2025ರ ನವೆಂಬರ್ 8 ರ ಶನಿವಾರವಾಗಿರುವ ಇಂದು ಕನಕದಾಸರ ಜಯಂತಿ ಮತ್ತು ಸಂಕಷ್ಟ ಚತುರ್ಥಿ. ಸಂಕಷ್ಟ ಚತುರ್ಥಿಯಂದು ಉಪವಾಸ ಮಾಡಿ ಗಣಪತಿಯನ್ನು ಸ್ತುತಿಸುವ ಮೂಲಕ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಇಂದು ಬೆಳಗ್ಗೆ 9.7 ರಿಂದ 10.34 ರ ವರೆಗೆ ರಾಹುಕಾಲವಿರಲಿದೆ. ಜೊತೆಗೆ, 1.30 ರಿಂದ 2.57 ರ ತನಕ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭ ಕಾಲ. ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಕೃಷ್ಣ ಪಕ್ಷ, ತದಿಗೆ, ಮೃಗಶಿರ ನಕ್ಷತ್ರ, ಶಿವಯೋಗ ಮತ್ತು ಭದ್ರಕರಣ ಇರುವ ಈ ದಿನದ ದ್ವಾದಶ ರಾಶಿಗಳ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಹೊಂದಿರುವ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.