ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ಬಂದ ತಮಿಳು ಚಿತ್ರರಂಗ

ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ಬಂದ ತಮಿಳು ಚಿತ್ರರಂಗ


ಸಿನಿಮಾ (ಸಿನಿಮಾ) ನಟಿಯರು ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ನಿಂದನೆ, ಟೀಕೆ, ಹಿಂಸೆ, ಬಾಡಿ ಶೇಮಿಂಗ್ ಅನುಭವಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ನೇರವಾಗಿಯೂ ಇಂಥಹಾ ಮುಜುಗರದ ಸನ್ನಿವೇಶಗಳು ಎದುರಾಗುವುದುಂಟು. ಇತ್ತೀಚೆಗಂತೂ ನಕಲಿ ಪತ್ರಕರ್ತರು, ಕೆಲ ಯೂಟ್ಯೂಬ್ ‘ಪತ್ರಕರ್ತರ’ ಹಾವಳಿ ಹೆಚ್ಚಾಗಿ ನಟಿಯರು ಹೆಚ್ಚಿನ ಮುಜುಗರ ಅನುಭವಿಸಿದ್ದಾರೆ. ಇದೀಗ ತಮಿಳಿನ ಜನಪ್ರಿಯ ನಟಿ ’96’ ಸಿನಿಮಾದಲ್ಲಿ ನಟಿಸಿದ್ದ ಗೌರಿ ಕಿಶನ್ ಅವರು ಇಂಥಹದ್ದೇ ಒಂದು ಮುಜುಗರದ ಸನ್ನಿವೇಶದಲ್ಲಿ ಸಿಲುಕಿದ್ದರು. ಆದರೆ ಧೈರ್ಯ ಪ್ರದರ್ಶಿಸಿ, ಬಾಡಿ ಶೇಮಿಂಗ್ ಮಾಡಲು ಮುಂದಾದವನಿಗೆ ಚಳಿ ಬಿಡಿಸಿದರು. ಇದೀಗ ನಟಿ ಗೌರಿಯ ಬೆಂಬಲಕ್ಕೆ ತಮಿಳು ಚಿತ್ರರಂಗ ನಿಂತಿದೆ.

ಗೌರಿ ಕಿಶನ್ ನಟನೆಯ ಹೊಸ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ‘ಪತ್ರಕರ್ತ’ನೊಬ್ಬ ‘ನಿಮ್ಮ ದೇಹದ ತೂಕ ಎಷ್ಟು?’ ಎಂದು ಕೇಳಿದ್ದಾನೆ. ಇದರಿಂದ ಸಿಟ್ಟಾದ ನಟಿ ಗೌರಿ ಕಿಶನ್, ‘ನನ್ನ ತೂಕ ಕಟ್ಟಿಕೊಂಡು ನಿಮಗೇನಾಗಬೇಕು?, ನೀವು ಸಿನಿಮಾ ಬಗ್ಗೆ ಪ್ರಶ್ನೆ ಕೇಳಿ’. ನಟಿಯ ಪ್ರತ್ಯುತ್ತರದಿಂದ ಸಿಟ್ಟ ಆ ಪತ್ರಕರ್ತ ಬಳಿಕ ನಟಿಗೆ ಮಾತನಾಡಲು ಸಹ ಅವಕಾಶ ಕೊಡದಂತೆ ಒಂದೇ ಸಮನೆ ಜೋರು ಧ್ವನಿಯಲ್ಲಿ ಮಾತನಾಡಿ ನಟಿಯನ್ನು ಹೆದರಿಸುವ ಪ್ರಯತ್ನ ಮಾಡಿದ್ದಾನೆ, ಆದರೆ ಅದಕ್ಕೆಲ್ಲ ಜಗ್ಗದ ನಟಿ ಸರಿಯಾಗಿ ತಿರುಗೇಟು ನೀಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ತಮಿಳು ಚಿತ್ರರಂಗದ ನಟಿ ಗೌರಿ ಬೆಂಬಲಕ್ಕೆ ಧಾವಿಸಿದ್ದು, ಖ್ಯಾತ ನಿರ್ದೇಶಕ ಪಾ ರಂಜಿತ್, ಚಿನ್ಮಯಿ ಶ್ರೀಪಾದ್, ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್, ಹಿರಿಯ ನಟಿ, ರಾಜಕಾರಣಿ ಖುಷ್ಬು ಸುಂದರ್ ಅವರು ಇನ್ನೂ ಬೆಂಬಲ ವ್ಯಕ್ತಪಡಿಸಿದ್ದು, ಪತ್ರಕರ್ತರ ಉದ್ಧಟತನವನ್ನು ಖಂಡಿಸಿರುವ ನಟಿ ಗೌರಿ ಅವರ ಧೈರ್ಯವನ್ನು ಕೊಂಡಾಡಿದ್ದಾರೆ. ಜೊತೆಗೆ, ಗೌರಿಯ ಜೊತೆಗೆ ತಾವು ನಿಲ್ಲುವುದಾಗಿ ಭರವಸೆ.

ಇದನ್ನೂ ಓದಿ:ತೂಕ ಕೇಳಿದ ವ್ಯಕ್ತಿಗೆ ಚಳಿ ಬಿಡಿಸಿದ ನಟಿ ಗೌರಿ ಕಿಶನ್: ಯಾರೀಕೆ?

ಘಟನೆಯ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ನಟಿ ಗೌರಿ ಕಿಶನ್, ‘ಒಬ್ಬ ನಟಿ, ಸಾರ್ವಜನಿಕ ಜೀವನದಲ್ಲಿ ಇರುವ ಕಾರಣಕ್ಕೆ ನನ್ನನ್ನು ಕೇಳುವ ಪ್ರಶ್ನೆ ಇದೆ. ಆದರೆ ಆ ಪ್ರಶ್ನೆಗಳು ನನ್ನ ವೃತ್ತಿಯ ಬಗ್ಗೆ ಇರಲಿ ಎಂಬುದು ನನ್ನ ಆಶಯ’ ಎಂದಿರುವ ನಟಿ, ‘ಬಾಡಿ ಶೇಮಿಂಗ್ ಅನ್ನು ಸಾಮಾನ್ಯೀಕರಣ ಮಾಡಲಾಗುತ್ತಿದೆ. ಈ ನನ್ನ ಹೇಳಿಕೆ ಯಾವದೋ ಒಬ್ಬ ವ್ಯಕ್ತಿಯ ಕುರಿತಾಗಿ ಅಲ್ಲ ಬದಲಾಗಿ ಬಾಡಿ ಶೇಮಿಂಗ್ ಸಾಮಾನ್ಯೀಕರಣ ಮಾಡಲು ಯತ್ನಿಸುತ್ತಿರುವ ದೃಶ್ಯಗಳ ಬಗ್ಗೆ.

ಮುಂದುವರೆದು, ತಮ್ಮ ನಿಲವಿಗೆ ಬೆಂಬಲ ವ್ಯಕ್ತಪಡಿಸಿರುವ ಚೆನ್ನೈ ಪ್ರೆಸ್ ಕ್ಲಬ್, ಮಲಯಾಳಂ ಚಿತ್ರರಂಗದ ಕಲಾವಿದರ ಸಂಘ, ದಕ್ಷಿಣ ಭಾರತದ ಕಲಾವಿದರ ಸಂಘ ಮುಂತಾದವುಗಳಿಗೆ ಅವರು ಧನ್ಯವಾದ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *