
IPL 2026: ಇಂಡಿಯನ್ ಪ್ರೀಮಿಯರ್ 2026ರ ಮಿನಿ ಹರಾಜಿಗೂ ಮುನ್ನ ಸ್ವಾಪ್ ಡೀಲ್ ಕುದುರಿಸಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಸಜ್ಜಾಗಿದೆ. ಅದು ಸಹ ಸಂಜು ಸ್ಯಾಮ್ಸನ್ ಅವರ ಟ್ರೇಡಿಂಗ್ ಗಾಗಿ ಎಂಬುದು ವಿಶೇಷ.

ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಇಬ್ಬರು ಆಟಗಾರರನ್ನು ನೀಡಲು ನಿರ್ಧರಿಸಲಾಗಿದೆ. ಈ ಸ್ವಾಪ್ ಡೀಲ್ ಗೆ ಆರ್ ಆರ್ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೀಗಾಗಿ ಈ ಡೀಲ್ ಕುದುರಿಕೊಳ್ಳಲಿದೆ ಎಂದು ವರದಿಯಾಗಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಗಾಗಿ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ಬಿಟ್ಟು ಕೊಡಲು ನಿರ್ಧರಿಸಲಾಗಿದೆ. ಅತ್ತ ರಾಜಸ್ಥಾನ ರಾಯಲ್ಸ್ ರವೀಂದ್ರ ಜಡೇಜಾ ಜೊತೆ ಡೆವಾಲ್ಡ್ ಬ್ರೆವಿಸ್ ಅವರಿಗೆ ನೀಡುವಂತೆ ಕೋರಿಕೊಂಡಿತ್ತು.

ಇದಾಗ್ಯೂ ಸಿಎಸ್ಕೆ ಫ್ರಾಂಚೈಸಿಯು ತನ್ನ ನಿಲುವನ್ನು ಬದಲಿಸಿಲ್ಲ. ಬದಲಾಗಿ ಬ್ರೆವಿಸ್ ಸ್ಥಾನದಲ್ಲಿ ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರನ್ ಅವರನ್ನು ಬಿಟ್ಟು ಕೊಡುವುದಾಗಿದೆ. ಈ ಸ್ವಾಪ್ ಡೀಲ್ ಅನ್ನು ರಾಜಸ್ಥಾನ್ ರಾಯಲ್ಸ್ ಒಪ್ಪಿಕೊಳ್ಳುವ ಸಾಧ್ಯತೆಯಿದೆ, ಅದರಂತೆ ಶೀಘ್ರದಲ್ಲೇ ಆಟಗಾರರ ಬದಲಾವಣೆಯಾಗುವ ಸಾಧ್ಯತೆಯಿದೆ.

ಐಪಿಎಲ್ ಟ್ರೆಡ್ ನಿಯಮಗಳ ಪ್ರಕಾರ, ಈ ಸ್ವಾಪ್ ಡೀಲ್‌ಗಳಿಗೆ ಆಟಗಾರರ ಒಪ್ಪಿಗೆ ಕೂಡ ಮುಖ್ಯ. ಇದೀಗ ಸಿಎಸ್ಕೆ ಫ್ರಾಂಚೈಸಿ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಕಡೆಯಿಂದ ಸ್ವಾಪ್ ಡೀಲ್ ಒಪ್ಪಂದದ ಲಿಖಿತ ಒಪ್ಪಿಗೆಯನ್ನು ಎದುರು ನೋಡುತ್ತಿದೆ. ಇಬ್ಬರ ಕಡೆಯಿಂದ ಒಪ್ಪಿಗೆ ಬಂದರೆ ಜಡೇಜಾ ಹಾಗೂ ಕರನ್ ಅವರಿಗೆ ಚೆನ್ನೈ ನೀಡಿ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲಿದೆ.
ರಂದು ಪ್ರಕಟಿಸಲಾಗಿದೆ – 8:23 am, ಸೋಮ, 10 ನವೆಂಬರ್ 25