ವೈರಲ್ ಆದ ವಿಡಿಯೋದಲ್ಲಿ ಕಾಣಿಸಿದ್ದ ದಿನಪತ್ರಿಕೆ
ಬೆಂಗಳೂರು, ನವೆಂಬರ್ 10: ಪರಪ್ಪನ ಅಗ್ರಹಾರ ಜೈಲಲ್ಲ (ಪರಪ್ಪನ ಅಗ್ರಹಾರ ಜೈಲು) ಐಷಾರಾಮಿ ರೆಸಾರ್ಟ್! ಐಸಿಸ್ ಉಗ್ರ ಜುಹಾದ್, ವಿಕೃತ ಕಾಮಿ ಉಮೇಶ್ ರೆಡ್ಡಿ, ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಜೈಲು ಸೇರಿದ ತೆಲುಗು ನಟ ತರುಣ್ ಇವರೆಲ್ಲ ಜೈಲಿನಲ್ಲಿ ಬಿಂದಾಸ್ ಆಗಿದ್ದಾರೆ. ಇವರು ಜಾಲಿ ಲೈಫ್ ಮಾಡುತ್ತಿರುವುದಕ್ಕೆ ಸಂಬಂಧಿಸಿದ ವೈರಲ್ ಆಗಿರುವ ವಿಡಿಯೋಗಳು ಸರ್ಕಾರವನ್ನೇ ನಡುಗಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಜೈಲು ಅಧಿಕಾರಿಗಳು, ಜೈಲಿನ ಎಲ್ಲಾ ಬ್ಯಾರಕ್‌ಗಳನ್ನು ಪರಿಶೀಲಿಸಿದ್ದಾರೆ. ನೂರಕ್ಕೂ ಹೆಚ್ಚು ಜೈಲಿನ ಸಿಬ್ಬಂದಿ ತಲಾಶ್ಗೂ. ಆದರೆ, ಯಾವುದೇ ರೀತಿಯ ವಸ್ತುಗಳು ಇಲ್ಲ.
ಜೈಲು ಸಿಬ್ಬಂದಿಯಿಂದಲೇ ದಾಳಿ ಮಾಹಿತಿ ಲೀಕ್?
ಕೆಲ ಸಿಬ್ಬಂದಿಯೇ ಜೈಲಧಿಕಾರಿಗಳ ದಾಳಿ ಬಗ್ಗೆ ಕೈದಿಗಳಿಗೆ ಮಾಹಿತಿ ಲೀಕ್ ಮಾಡಿದ್ದು, ಅವರೆಲ್ಲ ಎಚ್ಚೆತ್ತುಕೊಂಡಿದ್ದರು. ಹೀಗಾಗಿ ಹುಡುಕಿದರೂ ಏನು ಸಿಕ್ಕಿಲ್ಲ. ಅಷ್ಟೇ ಅಲ್ಲ, ವಿಡಿಯೋ ವೈರಲ್ ಆದ ಬಗ್ಗೆಯೂ ತನಿಖೆ ನಡೆಸಲಾಗಿದೆ, ಅವುಗಳೆಲ್ಲ 2023ರ ವಿಡಿಯೋ ಎಂದು ಡಿಐಜಿ ಆನಂದ್, ಎಡಿಜಿಪಿ ದಾನಂದ್ ಅವರಿಗೆ ಮಾಹಿತಿ ಲಭ್ಯವಾಗಿದೆ. ಆದರೆ, ವೈರಲ್ ಆದ ವಿಡಿಯೋಗಳು ಅಸಲಿಯತ್ತು ಬೇರೆಯೇ ಇದೆ.
2025 ರ ನವೆಂಬರ್ 6 ರ ವಿಡಿಯೋ!
ವಿಡಿಯೋದಲ್ಲಿ ಕಾಣಿಸಿರುವ ಪತ್ರಿಕೆಯ ಚಿತ್ರವು ವಿಡಿಯೋ ಯಾವ ವರ್ಷದ್ದು ಎಂಬುದಕ್ಕೆ ಸಾಕ್ಷಿಯಾಗಿದೆ. 2025 ರ ನವೆಂಬರ್ 6 ರ ನ್ಯೂಸ್ ಪೇಪರ್ ಶನಿವಾರ ವೈರಲ್ ಆದ ವಿಡಿಯೋದಲ್ಲಿ ಕಾಣಿಸಿದೆ. ಜೈಲಧಿಕಾರಿಗಳು ಇದನ್ನೂ ಗಮನಿಸದೇ 2023ರ ವಿಡಿಯೋ ಎಂದು ವರದಿಯಾಗಿದೆ!
ತರುಣ್ ಇದ್ದ ವಿಡಿಯೋದಲ್ಲಿ ನವೆಂಬರ್ ಕ್ಯಾಲೆಂಡರ್!

ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನದಲ್ಲಿರುವ ತರುಣ್ ಇರುವ ವಿಡಿಯೋದಲ್ಲಿ ಇದೇ ನವೆಂಬರ್ ತಿಂಗಳ ಕ್ಯಾಲೆಂಡರ್ ಕಾಣಿಸಿದೆ. ಹೀಗಾಗಿ ಈ ವಿಡಿಯೋ 2023ರದ್ದು ಎಂದು ಹೇಳಲು ಸಾಧ್ಯವೇ ಇಲ್ಲ. ಇಷ್ಟೇ ಅಲ್ಲ, ಕಳೆದ ಮಾರ್ಚ್ ತಿಂಗಳಲ್ಲಿ ತೆಲುಗು ನಟ ತರುಣ್ ಬಂಧನ ಆಗಿದ್ದರು. ತರುಣ್ ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದಾನೆ. ಟಿವಿ ನೋಡ್ತಿದ್ದಾನೆ. ಹೀಗಾಗಿ ಈ ವಿಡಿಯೋಗಳು ಈ ವರ್ಷದ್ದೇ. ಹೀಗಾಗಿ ಜೈಲಿನ ಕೆಲ ಸಿಬ್ಬಂದಿಯಿಂದಲೇ ಪಿತೂರಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ವಿಡಿಯೋ ಹಳೇದೇ ಆಗಲಿ, ಹೊಸದೇ ಆಗಲಿ ಇಂತಹ ಘಟನೆಗಳು ಈ ತಪ್ಪು. ಅತ್ತ ಸಿಎಂ ಸಿದ್ದರಾಮಯ್ಯ, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.
ನಿಷೇಧವಿದ್ರೂ ಮೊಬೈಲ್ ಬಳಕೆ, NCR ದಾಖಲು
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ಬಳಕೆ ನಿಷೇಧವಾದರೂ, ಮೊಬೈಲ್ ಬಳಸಿದ್ದಾರೆ, ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಇದರ ಬೆನ್ನಲ್ಲೇ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಪರಪ್ಪನ ಅಗ್ರಹಾರ ಜೈಲಿನ ಮುಂದೆ ಇಂದು ಬಿಜೆಪಿ ಪ್ರತಿಭಟನೆ
ಜೈಲಿನಲ್ಲಿ ಕೈದಿಗಳು ಮೊಬೈಲ್ ಮಾಡಿರೋದನ್ನ ಬಿಜೆಪಿ ಖಂಡಿಸಿದೆ. ಹೀಗಾಗಿ, ಇಂದು ಪರಪ್ಪನ ಅಗ್ರಹಾರ ಜೈಲಿನ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ವರದಿ: ವಿಕಾಸ್ ಮತ್ತು ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 7:28 am, ಸೋಮ, 10 ನವೆಂಬರ್ 25