ಬೆಂಗಳೂರು, ನವೆಂಬರ್ 10: ಬೆಂಗಳೂರು (ಬೆಂಗಳೂರು) ನಾಯಂಡಹಳ್ಳಿ ಜಂಕ್ಷನ್‌ನಿಂದ ಬನಶಂಕರಿ ಕಡೆಗೆ ಸಂಪರ್ಕ ಕಲ್ಪಿಸುವ ಹೊಸಕೆರೆಹಳ್ಳಿ ಫ್ಲೈ ಏರ್ (ಹೊಸಕೆರೆಹಳ್ಳಿ ಪಿಇಎಸ್ ಫ್ಲೈಓವರ್) ಕಾಮಗಾರಿ ಕೊನೆಗೂ ಮುಗಿಯುವ ಹಂತಕ್ಕೆ ಬಂದಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಹೊರ ವರ್ತುಲ ರಸ್ತೆಯ ಪಿಐಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿ 500 ಮೀಟರ್ ಮೇಲ್ಸೇತುವೆ ಕಾಮಗಾರಿಗೆ ಹಲವು ವಿಘ್ನಗಳು ಎದುರಾಗಿವೆ. ಶೇಕಡಾ 90ರಷ್ಟು ಕಾಮಗಾರಿ ಮುಗಿದಿದೆ, ಮುಂದಿನ ವಾರ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ. ಬಳಿಕ ಅಧಿಕೃತವಾಗಿ ಉದ್ಘಾಟನಾ ಕಾರ್ಯಕ್ರಮ.
ಅತಂತ್ರ ಸ್ಥಿತಿಗೆ ಜಾರಿದ ಆರ್ ಆರ್ ನಗರ ಫ್ಲೈ ಬೃಹತ್ ಕಾಮಗಾರಿ
ಹೊಸಕೆರೆಹಳ್ಳಿ ಫ್ಲೈ ಓಪನ್ ಕಾಮಗಾರಿ ಮುಗಿಯಿತು ಎಂಬ ಒಳ್ಳೆ ಸುದ್ದಿ ಒಂದೆಡೆಯಾದರೆ, ಸಮೀಪದಲ್ಲೇ ಇರುವ ಆರ್ ಆರ್ ನಗರ ಪ್ರವೇಶ ದ್ವಾರ ಬಳಿಯ ಫ್ಲೈಓವರ್ ಕಾಮಗಾರಿ ಕಳೆದ 2 ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲೇ ಇದೆ. ಮೈಸೂರು ರಸ್ತೆಯನ್ನು ಸಂಪರ್ಕಿಸಲು 2022 ರಲ್ಲಿ ಪ್ರಾರಂಭಿಸಲಾದ 71 ಕೋಟಿ ರೂ.ಗಳ 300 ಮೀಟರ್ ಉದ್ದದ ಯೋಜನೆಯು ಹಳ್ಳ ಹಿಡಿದಿದೆ. ಮೈಸೂರು ರಸ್ತೆ RR ನಗರ ಆರ್ಚ್ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶಕ್ಕೂ ಧಕ್ಕೆ ಉಂಟಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹಿತಾಸಕ್ತಿ ಕೊರತೆಯೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಬಿಂದಾಸ್ ಲೈಫ್: ಹಳೇ ವಿಡಿಯೋವೆಂದ ಜೈಲಾಧಿಕಾರಿಗಳು! ಹೊಸದೆನ್ನಲು ಇಲ್ಲಿವೆ ಸಾಕ್ಷ್ಯ
ಒಟ್ಟಾರೆಯಾಗಿ, ಬೆಂಗಳೂರು ಮಹಾನಗರ ಇತ್ತೀಚೆಗೆ ಟ್ರಾಫಿಕ್ ಜಾಮ್ ವಿಚಾರಕ್ಕೆ ಕುಖ್ಯಾತಿಗೆ ಗುರಿಯಾಗಿದೆ. ಹೀಗಾಗಿ ಫ್ಲೈ ಓವರ್ಗಳು ಟ್ರಾಫಿಕ್ ನಿವಾರಣೆಗೆ ಅನಿವಾರ್ಯವಾಗಿದೆ. ಹೊಸಕೆರೆಹಳ್ಳಿ ಶೀಘ್ರವೇ ವಾಹನ ಸವಾರರ ಬಳಕೆಗೆ ಅವಕಾಶ ನೀಡಬೇಕು ಎಂಬ ಆಗ್ರಹ ಒಂದೆಡೆಯಾದರೆ, ಆರ್‌ಆರ್ ನಗರ ಫ್ಲೈ ಬಸ್ ಕಾಮಗಾರಿಯ ಬಗ್ಗೆ ಗಮನ ಹರಿಸಿ ಎಂಬುದು ಜನರ ಒತ್ತಾಯವಾಗಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 8:03 am, ಸೋಮ, 10 ನವೆಂಬರ್ 25