RCB ಖರೀದಿಗೆ ಮುಂದಾದ ಕನ್ನಡಿಗರು..!

RCB ಖರೀದಿಗೆ ಮುಂದಾದ ಕನ್ನಡಿಗರು..!


ಇಂಡಿಯನ್ ಪ್ರಿಮಿಯರ್ ಕೂಡ ಸೀಸನ್-19 ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಯಾರ ಪಾಲಾಗಲಿದೆ? ಈ ಪ್ರಶ್ನೆಗೆ ಸದ್ಯಕ್ಕಂತು ಉತ್ತರವಿಲ್ಲ. ಏಕೆಂದರೆ ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿ ಆಸಕ್ತಿದಾರರ ಪಟ್ಟಿ ಬೆಳೆಯುತ್ತಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಕರ್ನಾಟಕದ ಉದ್ಯಮಿಗಳಾದ ನಿಖಿಲ್ ಕಾಮತ್ ಹಾಗೂ ರಂಜನ್ ಪೈ.

ಝೆರೋಧಾ ಕಂಪನಿಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಯ (MEMG) ಅಧ್ಯಕ್ಷ ರಂಜನ್ ಪೈ ಜೊತೆಗೂಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕರ್ನಾಟಕದ ಉದ್ಯಮಿಗಳಾದ ನಿಖಲ್ ಕಾಮತ್ ಮತ್ತು ರಂಜನ್ ಪೈ ಇಬ್ಬರೂ ಬೆಂಗಳೂರು ಫ್ರಾಂಚೈಸಿಗಾಗಿ ಬಿಡ್ ಮಾಡಲು ಆಸಕ್ತಿ ವಹಿಸಿದ್ದಾರೆ. ಈ ಮೂಲಕ ಆರ್ಸಿಬಿ ಫ್ರಾಂಚೈಸಿಯನ್ನು ಕರ್ನಾಟಕದಲ್ಲೇ ಉಳಿಸಲು ಪ್ಲ್ಯಾನ್ ರೂಪಿಸಿದ್ದಾರೆ.

ಅತ್ತ ನಿಖಿಲ್ ಕಾಮತ್ ಅವರ ಆಪ್ತರಲ್ಲಿ ಒಬ್ಬರೆನಿಸಿಕೊಂಡಿರುವ ಆಧಾರ್ ಪೂನವಾಲ ಕೂಡ ಆರ್ಸಿಬಿ ಫ್ರಾಂಚೈಸಿಗಾಗಿ ಬಿಡ್ ಮಾಡಲಿದ್ದಾರೆ. ಹೀಗಾಗಿ ನಿಖಿಲ್-ರಂಜನ್ ಪೈ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಐಒ ಜೊತೆಗೂಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಗೆ ಮುಂದಾಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗಿದೆ.

ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹಿತವಾದ ಪಾರ್ಥ್ ಜಿಂದಾಲ್ ಕೂಡ ಆರ್ಸಿಬಿ ಮೇಲೆ ಕಣ್ಣಿಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಾಗಿ ಅವರ ಜೆಎಸ್ ಡಬ್ಲ್ಯೂ ಗ್ರೂಪ್ ಬಿಡ್ ಮಾಡಲಿದೆ ಎಂದು ತಿಳಿದು ಬಂದಿದೆ.

ಇನ್ನೊಂದೆಡೆ ಅದಾನಿ ಗ್ರೂಪ್ ಕೂಡ ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿಸಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಎಂಟ್ರಿ ಕೊಡಲು ಪ್ಲ್ಯಾನ್ ರೂಪಿಸುತ್ತಿದೆ. ಹೀಗಾಗಿ ಅದಾನಿ ಗ್ರೂಪ್ ಕಡೆಯಿಂದ ಬಿಡ್ಡಿಂಗ್ ನಲ್ಲಿ ಪೈಪೋಟಿ ಎದುರಾಗಲಿದೆ.

ಈ ಉದ್ಯಮಿಗಳಲ್ಲದೆ ದೇವಯಾನಿ ಇಂಟರ್‌ನ್ಯಾಶನಲ್ ಗ್ರೂಪ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದೆ. ಅದೇ ಅಮೆರಿಕದ ಪ್ರೈವೆಟ್ ಇನ್ ವೆಸ್ಟ್ಮೆಂಟ್ ಕಂಪನಿಯೊಂದು ಕೂಡ CB ಫ್ರಾಂಚೈಸಿ ಖರೀದಿಗಾಗಿ ಡಿಯಾಜಿಯೊ ಕಂಪನಿಯೊಂದಿಗೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 5 ಕಟ್ಟಡಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವೆಸ್ಟ್ ಇಂಡೀಸ್

ಅಂದರೆ ದಿನ ಕಳೆದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಲು ಬಿಲಿಯನೇರ್‌ಗಳು ಮುಂದೆ ಬರುತ್ತಿವೆ. ಹೀಗಾಗಿ ಆರ್ಸಿಬಿ ಫ್ರಾಂಚೈಸಿಯ ಖರೀದಿಗೆ ಭರ್ಜರಿ ಪೈಪೋಟಿಯಂತು ಬರಲಿದೆ. ಈ ಪೈಪೋಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾರ ಪಾಲಾಗಲಿದೆ ಎಂಬುದಕ್ಕೆ ಕಾದು ನೋಡಬೇಕಾಗಿದೆ.

RCB ಫ್ರಾಂಚೈಸಿ ಖರೀದಿಗೆ ಆಸಕ್ತಿ ಹೊಂದಿರುವವರು:

  • ಜೆಎಸ್ ಡಬ್ಲ್ಯೂ ಗ್ರೂಪ್ (ಪಾರ್ಥ್ ಜಿಂದಾಲ್)
  • ಅದಾನಿ ಗ್ರೂಪ್ (ಗೌತಮ್ ಅದಾನಿ)
  • ಪೂನಾವಾಲ ಗುಂಪು (ಆದಾರ್ ಪೂನಾವಾಲ)
  • ನಿಖಿಲ್ ಕಾಮತ್ (ಝೆರೋಧಾ ಕಂಪನಿ)
  • ರಂಜನ್ ಪೈ (ಮಣಿಪಾಲ್ ಗ್ರೂಪ್)
  • ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ (ರವಿಕಾಂತ್ ಜೈಪುರಿಯಾ)
  • ಅಮೆರಿಕದ ಖಾಸಗಿ ಇನ್ವೆಸ್ಟ್ಮೆಂಟ್ ಕಂಪನಿ

ರಂದು ಪ್ರಕಟಿಸಲಾಗಿದೆ – 10:08 am, ಶನಿ, 8 ನವೆಂಬರ್ 25



Source link

Leave a Reply

Your email address will not be published. Required fields are marked *