ಬೆಂಗಳೂರು, ನವೆಂಬರ್ 10: ಕಳೆದ 10-12 ದಿನಗಳಿಂದ 1150 ರೂ ಇಳಿಕೆಯಾಗಿದೆ ಚಿನ್ನದ ಬೆಲೆ (ಚಿನ್ನದ ದರ) ಇವತ್ತು ಸೋಮವಾರ ಒಂದೇ ದಿನ 110 ರೂ ಹೆಚ್ಚಿದೆ. ಬೆಳ್ಳಿ ಬೆಲೆಯೂ ಇಂದು ಹೈಜಂಪ್ ಆಗಿದೆ. 152.50 ರೂ ಇದ್ದ ಒಂದು ಗ್ರಾಮ್ ಬೆಳ್ಳಿ ಬೆಲೆ ಇವತ್ತು 155 ರೂಗೆ ಏರಿದೆ. ಭಾರತದಲ್ಲಿ ಮಾತ್ರ ಇಂದು ಈ ಏರಿಕೆ ಕಂಡು ಬಂದಿರುವುದು. ವಿದೇಶಗಳಲ್ಲಿ ಹೆಚ್ಚಿನ ಚಿನ್ನದ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,12,950 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,23,220 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 15,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,12,950 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 15,500 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,700 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 10ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,322 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,295 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,242 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 155 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,322 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,295 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 155 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 11,295 ರೂ
- ಬೆಲೆ: 11,410 ರೂ
- ಮುಂಬೈ: 11,295 ರೂ
- ದೆಹಲಿ: 11,310 ರೂ
- ಕೋಲ್ಕತಾ: 11,295 ರೂ
- ಕೇರಳ: 11,295 ರೂ
- ಅಹ್ಮದಾಬಾದ್: 11,300 ರೂ
- ಜೈಪುರ: 11,310 ರೂ
- ಲಕ್ನೋ: 11,310 ರೂ
- ಭುವನೇಶ್ವರ್: 11,295 ರೂ
ಇದನ್ನೂ ಓದಿ: ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಲ್ಲವಾ? ಸೆಬಿ ಹೇಳಿದ್ದೇನು? ಪರ್ಯಾಯಗಳೇನು?
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 528 ರಿಂಗಿಟ್ (11,237 ರೂಪಾಯಿ)
- ದುಬೈ: 446.25 ಡಿರಾಮ್ (10,772 ರೂಪಾಯಿ)
- ಅಮೆರಿಕ: 124.50 ಡಾಲರ್ (11,040 ರೂಪಾಯಿ)
- ಸಿಂಗಾಪುರ: 163.90 ಸಿಂಗಾಪುರ ಡಾಲರ್ (11,160 ರೂಪಾಯಿ)
- ಕತಾರ್: 446 ಕತಾರಿ ರಿಯಾಲ್ (10,851 ರೂ)
- ಸೌದಿ ಅರೇಬಿಯಾ: 454 ಸೌದಿ ರಿಯಾಲ್ (10,735 ರೂಪಾಯಿ)
- ಓಮನ್: 47.05 ಒಮಾನಿ ರಿಯಾಲ್ (10,837 ರೂಪಾಯಿ)
- ಕುವೇತ್: 36.61 ಕುವೇತಿ ದಿನಾರ್ (10,571 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 155 ರೂ
- ಬೆಲೆ: 167 ರೂ
- ಮುಂಬೈ: 155 ರೂ
- ದೆಹಲಿ: 155 ರೂ
- ಕೋಲ್ಕತಾ: 155 ರೂ
- ಕೇರಳ: 167 ರೂ
- ಅಹ್ಮದಾಬಾದ್: 155 ರೂ
- ಜೈಪುರ: 155 ರೂ
- ಲಕ್ನೋ: 155 ರೂ
- ಭುವನೇಶ್ವರ್: 167 ರೂ
- ಪುಣೆ: 155
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ