ಗಿಲ್ಲಿ ಇಲ್ಲದಿದ್ದರೆ ಈ ಸೀಸನ್ ಝೀರೋ; ಮಾಜಿ ಬಿಗ್ ಬಾಸ್ ಸ್ಪರ್ಧಿಯ ಮಾತು

ಗಿಲ್ಲಿ ಇಲ್ಲದಿದ್ದರೆ ಈ ಸೀಸನ್ ಝೀರೋ; ಮಾಜಿ ಬಿಗ್ ಬಾಸ್ ಸ್ಪರ್ಧಿಯ ಮಾತು


‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (ಬಿಬಿಕೆ 12) ಗಿಲ್ಲಿ ನಟ ಅವರು ಒಳ್ಳೆಯ ರೀತಿಯಲ್ಲಿ ಆಡುತ್ತಿದ್ದಾರೆ. ಅವರ ಆಟ ಗಮನ ಸೆಳೆಯುವ ರೀತಿಯಲ್ಲಿದೆ. ಗಿಲ್ಲಿ ನಟನ ಬಗ್ಗೆ ಎಲ್ಲ ಕಡೆ ಪಾಸಿಟಿವ್ ಮಾತು ಇದೆ. ಈಗ ಅವರ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ವಿಡಿಯೋದಲ್ಲಿ ಅವರು ಗಿಲ್ಲಿ ಇಲ್ಲದಿದ್ದರೆ ಈ ಸೀಸನ್ ಝೀರೋ ಎಂದು ಹೇಳಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿದ್ದಾರೆ.

ಗಿಲ್ಲಿ ನಟ ಅವರು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದವರು. ಆ ಬಳಿಕ ಅವರು ವಿವಿಧ ರಿಯಾಲಿಟಿ ಶೋಗಳಿಗೆ ಕಾಲಿಟ್ಟರು. ಪ್ರಾಪರ್ಟಿ ಕಾಮಿಡಿ ಮೂಲಕ ಎಲ್ಲರ ಗಮನ ಸೆಳೆದರು. ಈಗ ಬಿಗ್ ಬಾಸ್ ಮನೆಗೆ ಬಂದು ಆಡುತ್ತಿದ್ದಾರೆ. ಅವರು ಹೊರಗೆ ಅಪಾರ ಜನಪ್ರಿಯತೆ ಹೊಂದಿರುವುದನ್ನು ನೀವು ಕಾಣಬಹುದು. ಗಿಲ್ಲಿ ನಟನ ಬಗ್ಗೆ ಪ್ರಶಾಂತ್ ಸಂಬರ್ಗಿ ಮೆಚ್ಚುಗೆಯ ಮಾತನ್ನು ಆಡಿದ್ದಾರೆ.

ಪ್ರಶಾಂತ್ ಸಂಬರ್ಗಿ ಅವರು ಸಾಮಾಜಿಕ ಹೋರಾಟದ ಮೂಲಕ ಗುರುತಿಸಿಕೊಂಡರು. ಜೊತೆಗೆ, ಅವರು ಎರಡೆರಡು ಬಾರಿ ಬಿಗ್ ಬಾಸ್‌ಗೆ ಬಂದು ಗಮನ ಸೆಳೆದರು. ಅವರು ತಮ್ಮ ಮಾತುಗಳಿಂದ, ಜಗಳ ಮೂಲಕ ಬಿಗ್ ಬಾಸ್ ನಲ್ಲಿ ಗಮನ ಸೆಳೆದವರು. ಅವರು ಗಿಲ್ಲಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

‘ಬಿಗ್ ಬಾಸ್ 12 ನಡೀತಾ ಇದೆ. ನಾನು 8 ಮತ್ತು 9ರಲ್ಲಿ ನಾನಿದ್ದೆ. ಈ ಸೀಸನ್ ನಾನು ನೋಡುತ್ತಾ ಇದ್ದೇನೆ. ಫ್ಯಾಮಿಲಿಗೆ ಬೇಕಿರೋ ಎಂಟರ್ ಟೇನ್ಮೆಂಟ್ ಕೊಡ್ತಾ ಇರೋದು ಗಿಲ್ಲಿ. ಗಿಲ್ಲಿ ಇಲ್ದೆ ಇರೋ ಶೋ ಶೂನ್ಯ. ಅವನು ಇಲ್ದೆ ಹೋಗಿದ್ರೆ ಶೋ ಮುಚ್ಚಿ ಹೋಗಬೇಕಿತ್ತು. ಸಪೋರ್ಟಿಂಗ್ ಆಗಿ ಅಶ್ವಿನಿ ಮೊದಲಾದವರು ಇದ್ದಾರೆ. ಆದರೂ ಗಿಲ್ಲಿ ಬೆಸ್ಟ್. ಎಲ್ಲರಿಗೂ ಆಲ್ ದಿ ಬೆಸ್ಟ್’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಹೀಗೆ ಆದರೆ ಹೊರ ಹೋಗ್ತೀರಿ’; ಒಂದೇ ಎಪಿಸೋಡ್ ನಲ್ಲಿ ಗಿಲ್ಲಿಗೆ ಎರಡೆರಡು ಬಾರಿ ವಾರ್ನಿಂಗ್ ಕೊಟ್ಟ ಸುದೀಪ್

ಗಿಲ್ಲಿ ಅವರು ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ. ಮತ್ತಷ್ಟು ಬಾರಿ ಅವರು ಕಿಚ್ಚನ ಚಪ್ಪಾಳೆ ಪಡೆದುಕೊಳ್ಳುವ ಸಾಧ್ಯತೆಯಿದೆ. ಅವರ ಆಟ ಎಲ್ಲರಿಗೂ ಇಷ್ಟವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *