ಣವಾದ ಮನಸ್ಸಿನಿಂದ ಕಾರ್ಯವನ್ನು ಮಾಡಲಾಗದು. ವ್ಯವಹಾರವು ಕಾನೂನಾತ್ಮಕ ತೊಡಕಿನಿಂದ ನಿಲ್ಲಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಕಣ್ಣಿನ ತೊಂದರೆಯಾಗಬಹುದು. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಅಸಮಾಧಾನಗೊಳ್ಳುತ್ತಾರೆ. ನಿಮಗೆ ಗೊತ್ತಿಲ್ಲದೇ ಇರುವ ವಿಚಾರಗಳನ್ನು ಕೇಳಿ ಪಡೆಯಿರಿ.
ಧನು ರಾಶಿ: ಪ್ರತಿಭೆಯ ಅನಾವರಣಕ್ಕೆ ಮಕ್ಕಳಿಗೆ ಸಹಾಯ ಮಾಡಿ. ಚರಾಸ್ತಿಯ ಹಂಚಿಕೆಯನ್ನು ನೀವು ಪಕ್ಷಪಾತದಿಂದ ಮಾಡುತ್ತೀರಿ. ನೀವು ಪ್ರಯಾಣವನ್ನು ಅನಿವಾರ್ಯ ಕಾರಣಕ್ಕೆ ಮಾಡಬೇಕಾಗಬಹುದು. ಪ್ರೇಮವು ಸಾಕೆನಿಸಬಹುದು. ಸುಮ್ಮನೆ ಕುಳಿತುಕೊಳ್ಳುವುದು ಇಷ್ಟವಾಗದು. ಸಂತಾನ ಯೋಗದಿಂದ ನಿಮಗೆ ಖುಷಿ ಸಿಗಲಿದೆ. ಎಂದೋ ಮಾಡಿದ ಕಾರ್ಯವು ಇಂದು ನಿಮ್ಮನ್ನು ಬಂದು ಸೇರಬಹುದು. ಆಸ್ತಿಯ ಖರೀದಿಗೆ ಬೇಕಾದ ಹಣವನ್ನು ನೀವು ಅವರಿಂದ ಸಾಲವಾಗಿ ಪಡೆಯಿರಿ. ನಿಮಗೆ ವೈಭವೀಕರಿಸುವ ಯಾವ ಅಂಶಗಳೂ ಇಷ್ಟವಾಗದು. ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ನಾನಾ ಚಿಂತೆಗಳು ಹುಟ್ಟಬಹುದು. ಕೆಲವು ಸನ್ನಿವೇಶವನ್ನು ನೀವು ನಗಣ್ಯ ಮಾಡುವುದು ಉತ್ತಮ. ಸಂಗಾತಿಯ ಸಲಹೆಯನ್ನೂ ಪಡೆದು ಉತ್ತಮ ನಿರ್ಧಾರಕ್ಕೆ ಬನ್ನಿ. ಮಹಿಳೆಯರ ಉದ್ಯಮದಲ್ಲಿ ಆತಂಕದ ವಾತಾವರಣ ಕಾಣಿಸುವುದು. ಉದ್ಯೋಗದ ಸ್ಥಳವು ಬೆಲೆಯು ಕಡಿಮೆ ಆದಂತೆ ತೋರುವುದು. ಕ್ಷಣಿಕ ಸುಖಕ್ಕಾಗಿ ಸಂಪತ್ತನ್ನು ಅಧಿಕವಾಗಿ ತ್ಯಾಗ ಮಾಡಿರಿ.
ಮಕರ ರಾಶಿ: ವೈಯಕ್ತಿಕ ಕಾರ್ಯಗಳನ್ನು ಇಂದು ಸಹ ಮಾಡಲಾಗದು. ನಿಮ್ಮನ್ನು ಆಪ್ತರು ಬೇರೆ ಕಡೆಗೆ ಕರೆದೊಯ್ಯುತ್ತಾರೆ. ಬೇಕಾದ ವಸ್ತುಗಳನ್ನು ಅಗ್ಗವಾಗಿ ಖರೀದಿಸಲು ಪ್ರಯತ್ನಿಸಿ. ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಸಹಿಸಲಾಗದ ದೇಹಪೀಡೆಯಿಂದ ಒದ್ದಾಡುವಿರಿ. ಕೆಲವು ಅಕಾರಣವಾಗಿ ಬಿಟ್ಟುಹೋಗಬಹುದು. ಅಲ್ಪ ಪ್ರಗತಿಯೂ ನಿಮಗೆ ಸಂತೋಷವನ್ನು ಕೊಡುವುದು. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಅಭ್ಯಾಸವನ್ನು ನಿಲ್ಲಿಸದೇ ನಿರಂತರವಾಗಿಸುವಿರಿ. ಸಮಯದ ಹೊಂದಾಣಿಕೆ ಇದ್ದರೆ ಮಾತ್ರ ಸಾಧನೆ ಸಾಧ್ಯ. ಎಲ್ಲರಿಂದ ದೂರವಾಗಲು ಬಯಸುವಿರಿ. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನೀವು ಮನೆಯನ್ನು ಖರೀದಿಸುವ ಅಲೋಚನೆಯಲ್ಲಿ ಇರುವಿರಿ. ಉದ್ಯೋಗದಲ್ಲಿ ದೂರದೃಷ್ಟಿ ಇರಲಿ. ಕೃಷಿ ಚಟುವಟಿಕೆಯಲ್ಲಿ ಆಸಕ್ತಿಯು ಅಧಿಕವಾಗಿದೆ. ಇಂದು ನಿಮ್ಮ ಸಹಾಯದಿಂದ ಕುಟುಂಬವು ಸಂತೋಷವಾಗುತ್ತದೆ.
ಕುಂಭ ರಾಶಿ: ಚಿಕ್ಕದಾದರೂ ತೊಂದರೆ ಇಲ್ಲ, ಬಾಳಿಕೆ ಬರುವಂತಹದ್ದನ್ನು ಖರೀದಿಸಿ. ಹಿರಿಯರಾಗಿ ಉತ್ತಮ ಮಾರ್ಗದರ್ಶನ ಮಾಡಬೇಕಾಗುವುದು. ಇಂದು ಅಧಿಕ ಸಂಪತ್ತಿನ ವ್ಯಯ ಆಗುವುದು. ಸಾಮರಸ್ಯದ ಅಭಾವದಿಂದ ಮಾನಸಿಕ ಸ್ಥಿತಿಯು ಅಸಮತೋಲನ ಸ್ಥಿತಿ. ನಿರೀಕ್ಷಿತ ಲಾಭವು ಆಗದಿದ್ದರೂ ನೆಮ್ಮದಿಗೆ ಕೊರತೆ ಕಾಣದು. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸಿದರು. ಚಂಚಲವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಮಾದರಿಯಾದೀತು. ನಿಮ್ಮ ಮಾತಿನಿಂದ ಇತರರನ್ನು ಘಾಸಿ ಮಾಡಿರಿ. ವಿದೇಶ ಪ್ರಯಾಣದ ತಯಾರಿಯಲ್ಲಿ ಇರುವಿರಿ. ಕಿವಿಯ ನೋವಿನಿಂದ ಸಂಕಟವಾಗುವುದು. ಅಲ್ಪ ಸಮಯವಾದರೂ ವ್ಯವಹಾರಕ್ಕೆ ಒತ್ತುನೀಡುವಿರಿ. ಸ್ನೇಹಿತರ ಒತ್ತಾಯದ ಪ್ರಯಾಣ ಮಾಡುವಿರಿ. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಒತ್ತಡ ಬರಬಹುದು.
ಮೀನ ರಾಶಿ: ಇಂದು ನಿಮಗೆ ಅಧಿಕ ವಿಶ್ರಾಂತಿಯ ಅಪೇಕ್ಷೆ ಇರುವುದು. ನಿಮ್ಮ ಮೂಲ ಧನವನ್ನು ತೆಗೆಯಬಹುದು. ಇಂದು ಮನಸ್ಸಿನ ಕಿರಿಕಿರಿಯನ್ನು ಅನುಭವಿಸದೇ ಅನ್ಯ ಮಾರ್ಗವಿರದು. ಅನಿರೀಕ್ಷಿತ ತಿರುವುಗಳು ನಿಮ್ಮನ್ನು ಉದ್ವಿಗ್ನಗೊಳಿಸಬಹುದು. ಕೆಲಸದ ಕೆಲಸವು ನಿಮಗೆ ಸಮಾಧಾನ ಕೊಡದು. ನಿದ್ರೆಯು ಸರಿಯಾಗಿ ಆಗದೇ ಕಷ್ಟವಾಯಿತು. ವಿಶ್ವಾಸಾರ್ಹ ವ್ಯಕ್ತಿಗಳಿಗೆ ಮಾತ್ರ ಸಾಲವನ್ನು ಕೊಡುವಿರಿ. ಉದ್ಯೋಗದಲ್ಲಿ ಸ್ಥಿರತೆ ಕಾಣದ ಕಾರಣ ಬದಲಿಸಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭ ಬರಬಹುದು. ಯಾರ ಕಾರ್ಯದಲ್ಲಿಯೂ ಹಸ್ತಕ್ಷೇಪ ಬೇಡ. ನಿಮ್ಮ ಪಾಲಿಗೆ ಬಂದಿದ್ದನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ. ಸಂಬಂಧಗಳನ್ನು ಚೆನ್ನಾಗಿ ಇಟ್ಟಕೊಳ್ಳಲು ಇಷ್ಟಪಡುವಿರಿ. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುತ್ತಾರೆ. ಕೆಲವು ಸಂಬಂಧಗಳು ಹತ್ತಿರವಾಗಬಹುದು.
ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)