IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಬಿಗ್ಗೆಸ್ಟ್ ಡೀಲ್ ಕುದುರಿದೆ. ಈ ಡೀಲ್ ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ (ಸಂಜು ಸ್ಯಾಮ್ಸನ್) ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಪಾಲಾಗಿದ್ದಾರೆ ಎಂದು ವರದಿಯಾಗಿದೆ.
ಐಪಿಎಲ್ ಮೂಲಗಳ ಮಾಹಿತಿ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಜೊತೆ ಸ್ವಾಪ್ ಡೀಲ್ ಮಾಡಿಕೊಂಡಿದ್ದು, ಅದರಂತೆ ಹರಾಜಿಗೂ ಮುನ್ನ ಸ್ಯಾಮ್ಸನ್ ಡೆಲ್ಲಿ ಪಡೆಗೆ ಎಂಟ್ರಿ ಕೊಡಲಿದ್ದಾರೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಟ್ರಿಸ್ಟನ್ ಸ್ಟಬ್ಸ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೆಪರ್ಡೆಯಾಗಲಿದ್ದಾರೆ.
ಅದರಂತೆ ಸಂಜು ಸ್ಯಾಮ್ಸನ್ ಇನ್ನೇನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಾಲಾಗಲಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಸಂಪರ್ಕಿಸಿದೆ. ಅದು ಕೂಡ ಸ್ಟಾರ್ ಆಟಗಾರನ ಸ್ವಾಪ್ ಡೀಲ್ನ ಆಫರ್ ಎಂಬುದು ವಿಶೇಷ.
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಬರಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಸಿಎಸ್ಕೆ ಫ್ರಾಂಚೈಸಿಯು ಅವರ ಖರೀದಿಗೆ ಯೋಜನೆ ರೂಪಿಸಿತ್ತು. ಅದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರಾಜಸ್ಥಾನ್ ರಾಯಲ್ಸ್ ಜೊತೆ ಕ್ಯಾಶ್ ಡೀಲ್ ಕುದಿರಿಸಲು ಯತ್ನಿಸಿದ್ದರು. ಆದರೆ ಆರ್ ಆರ್ ಫ್ರಾಂಚೈಸಿಯು ಸ್ವಾಪ್ ಡೀಲ್ ಗೆ ಹೆಚ್ಚಿನ ಆಸಕ್ತಿ ತೋರಿದ್ದರು. ಜೊತೆಗೆ ರವೀಂದ್ರ ಜಡೇಜಾ ಅವರಿಗೆ ನೀಡಿದರೆ ಸಂಜು ಸ್ಯಾಮ್ಸನ್ ಅವರನ್ನು ಬಿಟ್ಟು ಕೊಡುವುದಾಗಿ ತಿಳಿಸಿದ್ದರು.
ಆದರೆ ಜಡೇಜಾ ಅವರಿಗೆ ನೀಡಲು ಸಿಎಸ್ಕೆ ಮುಂದಾಗಿರಲಿಲ್ಲ. ಇತ್ತ ಉಳಿದ ಆಟಗಾರರೊಂದಿಗೆ ಸ್ವಾಪ್ ಡೀಲ್ಗೆ ಆರ್ ಆರ್ ಕೂಡ ಒಪ್ಪಲಿಲ್ಲ. ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಹರಾಜಿನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು.
ಆದರೆ ಸಿಎಸ್ಕೆ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಜೊತೆ ಸ್ವಾಪ್ ಡೀಲ್ಗೆ ಕುದುರೆಸಿತ್ತು. ಅದರಂತೆ ಸೌತ್ ಆಫ್ರಿಕಾದ ಸ್ಫೋಟಕ ದಾಂಡಿಗ ಟ್ರಿಸ್ಟನ್ ಸ್ಟಬ್ಸ್ ಅನ್ನು ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸಂಜು ಸ್ಯಾಮ್ಸನ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ.
ಆದರೀಗ ಸ್ಟಾರ್ ಆಟಗಾರರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಯೋಜನೆ ರೂಪಿಸಿದೆ. ಈ ಯೋಜನೆಯೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕ ಮನೋಜ್ ಬಡಾಳೆ ಅವರೊಂದಿಗೆ ಮಾತುಕತೆಯನ್ನು ಸಹ ಎಂದು ಕ್ರಿಕ್ಬಝ್ ವರದಿ ಮಾಡಿದೆ.
ಜೊತೆಗೆ ಸಂಜು ಸ್ಯಾಮ್ಸನ್ ಅವರೊಂದಿಗೆ ಸ್ವಾಪ್ ಡೀಲ್ ಮಾಡಿಕೊಳ್ಳಲು ಬಯಸಿರುವ ಆಟಗಾರನಿಗೆ ಸಿಎಸ್ಕೆ ಸಂದೇಶ ಕಳಿಸಿದ್ದು, ಆತನ ಒಪ್ಪಿಗೆಗಾಗಿ ಕಾಯುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಯಶಸ್ವಿಯಾದರೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಕೈ ಬಿಟ್ಟು ಸಂಜು ಸ್ಯಾಮ್ಸನ್ ಅವರ ಬೆಲೆಯ ಸೂಪರ್ ಕಿಂಗ್ಸ್ಗೆ ಮಾರಾಟ ಮಾಡಬಹುದು. ಹೀಗಾಗಿ ಅಂತಿಮವಾಗಿ ಸ್ಯಾಮ್ಸನ್ ಯಾವ ತಂಡವು ಪಾಲಾಗಲಿದೆ ಕಾದು ನೋಡಬೇಕಾಗಿದೆ.







