Headlines

Horoscope Today 10 November: ಇಂದು ಈ ರಾಶಿಯವರ ನಂಬಿಕೆಗೆ ಫಲ ಪ್ರಾಪ್ತಿ

Horoscope Today 10 November: ಇಂದು ಈ ರಾಶಿಯವರ ನಂಬಿಕೆಗೆ ಫಲ ಪ್ರಾಪ್ತಿ


Horoscope Today 10 November: ಇಂದು ಈ ರಾಶಿಯವರ ನಂಬಿಕೆಗೆ ಫಲ ಪ್ರಾಪ್ತಿ

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಕಾರ್ಯಕ್ರಮ : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ ಸೂರ್ಯ : ಪುನರ್ವಸು, ಯೋಗ : ಸಿದ್ಧ, ಕರಣ : ಭದ್ರ, ಸೂರ್ಯ –ೋದಯ 06 – 09 pm, 05 pm ಶುಭಾಶುಭ ಕಾಲ : ರಾಹು ಕಾಲ 07:44 – 09:10, ಗುಳಿಕ ಕಾಲ 13:30 – 14:56, ಯಮಗಂಡ ಕಾಲ 10:37 – 12:13.

ಮೇಷ ರಾಶಿ: ಅನಾರೋಗ್ಯದಿಂದ ಹೊರಬಂದಿದ್ದು ಏನನ್ನೋ ಗೆದ್ದಂತಹ ಅನುಭವ. ನಿಮ್ಮ ಹೇಳಿಕೆಯನ್ನು ಸುಳ್ಳುಮಾಡಬಹುದು. ನಿಮ್ಮ ಮೇಲೆ ಯಾವುದಾದರೊಂದು ವಿಷಯ, ವ್ಯಕ್ತಿಗಳ ಪ್ರಭಾವ ಬೀರಬಹುದು. ಇಂದಿನ ಕಾರ್ಯಸಾಧನೆಗೆ ಹೆಚ್ಚಿನ ತಿರುಗಾಟವು ಬರಬಹುದು. ಹಿತಶತ್ರಗಳು ನಿಮ್ಮನ್ನು ಸಿಕ್ಕಿಹಾಕಿಕೊಳ್ಳಬಹುದು. ಧಾರ್ಮಿಕ ಆಚರಣೆಯಿಂದ ಸಂಕಷ್ಟಗಳು ದೂರಾಗುವ ನಂಬಿಕೆ ಇರಲಿದೆ. ಕರ್ತವ್ಯಗಳನ್ನು ಮರೆಯುವ ಸಾಧ್ಯತೆಯಿದೆ. ಸರ್ಕಾರದ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವರಿ. ಮಾತಿನಿಂದ ನಿಮಗೆ ಕಷ್ಟವಾದೀತು. ಖರ್ಚಿನ ವಿಚಾರದಲ್ಲಿ ಗೊಂದಲವಾಗುತ್ತದೆ. ಪ್ರಾಮುಖ್ಯ ವಿಚಾರವನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದು ಕೋಪವು ಹೆಚ್ಚಾಗಬಹುದು. ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಮನಸ್ಸು ಬರುವುದು. ಸಂಗಾತಿಯನ್ನು ಪ್ರೀತಿಯಿಂದ ಗೆಲ್ಲಬೇಕಾದೀತು. ಅಧಿಕಾರಿಗಳ ಜೊತೆ ಯೋಜನೆ ವಿವರಗಳನ್ನು ಹಂಚಿಕೊಳ್ಳುವಿರಿ.

ವೃಷಭ ರಾಶಿ: ಪ್ರೀತಿಯನ್ನು ತೋರ್ಪಡಿಸುವ ರೀತಿ ಬೇರೆ ರೀತಿಯದ್ದು. ತೋರಿಕೆಯ ಪ್ರೀತಿ ನಿಮಗೆ ಹಿಂದಿರುಗಿ ಬರುತ್ತದೆ. ಯಾವುದನ್ನು ನಿಮ್ಮದೇ ಎಂದುಕೊಂಡಿದ್ದೀರೋ ಅದು ಉಳಿಯದು. ಅಧಿಕಾರಕ್ಕೆ ಸಂಬಂಧಿಸಿದಂತೆ ಮಿತ್ರನಿಂದ ನಿಮಗೆ ವಂಚನೆಯಾಗಿರುವುದು ಗೊತ್ತಾಗುತ್ತದೆ. ಕಳೆದಿದ್ದು ಸಣ್ಣ ವಸ್ತುವೇ ಆದರೂ ಬಹಳ ಬೇಸರಗೊಳ್ಳುವಿರಿ. ಮನೆಯ ಕೆಲಸದಲ್ಲಿ ಕಳೆಯುವಿರಿ. ನಿಮ್ಮ ಬೆಳವಣಿಗೆ ಸಾಮಾನ್ಯವಾಗಿರುತ್ತದೆ. ಮಕ್ಕಳಿಗೆ ಉದ್ಯೋಗ ಕೊಡಿಸಲು ಕೆಲವರನ್ನು ಭೇಟಿಯಾಗುವಿರಿ. ಅಧಿಕಾರವು ನೀವೇ ಸಾಕೆನಿಸುವಂತೆ ಮಾಡಲಿದೆ. ನಿರುದ್ಯೋಗದಿಂದ ಮನೆಯಲ್ಲಿ ಕುಳಿತು ಬೇಸರವಾಗುವುದು. ನಿಮ್ಮ ಬಗ್ಗೆ ಸಕಾರಾತ್ಮಕ ಮಾತುಗಳನ್ನು ಆಡುತ್ತಾರೆ. ಹಣದ ಹರಿವು ಇಂದು ಸಾಮಾನ್ಯವಾಗಿರುವುದು. ಸಂಗಾತಿಯ ಜೊತೆ ಸಣ್ಣ ವಾಗ್ವಾದವು ನಡೆಯಬಹುದು. ಸ್ವಂತಿಕೆಯನ್ನು ಬಿಟ್ಟು ಬೇಡುವುದು ಬೇಡ. ಸಹವಾಸದಿಂದ ನಿಮ್ಮ ಸ್ವಭಾವವು ಗೊತ್ತಾಗುವುದೇ ಬದಲಾಗುವುದು.

ಮಿಥುನ ರಾಶಿ: ಭೂಮಿಯ ಕಲಹವನ್ನು ಸಂಧಾನದಿಂದ ಮುಕ್ತಾಯ ವಸ್ತು. ನಿಮ್ಮನ್ನು ರಕ್ಷಿಸಲು ಬೇರೆ ತಂತ್ರಗಳನ್ನು ಮಾಡಿರಿ. ನಿಮ್ಮ ಮಾತನ್ನು ಯಾರೂ ಕೇಳುತ್ತಾರೆ ಎಂದು ಬೇಸರವಾಗುವುದು. ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು. ನಿಮ್ಮ ಜವಾಬ್ದಾರಿಯು ತಾನಾಗಿಯೇ ತಪ್ಪಬಹುದು. ಬಂಗಾರದ ಮೇಲೆ ಹೂಡಿಕೆ ಮಾಡುವಿರಿ. ತಾಯಿಯ ಕಡೆಯಿಂದ ನಿಮಗೆ ಬೇಕಾದ ಸಹಾಯವನ್ನು ನಿರೀಕ್ಷಿಸಬಹುದು. ಆತುರದ ಪ್ರಯಾಣವನ್ನು ಮಾಡುವುದು ಬೇಡ. ನಿಮಗೆ ಅನೇಕ ಕಡೆಗಳಿಂದ ಶಿಪಾರಸ್ಸು ಕರೆ ಬರಲಿದೆ. ಯಂತ್ರೋಪಕರಣಗಳ ಮಾರಾಟದಿಂದ ನಷ್ಟವಾಗುವ ಸಾಧ್ಯತೆಯಿದೆ. ಬಂದ ಅವಕಾಶಗಳನ್ನು ಕೈ ಬಿಡುವಿರಿ. ಮೇಲ್ನೋಟಕ್ಕೆ ಸರಿಕಂಡರೂ ನಿಮಗೆ ನಂಬಿಕೆ ಬರದು. ನಿಮ್ಮ ಮಾತಿಗೆ ಯಾರೂ ಬೆಲೆ ಕೊಡದೇ ಇರುವುದು ಬೇಸರವಾದೀತು. ಇಂದು ಯಾವ ಕಾರ್ಯಕ್ಕೂ ನಿಮಗೆ ಶ್ರದ್ಧೆಯು ಇಲ್ಲವಾಗುವುದು. ಮನೆಗೆ ಅತಿಥಿಗಳ ಆಗಮನ.

ಕರ್ಕಾಟಕ ರಾಶಿ: ಸಮಾರಂಭದ ತಯಾರಿಯಲ್ಲಿ ನೀವಿರುವಿರಿ. ನಿಮ್ಮನ್ನು ಯಾರಾದರೂ ಮಾತಿನಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಇಂದು ವೈಯಕ್ತಿಕ ಕಾರಣದಿಂದ ನಿಮ್ಮ ಉದ್ಯೋಗವನ್ನು ಬದಲಿಸಬೇಕು. ಅಪರಿಚಿತರ ಮಾತನ್ನು ನೀವು ನಂಬುವಿರಿ. ಪರೀಕ್ಷೆಯ ಸಿದ್ಧತೆಯಲ್ಲಿ ಗೊಂದಲವಿದೆ. ಬಂಧುಗಳ ವಿಯೋಗವೂ ಆಗಬಹುದು. ಒಪ್ಪಂದಕ್ಕೆ ಸರಿಯಾದ ತೀರ್ಮಾನ, ವಿಚಾರಣೆ ಮಾಡಿಕೊಳ್ಳಿ. ಆಮದು ವ್ಯವಹಾರವು ಇತರ ಅಸೂಯೆಗೆ ಕಾರಣ. ಸ್ನೇಹಿತರು ಕೇಳಿದರೂ ಸಹಾಯ ಮಾಡದೇ ಇರುವುದು ನಿಮಗೆ ಸಂದೇಹ ಬರುವುದು. ಪ್ರೇಮವು ನೀವಂದುಕೊಂಡಂತೆ ಮುಕ್ತಾಯವಾಗುವುದು ನಿಮಗೆ ಖುಷಿಕೊಡುವುದು. ಅಂದುಕೊಂಡಂತೆ ಆಗಿದ್ದಕ್ಕೆ ಸಂತೋಷವು ಇರಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಮುಸುಕಿನ ಗುದ್ದಾಟದಿಂದ ಮೈಕೈ ನೋವಾಗುವುದು ಅಷ್ಟೇ. ಲೋಭದಿಂದ ಇರುವ ಸಂಪತ್ತನ್ನೂ ಕಳೆದುಕೊಳ್ಳಬಹುದು. ನಿಮ್ಮ ಚಂಚಲ ಸ್ವಭಾವವು ತಾನಾಗಿಯೇ ಕಡಿಮೆ ಅಚ್ಚರಿ.

ಸಿಂಹ ರಾಶಿ: ಅನ್ವೇಷಕ ಬುದ್ಧಿಗೆ ಇಂದು ಯೋಗ್ಯವಾದ ಕೆಲಸವೇ ಸಿಗಲಿದೆ. ಕೃಷಿಯಲ್ಲಿ ನಿಮಗೆ ತಾಳ್ಮೆ ಅತ್ಯಂತ ಅವಶ್ಯಕ. ಪಾಲುದಾರಿಕೆಯ ಭಿನ್ನಾಭಿಪ್ರಾಯವನ್ನು ನೀವೇ ಮೊದಲು ಮಾತನಾಡಿ ಸರಿ ಮಾಡಿಕೊಂಡರೆ ಮುಂದುವರಿಯುತ್ತದೆ. ವಿವಿಧ ಮೂಲಗಳಿಂದ ನಿಮಗೆ ಆದಾಯ ಬರಲಿದೆ ಹೂಡಿಯ ಕಡೆ ನಿಮ್ಮ ಗಮನ ಇರುವುದು. ಪ್ರಭಾವಿಗಳ ಸಹಕಾರದಿಂದ ಉತ್ತಮ ಉದ್ಯೋಗ ದೊರೆಯುವುದು. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುತ್ತಾರೆ. ನಿಮ್ಮ ಹೂಡಿಕೆಯನ್ನು ಜಗಜ್ಜಾಹಿರ ಮಾಡಿಕೊಳ್ಳುವ ಸನ್ನಿವೇಶ ಬರಲಿದೆ. ನಿಮ್ಮ ಭಾವನೆಗಳನ್ನು ಇತರರ ಬಳಿ ಹೇಳುಕೊಳ್ಳುವಿರಿ. ಭೂಮಿಯಿಂದ ಇಂದು ಸಂಪತ್ತು ಸಿಗಬಹುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾದೀತು. ಯಾವುದನ್ನೇ ಆದರೂ ಚಿಂತಿಸಿ ಮಾತನಾಡಿ. ಹೊಸ ಮನೆಯನ್ನು ಕಟ್ಟುವ ಯೋಚನೆಯನ್ನು ಕಾರಣಾಂತರಗಳಿಂದ ನಿಲ್ಲಿಸುವಿರಿ.

ಕನ್ಯಾ ರಾಶಿ: ಆಹ್ವಾನವಿಲ್ಲದ ಕಡೆ ಅನಿರೀಕ್ಷಿತವಾಗಿ ಹೋಗುವಿರಿ. ಇಂದಿನ ಸಣ್ಣ ಕೆಲಸವನ್ನು ಮಾಡಲು ಅಧಿಕ ಸಮಯವನ್ನು ತೆಗೆದುಕೊಳ್ಳುವಿರಿ. ನಿಮ್ಮ ದೌರ್ಬಲ್ಯವು ಗೌರವವನ್ನು ಹರಣಮಾಡಬಹುದು. ದಾಂಪತ್ಯದಲ್ಲಿ ಸುಖವನ್ನು ಕಾಣುವಿರಿ. ತಂದೆ ತಾಯಿಯರ ಸೇವೆಯನ್ನು ಮಾಡುತ್ತಾರೆ. ಮನೆಯ ಕೆಲಸವು ಆಗಿಲ್ಲವೆಂದು ಕೋಪವು ಇರಲಿದೆ ಅದನ್ನು ಪ್ರಕಟಿಸುವಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಹೇಳಿಕೆಯನ್ನು ಸಹಿಸಿರಿ. ನಿಮ್ಮ ರಕ್ಷಣೆಯ ಬಗ್ಗೆ ಕಾಳಜಿ ಇರಲಿ. ನಿಮ್ಮ ಪ್ರಾಮಾಣಿಕತೆಯು ಇತರರಿಗೆ ಇಷ್ಟವಾಗುವುದು. ನಿಮ್ಮ ಹಿತಶತ್ರುಗಳಿಂದ ತೊಂದರೆ ಬರುವ ಸಾಧ್ಯತೆ ಇದ್ದು, ಅವರನ್ನು ಸರಿಮಾಡಿಕೊಳ್ಳಿ. ಶೀಘ್ರ ಹಣಸಂಪಾದನೆಗೆ ಸಲಹೆ ಪಡೆಯಿರಿ. ಉದ್ಯೋಗವನ್ನು ಕೊಡಿಸಲು ನಿಮಗೆ ಹಣವನ್ನು ಕೊಡಬಹುದು. ಸತ್ಯವನ್ನು ಹೇಳುವ ಮನಸ್ಸಿದ್ದರೂ ಬೇರೆಯವರ ಒತ್ತಡದಿಂದಾಗಿ ಹೇಳದೆ ಮುಚ್ಚಿಡುವಿರಿ. ಮಕ್ಕಳ ವಿವಾಹದಿಂದ ಚಿಂತೆ ದೂರವಾಗುವುದು. ಹಿರಿಯರ ನಂಬಿಕೆಯನ್ನು ಗಳಿಸಲು ಕಷ್ಟವಾಯಿತು. ಮನೆಯಿಂದ ಹೊರ ನಡೆಯುವ ಪ್ರಸಂಗವು ಬರಬಹುದು. .

ತುಲಾ ರಾಶಿ: ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅಪರಿಚಿತರ ಧನಸಹಾಯ ಸಿಗಲಿದೆ. ಅಂದುಕೊಂಡಷ್ಟು ವೇಗವಾಗಿ ಯಾವುದೂ ಆಗುವುದಿಲ್ಲ ಎಂಬುದು ಗೊತ್ತಿರಲಿ. ಇಂದು ಸಂಗಾತಿಯ ಜೊತೆಗಿನ ಬಾಂಧವ್ಯವನ್ನು ಗಟ್ಟಿ ಮಾಡಿಕೊಳ್ಳುವಿರಿ. ಬಹಳ ದಿನಗಳಿಂದ ಒತ್ತಡದಲ್ಲಿ ಇದ್ದ ಕಾರಣ ಇಂದು ಎಲ್ಲವನ್ನೂ ಮರೆಯುವ ದಿನದ ಹೆಚ್ಚಿನ ಸಮಯ ವಿಶ್ರಾಂತಿಯಲ್ಲಿಯೇ ಕಳೆಯಿರಿ. ನೀವು ನಿರಂತರ ಕಾರ್ಯವನ್ನು ಬದಲಿಸಿ ನಿಮ್ಮ ಅಭ್ಯಾಸವಾಗುವುದು. ದಾನದಿಂದ ಪುಣ್ಯವನ್ನು ಗಳಿಸುವಿರಿ. ನಿಮ್ಮ ಮಕ್ಕಳ ಮನೋಭಾವವನ್ನು ಅವರಿಗೆ ಇಷ್ಟವಾಗುವುದನ್ನು ಮಾಡಿರಿ. ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿರಲಿ. ಅಂತರವನ್ನು ಕಡಿದುಕೊಳ್ಳಲು ಪ್ರಯತರನಿಸುವಿರಿ. ಸ್ತ್ರೀಯರಿಂದ ಸಹಾಯ ಪಡೆದರೂ ನೋಡುಗರು ಅದನ್ನು ಅಪಾರ್ಥ ಮಾಡಿಕೊಳ್ಳಬಹುದು. ಭೇಟಿಯನ್ನು ಮಾಡಲು ಕಾದು ಸಮಯವನ್ನು ವ್ಯರ್ಥಮಾಡಿಕೊಳ್ಳುವಿರಿ. ತಾಳ್ಮೆಯಿಂದ ವರ್ತಿಸಲು ನಿಮ್ಮವರಿಂದ ಸಲಹೆ ಸಿಗುವುದು.

ವೃಶ್ಚಿಕ ರಾಶಿ: ಕೊನೆಯ ಕ್ಷಣದವರೆಗೂ ನಿಮ್ಮ ಹೋರಾಟ ಪ್ರಬಲವಾಗಿಯೇ ಇರುವುದು. ಸ್ವಯಂ ಪ್ರೇರಣೆಯಿಂದ ಉದ್ಯಮದಲ್ಲಿ ಹೊಸ ಬದಲಾವಣೆಗಳನ್ನು ತರುವಿರಿ. ಇಂದು ನಿಮಗೆ ಸಿಗುವ ಪ್ರೀತಿ ಹಂಚಿಕೆಯಾಗಿ ನಿಮಗೆ ಕಷ್ಟವಾಗುವುದು. ಆರ್ಥಿಕ ವಿಚಾರದಲ್ಲಿ ಸಲ್ಲದ ಅಪವಾದಗಳು ಬರಬಹುದು. ಆಪ್ತರನ್ನು ಅನಿರೀಕ್ಷಿತವಾಗಿ ಕಳೆದುಕೊಳ್ಳಬಹುದು. ಸಣ್ಣ ಪುಟ್ಟ ವಿಷಯಕ್ಕೆ ಸ್ನೇಹಿತರ ಜೊತೆಗಿನ ಸಂಬಂಧವು ಹಾಳಾಗಬಹುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡು ಕೈ ಬಿಡಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಮತ್ತು ಯೋಗ್ಯತೆಯನ್ನು ಕೊಡುವಿರಿ. ಆರ್ಥಿಕ ವಿಚಾರದಲ್ಲಿ ಸರಿಯಾದ ಹೊಂದಾಣಿಕೆ ಸಿಗದೇ ಕಷ್ಟವಾಗಬಹುದು. ವಿವಾಹೇತರ ಸಂಬಂಧದಿಂದ ನಿಮಗೆ ಬೇಸರವಾಗುವುದು. ದೂರದಲ್ಲಿರುವ ವ್ಯಕ್ತಿಗಳು ದೂರದಿಂದಷ್ಟೇ ಇರುವುದು ಉತ್ತಮ. ವ್ಯವಹಾರಕ್ಕೆ ಇಂದು ದೂರಪ್ರಯಾಣ ಮಾಡುವಿರಿ. ನಿಮ್ಮ ಮಾತಿನಿಂದ ಯಾವ ಲಾಭವೂ ಆಗದು ಎಂಬುದು ತಿಳಿಯುತ್ತದೆ. ಸ್ವಂತ ಉದ್ಯೋಗವನ್ನು ಮಾಡಬೇಕು ಎಂದು ಅನ್ನಿಸುವುದು. ನಿಮ್ಮನ್ನೇ ಒಮ್ಮೆ ನೋಡಿಕೊಳ್ಳಿ.

ಧನು ರಾಶಿ: ಹಲವು ಘಟನೆಗಳು ನಿಮ್ಮ ಅಂತಃಶಕ್ತಿಯನ್ನು ನಿಮಗೇ ತಿಳಿಸುತ್ತವೆ. ನಿಮ್ಮ ಖರೀದಿಗಳು ಆದಾಯವನ್ನು ಅವಲಂಬಿಸಿದೆ. ಇಂದು ನೀವು ಲಾಭವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಿದರೆ ನಿಮಗೆ ತೃಪ್ತಿಯಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಯಂತ್ರಗಳ ವಿಚಾರದಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಇರಲಿದೆ ವಿದ್ಯಾಭ್ಯಾಸಕ್ಕೆ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ಬಲವುಳ್ಳವರ ಬಳಿ ವಿರೋಧ ಬೇಡ. ಇಂದಿನ ನಿಮ್ಮ ಕೆಲಸವು ನಿಮಗೇ ಇಷ್ಟವಾಗದು. ಕೆಲವು ವಿಷಯಕ್ಕೆ ಕುಟುಂಬದಿಂದ ವಿರೋಧವಾಗಿದೆ. ಸ್ನೇಹಿತರ ಜೊತೆ ಸುತ್ತಾಟ ಮತ್ತು ಉತ್ತಮ ಭೋಜನವನ್ನು ಮಾಡುವಿರಿ. ನಿಮ್ಮದು ನಿಮಗೇ ಸಿಕ್ಕರೂ ಸಂತೃಪ್ತಿ ಇರದು. ಹಠದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಎಲ್ಲವನ್ನೂ ನಕಾರಾತ್ಮಕವಾಗಿಯೇ ನೋಡುವಿರಿ. ಸಂಗಾತಿಯ ಪ್ರೀತಿಯು ಕಡಿಮೆ ಆದೀತು. ಸ್ವಂತ ಕೆಲಸಕ್ಕೆ ಸಮಯವು ಸಿಗದೇ ಎಲ್ಲವನ್ನೂ ಉಳಿಸಿಕೊಳ್ಳಿ.

ಮಕರ ರಾಶಿ: ವಿಚಾರ ಮಂಡನೆಯನ್ನು ಎಂತಹವರೂ ಒಪ್ಪುವಂತೆ ಮಾಡುವಿರಿ. ತಾಂತ್ರಿಕತೆಯನ್ನು ಪಡೆದುಕೊಳ್ಳುವುದು ನಿಮಗೆ ಇಷ್ಟವಾದ ಸಂಗತಿ. ಇಂದು ನೀವು ಸಂಗಾತಿಯ ಮೇಲೆ ಕೋಪವನ್ನು ತೀರಿಸಿಕೊಂಡರೂ ಆ ಕಡೆಯಿಂದ ಯಾವ ಪ್ರತಿಕ್ರಿಯೆ ಬಾರದು. ಸಾಲವನ್ನು ಹಿಂಪಡೆಯಲು ಇಂದು ತಿರುಗಾಟ ಮಾಡುವಿರಿ. ಇತರರು ಕೊಡುವ ತೊಂದರೆಯಿಂದ ನೀವು ಬೇಸತ್ತುಹೋಗಬಹುದು. ಮೃದುತ್ವವನ್ನು ಕೆಲವು ಸಂದರ್ಭಗಳಲ್ಲಿ ಕಳೆದುಕೊಳ್ಳಬಹುದು. ಹೂಡಿಕೆ ಮಾಡಲು ಯಾರಿಂದಲಾದರೂ ಒತ್ತಡವು ಬರಬಹುದು. ಈ ದಿನವನ್ನು ಮನೆಯ ಕೆಲಸದ ಜೊತೆ ಕಳೆಯಿರಿ. ಎಂದೋ ಆಗಬೇಕಿದ್ದ ಕೆಲಸಗಳು ಇಂದು ಪೂರ್ಣವಾಗುವುದು. ನೀವೇ ಕೈ ಚೆಲ್ಲಿ ಕುಳಿತರೆ ಮತ್ತಿನ್ನಾರು ಗತಿ. ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ. ನಿಮ್ಮ ವ್ಯಕ್ತಿತ್ವದ ಪೂರ್ಣಪರಿಚಯವು ಆಗುವುದು. ಆತ್ಮವಂಚನೆಯೇ ನಿಮ್ಮನ್ನು ಬಹಳ ಕಾಡುವುದು. ಇಂದೂ ಕೂಡ ಮನೆಯಿಂದ ಕಛೇರಿಯ ಕೆಲಸ ಮಾಡುವಿರಿ. ಎಲ್ಲವೂ ಇದ್ದರೂ ಅದನ್ನು ಬಳಸುವ ಕಲೆಯೂ ಗೊತ್ತಿರಬೇಕಾಗುವುದು.

ಕುಂಭ ರಾಶಿ: ಪೂರ್ವ ಸಿದ್ಧತೆ ಮಾಡಿಕೊಳ್ಳದೇ ಸಾರ್ವಜನಿಕ ಸಮಾರಂಭಗಳಿಗೆ ಹೋಗುವುದು ಬೇಡ. ಸ್ವತಂತ್ರವಾಗಿ ಸಾಧಿಸುವ ಆಯ್ಕೆ ನಿಮ್ಮದಾಗಲಿದೆ. ಯಾರನ್ನೂ ನೀವು ಒಮ್ಮೆ ನಂಬುವುದು ಕಷ್ಟವಾದರೂ ಇಂದು ನಂಬಿಕೆ ಅನಿವಾರ್ಯ ಆದೀತು. ಮನೆಯನ್ನು ಬಿಟ್ಟು ಹೋಗಲು ಚೋರ ಭಯವು ಕಾಡಬಹುದು. ಸ್ನೇಹಿತರು ನಿಮ್ಮ ನಿರ್ಲಕ್ಷ್ಯದ ಕಾರಣದಿಂದ ದೂರವಾಗಬಹುದು. ಕೃತಜ್ಞತೆಯನ್ನೂ ತೋರುವಷ್ಟು ನಿಷ್ಕರುಣೆ ಇರುವುದು. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುತ್ತೀರಿ. ನಿಮ್ಮ ಕೈ ಸೇರಿದ್ದು ಮಾತ್ರ ನಿಮ್ಮದು ಎಂಬ ಭಾವವಿರಲಿ. ನಿಮ್ಮಲ್ಲಿ ಎಲ್ಲ ದಾಖಲೆಗಳೂ ಇರುವಂತೆ ಮಾಡಿಕೊಳ್ಳುವಿರಿ. ಬಾಯಾರಿಕೆಯು ಹೆಚ್ಚಾಯಿತು. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಇರಲಿದೆ ಇತರರಿಗೆ ಇದು ಅನಿರೀಕ್ಷಿತವೂ ಆಗಬಹುದು. ಪ್ರಣಯದಲ್ಲಿ ಇಂದು ಅತಿಯಾದ ಆಸಕ್ತಿಯು ಇರುವುದು. ಕುಟುಂಬವು ನಿಮ್ಮ ವಿವಾಹದ ಸಂತೋಷದಲ್ಲಿ ಇರಲಿದೆ. ಕೃತಜ್ಞತೆಯಿಂದ ನಿಮ್ಮ ವ್ಯವಹಾರವು ಇರಲಿ. ಸಂಪತ್ತಿಗಾಗಿ ನೀವು ಬಹಳ ಶ್ರಮಪಡುವಿರಿ. ಆರ್ಥಿಕತೆಯ ಅಭಿವೃದ್ಧಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುವುದು.

ಮೀನ ರಾಶಿ: ಮಕ್ಕಳ ವೈವಾಹಿಕ ಜೀವನದಿಂದ ನಿಮ್ಮ ಮನ ನೋಯುವುದು. ಜೀವನದಲ್ಲಿ ಯಾವ ಪಾತ್ರ ಅತಿಮುಖ್ಯ ಎಂದು ತಿಳಿಯಬಹುದು. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವಿರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರ ಸಿಗಬಹುದು. ಕೃಷಿಯ ಬಗ್ಗೆ ಸ್ವಲ್ಪ ಆಸಕ್ತಿ ಇರುವುದು. ಹಣಕ್ಕಾಗಿ ಯಾರನ್ನಾದರೂ ಕೇಳುವ ಸ್ಥಿತಿಯು ಬರಬಹುದು. ನಿಮ್ಮ ಸ್ಥಿರಮತಿಯಿಂದ ಕಷ್ಟದ ಸಂದರ್ಭವನ್ನು ಹಿಡಿತಕ್ಕೆ ತರುವಿರಿ. ಸಂಗಾತಿಗೆ ಉಡುಗೊರೆಯನ್ನು ನೀಡಿ ಕೋಪವನ್ನು ಕಡಿಮೆ ಮಾಡಿರಿ. ಹಿರಿಯರ ನೈತಿಕ ಬೆಂಬಲವು ಆತ್ಮವಿಶ್ವಾಸವನ್ನು ಹೆಚ್ಚು ಮಾಡುವುದು. ನಿಮ್ಮ ಕಾರ್ಯರೂಪಕ್ಕೆ ತರಲು ಬಯಸುವಿರಿ. ಇಂದು ಮೌನವಾಗಿರುವುದು ಹಿತವೆನಿಸುವುದು. ಇಂದು ನಿಮ್ಮ ಉತ್ಸಾಹಕ್ಕೆ ಯಾರಿಂದಲಾದರೂ ತೊಂದರೆಯಾಗಬಹುದು. ಆಪ್ತರ ಜೊತೆಗಿದ್ದು ವ್ಯವಹಾರದ ಚಾತುರ್ಯವನ್ನು ನೀವು ಇಂದು ಅರಿತುಕೊಳ್ಳುವಿರಿ. ನಿಮ್ಮ ವಸ್ತುವೇ ಆದರೂ ಅದರ ಮೇಲೆ ಅಧಿಕಾರ ಚಲಾಯಿಸಲಾಗದು.

ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *