ಒಂದರರ್ಥದಲ್ಲಿ ಮೊಹಮ್ಮದ್ ಶಮಿ, ಬಿಸಿಸಿಗೆ ವಿರುದ್ಧವಾಗಿ ನೀಡುತ್ತಿರುವ ಬಹಿರಂಗ ಹೇಳಿಕೆಗಳು ಅವರ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೊಡಕಾಗಿವೆ. ಇದೆಲ್ಲದರ ನಡುವೆ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದ್ದು, ಶಮಿ ತಾವು ಮಾಡಿದ ಸ್ವಯಂಕೃತ ಅಪರಾಧದಿಂದಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಿಲ್ಲ. ವರದಿಗಳ ಪ್ರಕಾರ, ಶಮಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಲು ನಿರಾಕರಿಸಿದ್ದರು. ಶಮಿಯ ಈ ನಡೆಯಿಂದ ಕೋಪಗೊಂಡಿರುವ ಬಿಸಿ, ಆತನ ತಂಡದಿಂದ ಹೊರಗಿಟ್ಟಿದೆ ಎನ್ನುತ್ತಿದ್ದಾರೆ.