Headlines

ಒಂದೇ ದಿನ ಎರಡು ದೊಡ್ಡ ಸುದ್ದಿ ಕೊಟ್ಟ ಭವ್ಯಾ ಗೌಡ; ಕಾರು ಖರೀದಿ, ಉದ್ಯಮ ಶುರು

ಒಂದೇ ದಿನ ಎರಡು ದೊಡ್ಡ ಸುದ್ದಿ ಕೊಟ್ಟ ಭವ್ಯಾ ಗೌಡ; ಕಾರು ಖರೀದಿ, ಉದ್ಯಮ ಶುರು


ಭವ್ಯಾ ಗೌಡ ಅವರು ‘ಗೀತಾ’ ಧಾರಾವಾಹಿ ಮಾಡಿ ಜನಪ್ರಿಯತೆ ಪಡೆದವರು. ಆ ಬಳಿಕ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹೆಚ್ಚು ಜನಪ್ರಿಯತೆ ಪಡೆದರು. ಈಗ ಅವರು ಜೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ನಿಧಿ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಈಗ ಅವರು ಒಂದೇ ದಿನ ಎರಡು ಸಿಹಿ ಸುದ್ದಿ ತಿಳಿಸಿರುವುದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.

ಭವ್ಯಾ ಗೌಡ ಅವರ ಅಭಿಮಾನಿ ಬಳಗ ದೊಡ್ಡದಿದೆ. ಅವರು ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ನಿಧಿ ಆಗಿ ಅವರು ಎಲ್ಲರ ಗಮನ ಸೆಳೆಯುತ್ತಾ ಇದ್ದಾರೆ. ಧಾರಾವಾಹಿ ಒಳ್ಳೆಯ ಟಿಆರ್ ಪಿ ಪಡೆದುಕೊಳ್ಳುತ್ತಿದೆ. ಭವ್ಯಾ ಗೌಡ ಅವರು ಜನಪ್ರಿಯತೆ ಜೊತೆಗೆ ಒಂದಷ್ಟು ಹಣ ಕೂಡ ಮಾಡಿಕೊಂಡಿದ್ದಾರೆ. ಹೀಗಾಗಿ, ಭವ್ಯಾ ಗೌಡ ಅವರು ಒಂದಷ್ಟು ಖುಷಿ ಹಂಚಿಕೊಂಡಿದ್ದಾರೆ. ಹೊಸ ಕಾರು ಖರೀದಿ ಜೊತೆಗೆ ಹೊಸ ಉದ್ಯಮ ಆರಂಭಿಸಿದ್ದಾರೆ.

ಹೊಸ ಕಾರು

ಭವ್ಯಾ ಗೌಡ ಅವರಿಗೆ ಮೊದಲಿನಿಂದಲೂ ಒಂದು ಹೊಸ ಕಾರು ಖರೀದಿ ಮಾಡಬೇಕು ಎಂಬ ಆಸೆ ಇತ್ತು. ಅದೇ ರೀತಿ ಅವರು ಹೊಸ ಕಾರನ್ನು ಖರೀದಿಸಿದ್ದಾರೆ. ಈ ವಿಡಿಯೋನ ಅವರು ಹಂಚಿಕೊಂಡಿದ್ದಾರೆ. ಇದು ಗಮನ ಸೆಳೆದಿದೆ. ಸ್ಕೋಡಾ ಕಾರನ್ನು ಅವರು ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬದವರು ಕೂಡ ಜೊತೆಯಲ್ಲಿ ಇಬ್ಬರು. ಎಲ್ಲರಿಗೂ ಶುಭಾಶಯ ತಿಳಿಸುತ್ತಿದ್ದಾರೆ.

ಹೊಸ ಉದ್ಯಮ

‘ನಾವು ಒಂದು ಬಿಸ್ನೆಸ್ ಮಾಡಲು ಶುರುವಾಗಿದೆ. ನಮಗೇನು ಗೊತ್ತಿದೆ ಎಂಬುದುರ ಮೇಲೆ ಉದ್ಯಮ ಆರಂಭವಾಗಿದೆ. ಹೊಸ ಉದ್ಯಮಕ್ಕೆ ನಿಮ್ಮ ಬೆಂಬಲ ನೀಡಿ. ಎಲ್ಲರೂ ಮಾಡ್ತಿರೋದು ಬೇಡ, ಹೊಸದಾಗಿ ಮಾಡೋಣ ಎಂಬುದಿತ್ತು’ ಆಹಾರ ಭವ್ಯಾ ಹಾಗೂ ಅವರ ಸಹೋದರಿ ದಿವ್ಯಾ.

ಇದನ್ನೂ ಓದಿ: ರುಕ್ಮಿಣಿ ಕೈಯಿಂದ ‘ಜನಪ್ರಿಯ ನಟಿ’ ಅವಾರ್ಡ್ ಪಡೆದ ‘ಕರ್ಣ’ ನಟಿ ಭವ್ಯಾ ಗೌಡ

‘ಹೌಸ್ ಆಫ್ ಫ್ವವರ್ಸ್’ ಎಂಬುದು ಅವರ ಬಿಸ್ನೆಸ್ ಹೆಸರು. ಇದು ಹೂವಿನ ಬೊಕೆ ಬಿಸ್ನೆಸ್ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರ ಕಡೆಯಿಂದ ಮತ್ತಷ್ಟು ಸ್ಪಷ್ಟನೆ ಸಿಗಬೇಕಿದೆ. ಈ ವಿಚಾರ ಕೇಳಿ ಫ್ಯಾನ್ಸ್ ತುಂಬಾ ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.





Source link

Leave a Reply

Your email address will not be published. Required fields are marked *